‘ಪೃಕ್ರತಿಯೆಡೆಗೆ ನಡಿಗೆ’ ಜಿಕೆವಿಕೆ ಕೃಷಿ ವಿವಿ ಇತಿಹಾಸದಲ್ಲೇ ಪ್ರಥಮ

| Published : Feb 12 2024, 01:30 AM IST

‘ಪೃಕ್ರತಿಯೆಡೆಗೆ ನಡಿಗೆ’ ಜಿಕೆವಿಕೆ ಕೃಷಿ ವಿವಿ ಇತಿಹಾಸದಲ್ಲೇ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಾಳದ ಜಿಕೆವಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಕೃತಿಯೆಡೆಗೆ ನಮ್ಮ ನಡಿಗೆ’ ವಾಕಥಾನ್‌ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ‘ಜಿಕೆವಿಕೆಯಲ್ಲಿ ಪ್ರಕೃತಿಯೆಡೆಗೆ ನಮ್ಮ ನಡಿಗೆ’ ವಾಕಥಾನ್‌ ಕಾರ್ಯಕ್ರಮ ದೇಶದ ಕೃಷಿ ವಿವಿಗಳ ಇತಿಹಾಸದಲ್ಲಿಯೇ ಪ್ರಥಮವಾಗಿದೆ ಎಂದು ವಿವಿ ಕುಲಪತಿ ಡಾ। ಎಸ್‌.ವಿ.ಸುರೇಶ್‌ ಬಣ್ಣಿಸಿದರು.

ಹೆಬ್ಬಾಳದ ಜಿಕೆವಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಕೃತಿಯೆಡೆಗೆ ನಮ್ಮ ನಡಿಗೆ’ ವಾಕಥಾನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರದ ಕೃಷಿ ವಿವಿಗಳ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮವನ್ನು ಮೊದಲಿಗೆ ಆಯೋಜಿಸಿದ್ದೇವೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ನಗರದ 125 ಸಾರ್ವಜನಿಕರು ವಾಕಥಾನ್‌ನಲ್ಲಿ ಪಾಲ್ಗೊಂಡಿರುವುದು ಇನ್ನಷ್ಟು ಉತ್ತೇಜನ ನೀಡಿದೆ. ಬೇಡಿಕೆ ಬಂದರೆ ಇಂತಹ ಇನ್ನಷ್ಟು ವಾಕಥಾನ್‌ ಆಯೋಜಿಸಲಾಗುವುದು ಎಂದರು.

ಕೃಷಿಯ ಮೌಲ್ಯವರ್ಧಿತ ಉತ್ಪನ್ನಗಳು, ಸಿರಿಧಾನ್ಯಗಳ ತಿಂಡಿ-ತಿನಿಸು, ಔಷಧೀಯ ಸಸ್ಯ, ಒಣ ಬೇಸಾಯ ಪದ್ಧತಿ, ವಿವಿಧ ಬಿತ್ತನೆ ಬೀಜ, ಮಣ್ಣುರಹಿತ ಕೃಷಿ, ಜೇನು ಸಾಕಣೆ, ಸಮಗ್ರ ಕೃಷಿ ಪದ್ಧತಿ ಮತ್ತಿತರ ವಿಷಯಗಳ ಬಗ್ಗೆ ವಾಕಥಾನ್‌ನಲ್ಲಿ ಅರಿವು ಮೂಡಿಸಲಾಗಿದೆ. ಇದರಿಂದ ಜ್ಞಾನಾರ್ಜನೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲೂ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಾಹ್ಯಾಕಾಶ ಕೇಂದ್ರದ ಎನ್‌.ಎಸ್‌.ಗೋವಿಂದರಾಜು, ವಿವಿ ವಿಸ್ತರಣಾ ನಿದೇಶಕ ಡಾ.ವಿ.ಎಲ್‌.ಮಧುಪ್ರಸಾದ್‌, ಹಿರಿಯ ವಾರ್ತಾ ತಜ್ಞ ಡಾ.ಕೆ.ಶಿವರಾಮು, ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ಸಿದ್ದಯ್ಯ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ.ರಾಮಪ್ರಸಾದ್‌ ಮತ್ತಿತರರು ಹಾಜರಿದ್ದರು.