1,259 ಅನಧಿಕೃತ ಫ್ಲೆಕ್ಸ್‌-ಬ್ಯಾನರ್‌ ತೆರವು: 12 ಎಫ್‌ಐಆರ್‌ ದಾಖಲು!

| Published : Jun 13 2024, 01:46 AM IST / Updated: Jun 13 2024, 09:30 AM IST

1,259 ಅನಧಿಕೃತ ಫ್ಲೆಕ್ಸ್‌-ಬ್ಯಾನರ್‌ ತೆರವು: 12 ಎಫ್‌ಐಆರ್‌ ದಾಖಲು!
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ತೆರವು ಕಾರ್ಯ ಆರಂಭಿಸಿರುವ ಬಿಬಿಎಂಪಿ, ಜೂನ್‌ 1ರಿಂದ ಈವರೆಗೆ 1,259 ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು, ಅವುಗಳನ್ನು ಅಳವಡಿಸಿದವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 12 ಎಫ್‌ಐಆರ್‌ ದಾಖಲಿಸಲಾಗಿದೆ.

  ಬೆಂಗಳೂರು :  ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ತೆರವು ಕಾರ್ಯ ಆರಂಭಿಸಿರುವ ಬಿಬಿಎಂಪಿ, ಜೂನ್‌ 1ರಿಂದ ಈವರೆಗೆ 1,259 ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು, ಅವುಗಳನ್ನು ಅಳವಡಿಸಿದವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 12 ಎಫ್‌ಐಆರ್‌ ದಾಖಲಿಸಲಾಗಿದೆ.

ಹೈಕೋರ್ಟ್‌ ಸೂಚನೆ ನಂತರವೂ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆ ಸ್ಥಗಿತಗೊಂಡಿರಲಿಲ್ಲ. ಜತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹಾಗೆಯೇ, ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ಕಂಡು ಬಂದರೆ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

ಸಚಿವರ ಎಚ್ಚರಿಕೆ ಪರಿಣಾಮ ಬಿಬಿಎಂಪಿ ಅಧಿಕಾರಿಗಳು ಇದೀಗ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ತೆರವು ಕಾರ್ಯಾಚರಣೆಗೆ ವೇಗ ನೀಡಿದ್ದಾರೆ. ಜೂ.1ರಿಂದ 12ರವರೆಗೆ 1,259 ಫ್ಲೆಕ್ಸ್‌, ಬ್ಯಾನರ್‌, ಎಲ್‌ಇಡಿ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಿ, ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 27 ದೂರುಗಳನ್ನು ದಾಖಲಿಸಲಾಗಿದೆ. ದೂರು ಆಧರಿಸಿ ಪೊಲೀಸರು 12 ಎಫ್‌ಐಆರ್‌ ದಾಖಲಿಸಿದ್ದಾರೆ.

ಬಿಬಿಎಂಪಿಗೆ ದೂರು ನೀಡಿ

ಸಾರ್ವಜನಿಕರು ಫ್ಲೆಕ್ಸ್‌, ಬ್ಯಾನರ್‌ಗಳ ವಿರುದ್ಧ ಬಿಬಿಎಂಪಿಗೆ ದೂರು ದಾಖಲಿಸಬಹುದು. ಜನರು ತಮಗೆ ಫ್ಲೆಕ್ಸ್‌, ಬ್ಯಾನರ್‌ ಕುರಿತಂತೆ 1533ಗೆ ಕರೆ ಮಾಡಿ ಅಥವಾ ಬಿಬಿಎಂಪಿ ಜಾಹೀರಾತು ವಿಭಾಗದ ವಾಟ್‌ಆ್ಯಪ್‌ ಸಂಖ್ಯೆ 94806 83939ಗೆ ಛಾಯಾಚಿತ್ರ ಅಥವಾ ವಿಡಿಯೋವನ್ನು ವಿಳಾಸ ಸಹಿತ ಕಳುಹಿಸಿ ದೂರು ನೀಡಬಹುದಾಗಿದೆ.

ಫ್ಲೆಕ್ಸ್‌, ಬ್ಯಾನರ್‌ ತೆರವಿನ ವಿವರ (ಜೂ. 1ರಿಂದ12ರವರೆಗೆ)

ವಲಯತೆರವುದೂರುಎಫ್‌ಐಆರ್‌ ದಾಖಲು

ಪೂರ್ವ2430000

ಪಶ್ಚಿಮ151500

ದಕ್ಷಿಣ860202

ರಾ.ರಾ.ನಗರ3830707

ದಾಸರಹಳ್ಳಿ840000

ಮಹದೇವಪುರ3360000

ಯಲಹಂಕ1050000

ಬೊಮ್ಮನಹಳ್ಳಿ070303

ಒಟ್ಟು1,2592712