ರಾಜ್ಯದಲ್ಲಿ ಬರಗಾಲವಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದಕ್ಕೋಸ್ಕರ ಕೊಡಗಿನ ಹಾರಂಗಿ ಜಲಾಶಯದಿಂದಲೂ ನೀರು ಹರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದಲ್ಲಿ ಬರಗಾಲವಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದಕ್ಕೋಸ್ಕರ ಕೊಡಗಿನ ಹಾರಂಗಿ ಜಲಾಶಯದಿಂದಲೂ ನೀರು ಹರಿಸಲಾಗುತ್ತಿದೆ.

ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 8.1 ಟಿಎಂಸಿ ನೀರು ಸಂಗ್ರಹವಾಗಿದ್ದು, 2859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯ, ಸದ್ಯ ಜಲಾಶಯದಲ್ಲಿ 2858 ಅಡಿ ನೀರು ಸಂಗ್ರಹವಾಗಿದ್ದು, 1825 ಕ್ಯೂಸೆಕ್ ನೀರು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ.

ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲೇ ತೀವ್ರ ಮಳೆಕೊರತೆ ಕಂಡುಬಂದಿದೆ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ 2099 ಮಿಲಿ ಮೀಟರ್ ಮಳೆ ಆಗಿತ್ತು.

ಆದರೆ ಈ ವರ್ಷ ಕೇವಲ 871 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ 1150 ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆ ಕೊರತೆಯಾಗಿದೆ. ಕೊಡಗಿನ ಬಹುತೇಕ ಭಾಗದಲ್ಲಿ ಮಳೆ ಇಲ್ಲ. ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಆಗಿದೆ. ಮಡಿಕೇರಿ, ಮುಕ್ಕೋಡ್ಲು ಹಾಗೂ ಹಮ್ಮಿಯಾಲ ಸೇರಿ ಕೆಲವೇ ಭಾಗದಲ್ಲಿ ಮಳೆ ಕೊರತೆಯುಂಟಾಗಿದೆ.

ಇದೇ ಮಳೆಯಿಂದ ಜಲಾಶಯಕ್ಕೆ 3221 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೂ ಜಲಾಶಯದಿಂದ 1822 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.