ಸಾರಾಂಶ
ತುರುವೇಕೆರೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸುಮಾರು ೧.೯೬ ಕೋಟಿಯಷ್ಟು ಲಾಭದಲ್ಲಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಎಚ್.ಎಲ್.ಮೂಡಲಗಿರಿಗೌಡ ತಿಳಿಸಿದ್ದಾರೆ. ಬ್ಯಾಂಕ್ ನ ೯೦ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ನ ವತಿಯಿಂದ ನೀಡಲಾಗಿರುವ ಸಾಲ ಸೌಲಭ್ಯವನ್ನು ಜಿಲ್ಲೆಯಲ್ಲೇ ಅತಿ ಹೆಚ್ಚು ರೈತಾಪಿಗಳು ಪಡೆದುಕೊಂಡಿದ್ದಾರೆ. ಅಲ್ಲದೇ ಸರ್ಕಾರ ನೀಡಿದ ಬಡ್ಡಿ ಮನ್ನಾ ಯೋಜನೆಯಲ್ಲೂ ಜಿಲ್ಲೆಯಲ್ಲೇ ಅತಿ ಹೆಚ್ಚು ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆಂದು ಅವರು ತಿಳಿಸಿದರು. ಮುಂಬರುವ ದಿನಗಳಲ್ಲಿ ಕಸಬಾ ಹೋಬಳಿ, ದಂಡಿನಶಿವರ ಹೋಬಳಿಯನ್ನು ಒಂದು ಮಾಡಿ, ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಯನ್ನು ಒಂದು ಮಾಡಿ ನಿರ್ದೇಶಕರ ಆಯ್ಕೆಯಾಗಲು ತಿದ್ದುಪಡಿ ತರಲಾಗಿದೆ. ಒಟ್ಟು ೧೩ ಕ್ಷೇತ್ರಗಳು ಸಾಲಗಾರರ ಕ್ಷೇತ್ರದಿಂದ ಇದ್ದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನವನ್ನು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಹಲವಾರು ಹಿರಿಯ ಸಹಕಾರಿ ಸದಸ್ಯರನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಟಿ.ರಾಜಮ್ಮ, ನಿರ್ದೇಶಕರಾದ ಜಿ.ಎಂ.ಪ್ರಸನ್ನಕುಮಾರ್, ಕೆ.ಎಂ.ನಾಗರಾಜು, ಟಿ.ಎಸ್.ಬೋರೇಗೌಡ, ಡಿ.ಕೆ.ಉಗ್ರೇಗೌಡ, ಕೆ.ಕೆಂಪರಾಜು, ಇ.ಶೇಖರಯ್ಯ, ಡಿ.ಯೋಗೀಶ್, ಆರ್.ಹೇಮಚಂದ್ರು, ವಿ.ಟಿ.ವೆಂಕಟರಾಮಯ್ಯ, ಇಂದ್ರಮ್ಮ, ಎಸ್.ಪ್ರಸನ್ನಕುಮಾರ್, ಎಂ.ಕೆ.ಕೆಂಪರಾಜು, ಪ್ರಭಾರ ವ್ಯವಸ್ಥಾಪಕಿ ಎಚ್.ಎಸ್.ಪಲ್ಲವಿ ಕಿರಿಯ ಕ್ಷೇತ್ರಾಧಿಕಾರಿಗಳಾದ ಎ.ಬಿ.ರಘುನಾಥ್, ಎಂ.ಸಿ.ದೇವರಾಜ ನಾಯ್ಕ ಸೇರಿದಂತೆ ಹಲವಾರು ಬ್ಯಾಂಕ್ ನ ಸಿಬ್ಬಂದಿ ಉಪಸ್ಥಿತರಿದ್ದರು.