ಹುಕ್ಕೇರಿ ಅರ್ಬನ್ ಬ್ಯಾಂಕಿಗೆ ₹ 1 ಕೋಟಿ 32 ಸಾವಿರ ಲಾಭ: ಜಯಗೌಡಾ ಪಾಟೀಲ

| Published : Sep 07 2024, 01:34 AM IST

ಹುಕ್ಕೇರಿ ಅರ್ಬನ್ ಬ್ಯಾಂಕಿಗೆ ₹ 1 ಕೋಟಿ 32 ಸಾವಿರ ಲಾಭ: ಜಯಗೌಡಾ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ: ದಿ.ಹುಕ್ಕೇರಿ ಅರ್ಬನ್ ಕೋ-ಆಪ್ ಲಿ., ಬ್ಯಾಂಕ 2023-24 ನೇ ಸಾಲಿನಲ್ಲಿ 1 ಕೋಟಿ 32 ಸಾವಿರ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಯಗೌಡಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಇಲ್ಲಿನ ದಿ.ಹುಕ್ಕೇರಿ ಅರ್ಬನ್ ಕೋ-ಆಪ್ ಲಿ., ಬ್ಯಾಂಕ 2023-24 ನೇ ಸಾಲಿನಲ್ಲಿ ₹ 1 ಕೋಟಿ 32 ಸಾವಿರ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಯಗೌಡಾ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ 96ನೇ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದರು. ನಿರ್ದೇಶಕ ವಿಜಯ ರವದಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಆಡಳಿತ ಮುಂದುವರಿಸಿ ಸದಸ್ಯರ, ಗ್ರಾಹಕರ ಸಹಕಾರದೊಂದಿಗೆ ಸಿಬ್ಬಂದಿಯ ಪರಿಶ್ರಮದಿಂದ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗಿದೆ. ಸದಸ್ಯರ ಹಿತಾಸಕ್ತಿಗೆ ಅಗತ್ಯತೆಗೆ ಅನುಗುಣವಾಗಿ ಸಾಲ ವಿತರಿಸಲಾಗಿದೆ. ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮತ್ತು ಬಡ್ಡಿ ಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಬೇಕು ಎಂದರು.

ಬ್ಯಾಂಕ ಪ್ರಭಾರ ಪ್ರಧಾನ ವ್ಯವಸ್ಥಾಪಕ ಕೆ.ಬಿ. ಬಂದಾಯಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ವಾಚಿಸಿದರು. ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ ಪ್ರೋತ್ಸಾಹಧನ ವಿತರಿಸಲಾಯಿತು.

ಬ್ಯಾಂಕ ಉಪಾಧ್ಯಕ್ಷೆ ಮಂಗಲಾ ಹಂದಿಗುಂದ, ನಿರ್ದೇಶಕರಾದ ಗುರುಲಿಂಗಪ್ಪ ಗಂಧ, ಚಂದ್ರಶೇಖರ ಪಾಟೀಲ, ವಿಜಯ ರವದಿ, ಶಿವಾನಂದ ನೂಲಿ, ಸಿದ್ದೇಶ್ವರ ಹೆದ್ದೂರಶೆಟ್ಟಿ, ಸೋಮಶೇಖರ ಪಟ್ಟಣಶೆಟ್ಟಿ, ಸುಭಾಷ ಪಾಟೀಲ, ಗೌರವ್ವ ನಾಯಿಕ, ರಾಜು ಬಾಗಲಕೋಟಿ, ರಾಜು ಗಸ್ತಿ, ಮೌನೇಶ್ವರ ಪೋತದಾರ, ಬಸವಣ್ಣಿ ಮಗದುಮ್ಮ, ಗಿರೀಶ ನಡದಗಲ್ಲಿ, ಶ್ರೀಶೈಲ ಹುಂಡೇಕರ ಮತ್ತಿತರರು ಉಪಸ್ಥಿತರಿದ್ದರು.

ಕೆಲ ಬ್ಯಾಂಕಿನ ಸದಸ್ಯರು ಆಡಳಿತ ಮಂಡಳಿಯವರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಬಸವರಾಜ ಗುಳ್ಳ, ಅನೀಲ ಮುನ್ನೋಳ್ಳಿ, ರವೀಂದ್ರ ಬಾಳಿಕಾಯಿ, ನೀತಾ ಸರದಾರ, ಲೆಕ್ಕಾಧಿಕಾರಿ ಪ್ರೇಮಾ ರಾಜನ್ನವರ ಮತ್ತು ಸಿಬ್ಬಂದಿಗಳು ಸದಸ್ಯರು, ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು