ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ ಲೀ. ಹಾಲು ಉತ್ಪಾದನೆ

| Published : Jun 02 2024, 01:47 AM IST / Updated: Jun 02 2024, 08:04 AM IST

ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ ಲೀ. ಹಾಲು ಉತ್ಪಾದನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಹಾಲು ಉತ್ಪಾದನೆ ಹೆಚ್ಚಾದಾಗ ವಾರದಲ್ಲಿ ಒಂದು ದಿನ ರಜೆ ಘೋಷಣೆ ಮಾಡಲಾಗುತ್ತಿತ್ತು. ಆದರೆ ಈಗ ರೈತರು ಎಷ್ಟೇ ಹಾಲು ಉತ್ಫಾದಿಸಿದರೂ ಅವುಗಳನ್ನು ಸಂಗ್ರಹಿಸುವ ಸಾಮಾರ್ಥ್ಯ ನಮ್ಮ ಹಾಲು ಒಕ್ಕೂಟಕ್ಕೆ ಇದೆ

 ಮಾಲೂರು :  ರಾಜ್ಯದ ರೈತರ ಶ್ರಮ, ಸರ್ಕಾರದ ಸಹಕಾರದಿಂದ ಕರ್ನಾಟಕದಲ್ಲಿ ಪ್ರತಿನಿತ್ಯ ಒಂದು ಕೋಟಿ ಲೀ ಹಾಲು ಉತ್ಪಾದನೆ ಯಾಗುತ್ತಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಇಲ್ಲಿನ ಸರ್ಕಾರಿ ಆಸ್ವತ್ರೆ ಅವರಣದಲ್ಲಿ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ರೋಗಿಗಳಿಗೆ ನಂದಿನಿ ಟ್ರೇಟಾ ಹಾಲು ಪ್ಯಾಕೆಟ್ ವಿತರಿಸಿ ಮಾತನಾಡಿ, ಈ ಹಿಂದೆ ಹಾಲು ಉತ್ಪಾದನೆ ಹೆಚ್ಚಾದಾಗ ವಾರದಲ್ಲಿ ಒಂದು ದಿನ ರಜೆ ಘೋಷಣೆ ಮಾಡಲಾಗುತ್ತಿತ್ತು. ಈಗ ಹಾಲಿನ ವಿವಿಧ ಉಪ ಉತ್ಪನ್ನ ತಯಾರು ಮಾಡುವ ಜತೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿರುವುದರಿಂದ ರೈತರು ಎಷ್ಟೇ ಹಾಲು ಉತ್ಫಾದಿಸಿದರೂ ಅವುಗಳನ್ನು ಸಂಗ್ರಹಿಸುವ ಸಾಮಾರ್ಥ್ಯ ನಮ್ಮ ಹಾಲು ಒಕ್ಕೂಟಕ್ಕೆ ಇದೆ ಎಂದರು.

ವಿಶ್ವ ಮಾರುಕಟ್ಟೆಗೆ ನಂದಿನಿ

ಹೈನುಗಾರಿಕೆಯ ಪಿತಾಮಹ, ದಿವಂಗತ ಮಾಜಿ ಸಂಸದ ಎಂ.ವಿ.ಕೃಷ್ಣಪ್ಪ ಅವರ ಜನ್ಮದಿನವನ್ನು ವಿಶ್ವ ಹಾಲು ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಅವರ ಆಶಯದಂತೆ ಹೈನುಗಾರಿಕೆ ವಿವಿಧ ಸವಲತ್ತುಗಳ ಮೂಲಕ ಉತ್ತೇಜನ ನೀಡುತ್ತಿರುವ ನಮ್ಮ ಹಾಲು ಒಕ್ಕೂಟವು ವಿಶ್ವ ಮಾರುಕಟ್ಟೆ ಪ್ರವೇಶಿಸಿರುವ ಖ್ಯಾತಿ ಗಳಿಸಿದೆ ಎಂದರು.

ಪ್ರತಿ ನಿತ್ಯ ೧೨ ಲಕ್ಷ ಲೀ.ಹಾಲು ಸಂಗ್ರಹಣೆ ಮಾಡುತ್ತಿರುವ ಜಿಲ್ಲಾ ಹಾಲು ಒಕ್ಕೂಟವು ಬಂದ ಲಾಭಂಶದಲ್ಲಿ ಶೇಕಡಾವಾರು ಹಣವನ್ನು ಹೈನುಗಾರಿಕೆ ಅಭಿವೃದ್ಧಿಗೆ ಹಾಗೂ ರೈತ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುತ್ತಿದೆ. ಹೈನುಗಾರಿಕೆ ಅಭಿವೃದ್ಧಿಗೊಳ್ಳಬೇಕಾದರೆ ಸರ್ಕಾರ ನೀಡುತ್ತಿರುವ ಲೀಟರ್ ಗೆ ೫ ರು.ಪ್ರೋತ್ಸಾಹ ಧನ ಸಹ ಕಾರಣ ಎಂದರು.

ಸೌಲಭ್ಯ ಬಳಸಿ ಉತ್ಪಾದನೆ ಹೆಚ್ಚಿಸಿ

ತಾಯಿಯ ಹಾಲಿನ ನಂತರ ಹೆಚ್ಚು ಪೌಷಿಕಾಂಶವುಳ್ಳ ಹಾಲು ಎಂದರೆ ಗೋವಿನ ಹಾಲು. ಎಲ್ಲರೂ ನಿತ್ಯ ಹಾಲು ಸೇವನೆ ಮಾಡಿ, ಉತ್ತಮ ಗುಣಮಟ್ಟ ಹೊಂದಿರುವ ನಂದಿನಿ ಹಾಲು ಉತ್ಪನ್ನಗಳನ್ನೇ ಉಪಯೋಗಿಸಿ. ಸರ್ಕಾರ, ಒಕ್ಕೂಟಗಳು ನೀಡುವ ಸವಲತ್ತುಗಳನ್ನು ಬಳಸಿಕೊಂಡು ಹಾಲು ಉತ್ಪಾದಕ ಸಹಕಾರ ಸಂಘಗಳು ಹೆಚ್ಚಿನ ಹಾಲನ್ನು ಉತ್ಪಾದನೆ ಮಾಡಲು ಹಾಲು ಉತ್ಪಾದಕ ಸಂಘಗಳು ಹಾಲು ಉತ್ಪಾದಕರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು.ಇದೇ ಸಂದರ್ಭದಲ್ಲಿ ರೋಗಿಗಳಿಗೆ ಟ್ರೇಟಾ ಹಾಲಿನ ಪ್ಯಾಕೇಟ್ ವಿತರಿಸಲಾಯಿತು. ಆಸ್ವತ್ರೆ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್,ಡಾ.ಶ್ರೀನಿವಾಸ್ , ಅಂಜನಿ ಸೋಮಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷಿನಾರಾಯಣ, ಕೋಚಿಮುಲ್ ನಿದೇರ್ಶಕಿ ಕಾಂತಮ್ಮ ಸೋಮಣ್ಣ, ಚಂದ್ರ, ದೇವರಾಜು, ಪುರಸಭೆ ಸದಸ್ಯ ಮುರಳಿಧರ್, ಕಾರ್ಮಿಕ ರಾಜಪ್ಪ, ಇನ್ಸ್‌ಪೆಕ್ಟರ್ ವಸಂತ್ ಕುಮಾರ್, ದಿನೇಶ್ ಗೌಡ, ಬೋರ್ ಕೋಮುಲ್ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಚೇತನ್, ಕೋಮುಲ್ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಶಿವಕುಮಾರ್, ಕರಿಯಪ್ಪ, ಉಲ್ಲೂರಪ್ಪ, ವೆಂಕಟೇಶ್, ವಕೀಲ ರಮೇಶ್, ನಾಗಪ್ಪ ಇನ್ನಿತರರು ಇದ್ದರು.