ಸಾರಾಂಶ
ಸೂಲಿಬೆಲೆ: ಪ್ರಸಕ್ತ ಸಾಲಿನಲ್ಲಿ ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್ ೧ ಕೋಟಿ ಲಾಭಾಂಶ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.
ಸೂಲಿಬೆಲೆ: ಪ್ರಸಕ್ತ ಸಾಲಿನಲ್ಲಿ ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್ ೧ ಕೋಟಿ ಲಾಭಾಂಶ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.
ಸೂಲಿಬೆಲೆ ಸಹಕಾರ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ದಸರಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಶ್ಚಿತ ಠೇವಣಿ, ಪಿಗ್ಮಿ ಠೇವಣಿ, ಉಳಿತಾಯ ಖಾತೆಗಳ ವ್ಯವಹಾರ ವಹಿವಾಟು ವೃದ್ಧಿಯಾಗಿದೆ. ಕೆಸಿಸಿ ಸಾಲ, ಆಭರಣ ಸಾಲ, ವ್ಯಾಪಾರ ಸಾಲ ಹಾಗೂ ವೇತನ ಸಾಲದ ಜೊತೆಯಲಿ ಠೇವಣಿ ಆಧಾರದ ಮೇಲೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸ್ತ್ರೀಶಕ್ತಿ ಸಬಲೀಕರಣಕ್ಕೆ ಹೆಚ್ಚು ಸಾಲ ನೀಡಲಾಗಿದೆ ಎಂದರು.ಬ್ಯಾಂಕಿನ ಸಿಇಒ ಎ.ಎಂ.ಶ್ರೀನಿವಾಸಮೂರ್ತಿ ಮಾತನಾಡಿ, ಬ್ಯಾಂಕಿನ ಹೂಡಿಕೆಗಳು ಗಣನೀಯವಾಗಿ ಹೆಚ್ಚಳವಾಗಿವೆ. ಪ್ರಸಕ್ತ ಸಾಲಿನಲ್ಲಿ ೮.೬೪ ಕೋಟಿ ಹೂಡಿಕೆಯಲ್ಲಿ ತೊಡಗಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಹಾಗೂ ರೈತರ ಅನುಕೂಲಕ್ಕಾಗಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಲಾಭಾಂಶದ ಶೇ. ೫ರಷ್ಟು ಹಣ ಷೇರುದಾರರಿಗೆ ಉಡುಗೊರೆ ರೂಪದಲ್ಲಿ ನೀಡಲಾಗಿದೆ. ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಗುಳ್ಳಹಳ್ಳಿ ಮುನಿಯಪ್ಪ, ಮೇಲ್ವಿಚಾರಕ ವಸಂತಕುಮಾರ್, ಲೆಕ್ಕಿಗ ನಾಗೇಶ್, ನಿರ್ದೇಶಕರಾದ ನಂಜಮ್ಮ, ವಿಜಯಲಕ್ಷ್ಮೀ, ಮುನಿರಾಜು, ನಾರಾಯಣಸ್ವಾಮಿ, ಮುತ್ತುರಾಜು, ಪಿಳ್ಳೇಗೌಡ, ಬುವನಹಳ್ಳಿನಾರಾಯಣಸ್ವಾಮಿ, ಚನ್ನಿಗಲಾಪುರ ನಾರಾಯಣಸ್ವಾಮಿ, ಸೈಯದ್ ಮಹಬೂಬ್ ಇತರರಿದ್ದರು.(ಫೋಟೋ ಕ್ಯಾಫ್ಷನ್)
ಸೂಲಿಬೆಲೆ ಸಹಕಾರ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ ದಸರಾ ಹಬ್ಬದಲ್ಲಿ ಬ್ಯಾಂಕಿನ ಅಧ್ಯಕ್ಷ ಬಿ.ವಿ.ಸತೀಶಗೌಡ, ಉಪಾಧ್ಯಕ್ಷ ಮುನಿಯಪ್ಪ, ಸಿಇಒ ಶ್ರೀನಿವಾಸಮೂರ್ತಿ, ಮೇಲ್ಚಿಚಾರಕ ವಸಂತಕುಮಾರ್, ನಾಗೆಶ್ ಇತರರು ಪಾಲ್ಗೊಂಡಿದ್ದರು.