1 ಕೋಟಿ ರು. ಮೌಲ್ಯದ ರಕ್ತಚಂದನ ವಶ

| Published : Jul 24 2024, 12:24 AM IST

ಸಾರಾಂಶ

ಆಂಧ್ರಪ್ರದೇಶದಿಂದ ತುಮಕೂರಿಗೆ ಸಾಗಿಸುತ್ತಿದ್ದ ಭರ್ತಿ ಒಂದು ಕೋಟಿ ರು. ಮೌಲ್ಯದ ರಕ್ತಚಂದನ ತುಂಡುಗಳನ್ನು ಅರಣ್ಯ ಇಲಾಖೆ ವಶ

ತುಮಕೂರು: ಆಂಧ್ರಪ್ರದೇಶದಿಂದ ತುಮಕೂರಿಗೆ ಸಾಗಿಸುತ್ತಿದ್ದ ಭರ್ತಿ ಒಂದು ಕೋಟಿ ರು. ಮೌಲ್ಯದ ರಕ್ತಚಂದನ ತುಂಡುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದಾರೆ. ನಗರದ ಹಿರೇಹಳ್ಳಿ ಇಂಡಸ್ಟ್ರೀಯಲ್ ಏರಿಯಾ ಬಳಿ ಅರಣ್ಯ ಇಲಾಖೆಯ ಕೇಶವಮೂರ್ತಿ ವಾಹನ ತಡೆದು ತಪಾಸಣೆ ಮಾಡುವಾಗ ರಕ್ತ ಚಂದನ ಇರುವುದು ಪತ್ತೆಯಾಗಿದೆ. ತಕ್ಷಣ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೊಬ್ಬ ಪರಾರಿಯಾಗಿದ್ದಾರೆ. ಆದರೆ ಚಾಲಕ ಇಬ್ರಾಹಿಂ ಓಡಲಾಗದೆ ಚರಂಡಿಯಲ್ಲಿ ಅವಿತುಕೊಂಡ ವೇಳೆ ಆತನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಆಗಮಿಸಿದ ಎಸಿಎಫ್ ಮಹೇಶ್ ಮಾಲಗತ್ತಿ, ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.