ಬೌದ್ಧ ಸಾಂಸ್ಕೃತಿಕ ಭವನಕ್ಕೆ ₹10 ಕೋಟಿ

| Published : Nov 18 2025, 12:45 AM IST

ಸಾರಾಂಶ

ಬೌದ್ಧ ಸಾಂಸ್ಕತಿಕ ಭವನವನ್ನು ತಾಲೂಕಿನ ಆಣದೂರಿನಲ್ಲಿ ನಿರ್ಮಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹10 ಕೋಟಿ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಬೌದ್ಧ ಸಾಂಸ್ಕತಿಕ ಭವನವನ್ನು ತಾಲೂಕಿನ ಆಣದೂರಿನಲ್ಲಿ ನಿರ್ಮಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹10 ಕೋಟಿ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ತಾಲೂಕಿನ ಆಣದೂರಿನ ಬೌದ್ಧ ವಿಹಾರದಲ್ಲಿ ಭಾನುವಾರ ಸಂಜೆ ನಡೆದ ಬೌದ್ಧ ಸಮ್ಮೇಳನ ಹಾಗೂ ಆನಂದ ಬೋಧಿ ಬೌದ್ಧ ಮಹಾ ಸ್ತೂಪದ 12ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೊಂದಿಗೆ ಚರ್ಚಿಸಿ ಕಲಬುರಗಿ ಅಥವಾ ಉದಗಿರ ಮಾದರಿಯಲ್ಲಿ ಭವನ ನಿರ್ಮಾಣ ಮಾಡಲಾಗುವುದು. ಬೌದ್ಧ ವಿಹಾರದ ಅಭಿವೃದ್ಧಿಗೆ ಸಾಧ್ಯವಾದ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಗೌತಮ ಬುದ್ಧರ ತತ್ವಗಳ ಪಾಲನೆಯಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಭಂತೆ ಧಮ್ಮಾನಂದ, ಭಂತೆ ಜ್ಞಾನಸಾಗರ್, ಭಂತೆ ಸಂಘ ರಖ್ಖಿತ, ಭಂತೆ ಜ್ಞಾನಪ್ರಕಾಶ್ ಉಪಸ್ಥಿತರಿದ್ದರು.