ಗಂಗಾ ದೇವಸ್ಥಾನದಲ್ಲಿ ವೈಷ್ಣವಿ ಗಂಗಾ ಮಾತೆ ಪೂರ್ಣಕುಂಭವನ್ನು ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬಾಗಲಕೋಟೆಯಿಂದ ಆಗಮಿಸಿರುವ ಪರಮರೂಢ ಸ್ವಾಮೀಜಿ ಅವರಿಗೆ ರುದ್ರಾಕ್ಷಿ ಕಿರೀಟವನ್ನು ಧರಿಸಿ ವಿವಿಧ ರೀತಿಯ ಹೂವಿನ ಹಾರಹಾಕಿ ಪಾದಪೂಜೆ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಗಂಗೆ ಭೂಮಿಗೆ ಇಳಿದು ಬಂದ ದಿನವನ್ನು ವಿಶೇಷವಾಗಿ ಆಚರಿಸುವ ಗಂಗಾ ಜಯಂತಿ ಉತ್ಸವಕ್ಕೆ ಮಠಾಧಿಪತಿ ಪರಮರೂಢ ಸ್ವಾಮೀಜಿ ಅವರ ಪಾದ ಪೂಜೆ ಮಾಡುವ ಮೂಲಕ ಹತ್ತು ದಿನ ನಡೆಯುವ ಉತ್ಸವಕ್ಕೆ ಚಾಲನೆ ನೀಡಲಾಯಿತು.ವೈಷ್ಣವಿ ಗಂಗೆಯನ್ನು ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು. ಗಂಗಾ ಜಯಂತಿ ಮೊದಲ ದಿನ ಗಂಗಾಮತ ಬೀದಿ ರಾಜಪ್ಪನ ಕೇರಿಯ ಯೋಗೇಶ್, ನಂಜುಂಡಯ್ಯ ಹಾಗೂ ಮೇಗಲ ಕೇರಿಯ ಯಜಮಾನ್ ವಸಂತ್, ಪ್ರಭು ನೇತೃತ್ವದಲ್ಲಿ ಮಹಿಳೆಯರು ಮಂಗಳವಾದ್ಯದೊಂದಿಗೆ ಕಲ್ಯಾಣಿಯಿಂದ ವೈಷ್ಣವಿ ಗಂಗಾ ಮಾತೆಯ ಪೂರ್ಣಕುಂಭ ಹೊತ್ತು ಬಂದ ಮೆರವಣಿಗೆ ಗಮನ ಸೆಳೆಯಿತು.ಗಂಗಾ ದೇವಸ್ಥಾನದಲ್ಲಿ ವೈಷ್ಣವಿ ಗಂಗಾ ಮಾತೆ ಪೂರ್ಣಕುಂಭವನ್ನು ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬಾಗಲಕೋಟೆಯಿಂದ ಆಗಮಿಸಿರುವ ಪರಮರೂಢ ಸ್ವಾಮೀಜಿ ಅವರಿಗೆ ರುದ್ರಾಕ್ಷಿ ಕಿರೀಟವನ್ನು ಧರಿಸಿ ವಿವಿಧ ರೀತಿಯ ಹೂವಿನ ಹಾರಹಾಕಿ ಪಾದಪೂಜೆ ನೆರವೇರಿಸಲಾಯಿತು.
ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗಂಗಾಮಾತೆಗೆ ಪೂಜೆ ಸಲ್ಲಿಸಿ ಪರಮರೂಢ ಸ್ವಾಮೀಜಿ ಅವರಿಂದ ಅಶೀರ್ವಾದ ಪಡೆದರು. ಪೂಜಾ ಕೈಂಕರ್ಯದಲ್ಲಿ ನಿರಂತರವಾಗಿ ಭಜನೆ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.ಜೂನ್ 17ರಂದು ಅಂಬಿಗರ ಚೌಡಯ್ಯಮ ಕೇರಿಯವರಿಂದ ಬ್ರಾಹ್ಮಿಗಂಗೆ, ಜೂ.18ರಂದು ವೆಂಕಟಚಲಪತಿ ಕೇರಿಯಿಂದ ಶ್ರೀ ಉಂತ್ತೂರಮ್ಮನ ಕೇರಿಯಿಂದ ಮಂದಾಕಿನಿ, ಜೂ.19ರಂದು ಕದಗಾರಯ್ಯಸ್ವಾಮಿ ಕೇರಿಯಿಂದ ಜೋಗಮತಿ, ಜೂ.20 ರಂದು ರಾಮರೂಢಸ್ವಾಮಿ ಕೇರಿಯಿಂದ ಕುದ್ವಾರೆ, ಜೂ.21ರಂದು ಪಟ್ಟಲದಮ್ಮ ಕೇರಿಯಿಂದ ಜೋಗ, ಜೂ.22ರಂದು ಸಿದ್ದರೂಢಸ್ವಾಮಿ ಕೇರಿಯಿಂದ ಪ್ರವಾಹ, ಜೂ.23 ರಂದು ಮಾಸ್ತಮ ಕೇರಿಯಿಂದ ಸೇನಾನಿ ಗಂಗೆ, ಜೂ.24ರಂದು ಬಸವಣ್ಣಕೇರಿಯಿಂದ ಸುರಹ, ಜೂ.25ರಂದು ಹುಚ್ಚಮನಕೇರಿಯಿಂದ ಬ್ರಹ್ಮೊಪ್ತಿ ಗಂಗಾ ಮೆರವಣಿಗೆ ನಡೆಯಲಿದೆ.
ಪೂಜಾ ಕಾರ್ಯಕ್ರಮದಲ್ಲಿ ಯಜಮಾನರಾದ ಯೋಗೇಶ್, ನಂಜುಂಡಯ್ಯ, ವಸಂತ್, ಪ್ರಭು, ಮುಖಂಡರಾದ ದೊಡ್ಡಯ್ಯ, ಅಟೋ ಮಂಜು ಸೇರಿದಂತೆ ಗಡಿಕುಲದ ಯಜಮಾನರು ಇದ್ದರು.