ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣದ ಕೆರೆಮೇಗಳದೊಡ್ಡಿ ಗ್ರಾಮದ ಶ್ರೀ ಸಾಯಿ ಪ್ಯಾರಾಮೆಡಿಕಲ್ ಇನ್ಸ್‌ಟಿಟ್ಯೂಟ್ ಆವರಣದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕರಾದ ಸುರೇಶ್, ರಾಮಕೃಷ್ಣ ಮತ್ತು ಸ್ನೇಕ್ ಹೇಮಂತ್ ಸಂರಕ್ಷಣೆ ಮಾಡಿ ಚಿಕ್ಕಮಣ್ಣುಗುಡ್ಡ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಪ್ಯಾರಾಮೆಡಿಕಲ್ ಕಾಲೇಜು ಆವರಣದಲ್ಲಿ ಹೆಬ್ಬಾವು ಇರುವ ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ತೆರಳಿದ ಇಬ್ಬರು ಉರಗ ಪ್ರೇಮಿಗಳು ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದರು.ಸುಮಾರು ೧೦ ಅಡಿಗೂ ಉದ್ದವಿರುವ ಈ ಹೆಬ್ಬಾವು ಸಮೀಪದ ಚಿಕ್ಕಮಣ್ಣು ಗುಡ್ಡ ಅರಣ್ಯ ಪ್ರದೇಶದಿಂದ ಆಹಾರ ಹರಸಿ ಇತ್ತ ಬಂದಿದ್ದು, ಮಳೆಯ ಕಾರಣ ಕೆರೆಮೇಗಳದೊಡ್ಡಿ ಗ್ರಾಮದ ಪ್ಯಾರಾಮೆಡಿಕಲ್ ಕಾಲೇಜಿನ ಆವರಣದಲ್ಲಿ ಕಾಣಿಸಿಕೊಂಡಿದೆ. ರಾತ್ರಿ ಹಾವನ್ನು ರಕ್ಷಣೆ ಮಾಡಿ ತಮ್ಮ ಬಳಿ ಇರಿಸಿಕೊಂಡಿದ್ದ ಉರಗ ಪ್ರೇಮಿಗಳು ಬೆಳಗ್ಗೆ ಹಾವನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಅಶೋಕ್, ಹರೀಶ್, ವಿನಯ್ ಮತ್ತಿತರರು ಉಪಸ್ಥಿತರಿದ್ದರು.