ನವ ಭಾರತ ಕಾಲೇಜಿಗೆ ಶೇ.100 ಫಲಿತಾಂಶ

| Published : Apr 11 2024, 12:52 AM IST

ಸಾರಾಂಶ

ಜೇವರ್ಗಿ ಪಟ್ಟಣದಲ್ಲಿರುವ ನವ ಭಾರತ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 100ಕ್ಕೆ 100ರ ಫಲಿತಾಂಶ ಲಭಿಸಿದೆ.

ಕನ್ನಡಪ್ರಭ ವಾರ್ತೆ ಜೇವರ್ಗಿಪಟ್ಟಣದಲ್ಲಿರುವ ನವ ಭಾರತ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 100ಕ್ಕೆ 100ರ ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿನಿ ಭವಾನಿ ಭೀಮಾಶಂಕರ ಕಣ್ಣಿ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.97.33 ರಷ್ಟು ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಭವಾನಿ ಅವರಿಗೆ ನವ ಭಾರತ ಶಿಕ್ಷಣ ಸಂಸ್ಥೆ ಪ್ರಥಮ ಪಿಯುಸಿಯಲ್ಲಿ ಉಚಿತವಾಗಿ ಪ್ರವೇಶ ನೀಡಿದೆ. ದ್ವಿತೀಯ ಪಿಯುಸಿಯಲ್ಲಿ 50% ರಿಯಾಯಿತಿಯಲ್ಲಿ ಶಿಕ್ಷಣ ನೀಡುವ ಮೂಲಕ ಸಂಸ್ಥೆಯು ವಿದ್ಯಾರ್ಥಿನಿಗೆ ಸಹಾಯ ಹಸ್ತ ಚಾಚಿದೆ. ಗ್ರಾಮೀಣ ಪ್ರದೇಶದಲ್ಲಿಯು ಅನೇಕ ವಿದ್ಯಾರ್ಥಿಗಳು ತಮ್ಮದೇಯಾದ ಪ್ರತಿಭೆ ಹೊಂದಿದೆ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಿದ್ದೆ ಯಾದರೇ ಶೈಕ್ಷಣಿಕ ಕ್ರಾಂತಿ ಜೇವರ್ಗಿ ಮತಕ್ಷೇತ್ರದಲ್ಲಿ ನಡೆಯುವುದರಲ್ಲಿ ಯಾವುದೇ ಸಂದೇಹ ವಿಲ್ಲ.

ಒಟ್ಟು 62 ವಿದ್ಯಾರ್ಥಿಗಳು ಪಿಯುಸಿ ಪರಿಕ್ಷೆ ಬರೆದಿದ್ದು, ಅಲ್ಫೀಯಾ ತಂದೆ ಬಾಬುಮೀಯಾ 93.83%, ಮಲ್ಲಮ್ಮ ತಂದೆ ನಿಂಗಣ್ಣ 93.50% ಅಂಕ ಪಡೆದಿದ್ದು, 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಾಜೀದಸೇಠ ಗಿರಣಿ ಹಾಗೂ ಪ್ರಾಚಾರ್ಯ, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.