ನಾನು ಸಾಹಿತ್ಯದ ಮೇಲೆ ಒಲವಿನಿಂದ ಸ್ನಾತಕೋತ್ತರ ಪದವಿಗೆ ಮಾನಸಗಂಗೋತ್ರಿಯ ಸೇರಿದೆ

ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಕೂಲಿಕೆಲಸ ಮಾಡಿಕೊಂಡಿರುವ ತಂದೆ- ತಾಯಿಯ ಮಗನಾದ ಚಂದ್ರಶೇಖರ ಅವರು ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎಂ.ಎ ಕನ್ನಡ ವಿಷಯದಲ್ಲಿ 13 ಚಿನ್ನದ ಪದಕ, 4 ನಗದು ಬಹುಮಾನ ಪಡೆದು ಹೆತ್ತವರಿಗೆ ಕೀರ್ತಿ ತಂದಿದ್ದಾರೆ.ಮೂಲತಃ ಕೊಪ್ಪಳ ಜಿಲ್ಲೆಯ ಕುಗ್ರಾಮದ ಕೂಲಿಕಾರರಾದ ಸಣ್ಣಪ್ಪ ಮತ್ತು ಶಾಂತಮ್ಮ ದಂಪತಿಯ ಮೂರನೇ ಪುತ್ರ ಚಂದ್ರಶೇಖರ ಅವರು, ಪದವಿ ಮುಗಿದ ಬಳಿಕ ಬಿ.ಇಡಿ ಓದಲು ಮೈಸೂರಿಗೆ ಬಂದಿದ್ದಾರೆ. ಬಿ.ಇಡಿ ಮುಗಿದ ಬಳಿಕ ಸಾಹಿತ್ಯದ ಮೇಲಿನ ಆಸಕ್ತಿ, ಒಲವಿನಿಂದ ಎಂ.ಎ ಕನ್ನಡ ಸೇರಿ, ಚಿನ್ನದ ಪದಕ ಮತ್ತು ನಗದು ಬಹುಮಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.ನಾನು ಸಾಹಿತ್ಯದ ಮೇಲೆ ಒಲವಿನಿಂದ ಸ್ನಾತಕೋತ್ತರ ಪದವಿಗೆ ಮಾನಸಗಂಗೋತ್ರಿಯ ಸೇರಿದೆ. ಕಥೆ- ಕಾದಂಬರಿಗಳ ವಿಮರ್ಶೆ ಭಾಗದಿಂದ ನನಗೆ ಹೆಚ್ಚಿನ ಆಸಕ್ತಿ. ನನಗೆ ಐಎಎಸ್- ಐಪಿಎಸ್ ಮಾಡಬೇಕೆಂಬ ದೊಡ್ಡ ಕನಸುಗಳು ಇಲ್ಲ. ನನ್ನ ತಂದೆ- ತಾಯಿಗೆ ಮೂರೊತ್ತು ಅನ್ನ ಹಾಕಬೇಕು ಎಂಬುದಷ್ಟೆ ನನ್ನ ಗುರಿ. ಹೀಗಾಗಿ, ಭವಿಷ್ಯದಲ್ಲಿ ಪಿಎಚ್.ಡಿ ಪದವಿ ಪಡೆದು ಸಹಾಯಕ ಪ್ರಾಧ್ಯಾಪಕ ಅಥವಾ ಶಿಕ್ಷಕನಾಗುವ ಗುರಿ ಹೊಂದಿದ್ದೇನೆ ಎಂದು ಚಂದ್ರಶೇಖರ ಹೇಳಿದರು.ಪುತ್ರ ಚಂದ್ರಶೇಖರ ಚಿನ್ನದ ಪದಕ ಮತ್ತು ನಗದು ಬಹುಮಾನ ಸ್ವೀಕರಿಸುವುದನ್ನು ನೋಡಲು ತಂದೆ ಸಣ್ಣಪ್ಪ, ತಾಯಿ ಶಾಂತಮ್ಮ ಅವರು ಸಹ ಮೈಸೂರಿಗೆ ಬಂದಿದ್ದರು. ಮಗನ ಸಾಧನೆ ಕಂಡು ದಂಪತಿ ಭಾವುಕರಾದರು.---- 16 ಚಿನ್ನ ಬಾಚಿದ ಮಂಡ್ಯದ ಹುಡುಗಿ ಪ್ರೇರಣಾಮಂಡ್ಯ ಕಲ್ಲಹಳ್ಳಿಯ ಎಸ್.ಎಲ್. ಪ್ರೇರಣಾ ಅವರು ಎಂ.ಟೆಕ್ ಅರ್ಬನ್ ಅಂಡ್ ರಿಜಿನಲ್ ಪ್ಲಾನಿಂಗ್ ವಿಷಯದಲ್ಲಿ 16 ಚಿನ್ನ ಪದಕ ಪಡೆದಿದ್ದಾರೆ.ಐಕೆವಿಯಲ್ಲಿ ಅಕಾಡೆಮಿಕ್ ಡೀನ್ ಆಗಿರುವ ತಂದೆ ಲೋಕಪ್ರಕಾಶ ನಾರಾಯಣ ಮತ್ತು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಿಲ್ಪಾ ಅವರ ಪುತ್ರಿಯಾದ ಪ್ರೇರಣಾ ಅವರು, ಹೆತ್ತವರಂತೆ ತಾನು ಸಹ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಹಂಬಲ ಹೊಂದಿದ್ದಾರೆ.ನನಗೆ ಚಿನ್ನದ ಪದಕಗಳು ಬರುತ್ತವೆಂಬ ನಿರೀಕ್ಷೆ ಇರಲಿಲ್ಲ. ಓದುವುದಷ್ಟೇ ನನ್ನ ಗುರಿಯಾಗಿತ್ತು. ಕಷ್ಟಪಡದೆ ಇಷ್ಟಪಟ್ಟು ಖುಷಿಯಿಂದ ಅಭ್ಯಾಸ ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ. ಪಿಎಚ್.ಡಿ ಮಾಡಿ, ಬೋಧನಾ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂಬ ಗುರಿ ಇದೆ ಎಂದು ಪ್ರೇರಣಾ ಸಂತಸ ಹಂಚಿಕೊಂಡರು.---- ರೈತನ ಮಗಳು ಸುಮಲತಾಗೆ ಎಂ.ಕಾಂನಲ್ಲಿ 7 ಚಿನ್ನಮೈಸೂರು ತಾಲೂಕು ಮಾರಶೆಟ್ಟಿಹಳ್ಳಿಯ ರೈತನ ಮಗಳಾದ ಎಂ. ಸಮಲತಾ ಅವರು ಎಂ.ಕಾಂನಲ್ಲಿ 7 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಪಡೆಯುವ ಮೂಲಕ ತಂದೆ- ತಾಯಿಗೆ ಹೆಮ್ಮೆ ತಂದಿದ್ದಾರೆ.ನಮ್ಮದು ಕೃಷಿಕ ಕುಟುಂಬ. ನಮ್ಮ ತಂದೆ ಮಹೇಶ್, ತಾಯಿ ಮಂಜುಳಾ ಅವರು ಕೃಷಿ ಮಾಡುತ್ತಿದ್ದಾರೆ. ನನ್ನ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ತಂದೆ- ತಾಯಿ ಸಾಕಷ್ಟು ಪ್ರೋತ್ಸಾಹ ನೀಡಿ ಬೆಂಬಲವಾಗಿ ನಿಂತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಒಲವಿದ್ದು, ಅಧ್ಯಾಪಕಿಯಾಗಬೇಕೆಂಬ ಆಸೆ ಇದೆ ಎಂದು ಎಂ. ಸುಮಲತಾ ತಿಳಿಸಿದರು.---- ಬಸ್ ನಿರ್ವಾಹಕನ ಮಗಳಿಗೆ 6 ಪದಕಕೆಎಸ್‌ಆರ್‌ ಟಿಸಿ ಬಸ್ ನಿರ್ವಾಹಕ ಮಗಳಾದ ಟಿ. ಹರ್ಮೈನ್ ಅವರು ಬಿ.ಎಸ್ಸಿಯಲ್ಲಿ 6 ಚಿನ್ನದ ಪದಕ ಮತ್ತು 5 ನಗದು ಬಹುಮಾನ ಪಡೆದು ಮಾದರಿಯಾಗಿದ್ದಾರೆ. ಮೈಸೂರಿನ ರಾಜ್ ಕುಮಾರ್ ರಸ್ತೆಯ ನಿವಾಸಿ, ಬಸ್ ನಿರ್ವಾಹಕ ತಂದೆ ಮತ್ತು ಪ್ರೌಢಶಾಲಾ ಶಿಕ್ಷಕಿಯಾದ ದಂಪತಿಯ ಪುತ್ರಿ ಟಿ. ಹರ್ಮೈನ್ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂಬ ಗುರಿ ಹೊಂದಿದ್ದಾರೆ. ಪ್ರಸ್ತುತ ಹೈದರಾಬಾದ್ ನಲ್ಲಿ ಎಂ.ಎಸ್ಸಿ ಜೊತೆ ಜೊತೆಗೆ ಯುಪಿಎಸ್ಸಿ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.----ಬಾಕ್ಸ್... ಮೈಸೂರು ವಿವಿಗೆ ''''''''ಅದಿತಿ'''''''' 24 ಕ್ಯಾರೆಟ್ ಚಿನ್ನದ ಹುಡುಗಿ...!ಫೋಟೋ- 5ಎಂವೈಎಸ್14ಕುಟುಂಬ ಸದಸ್ಯರೊಂದಿಗೆ ಎನ್. ಅದಿತಿ ಸಂತಸದ ಕ್ಷಣ.----ಮೈಸೂರು ವಿವಿ ಎಂ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ ಎನ್. ಅದಿತಿ ಅವರು 24 ಚಿನ್ನದ ಪದಕ ಮತ್ತು 7 ನಗದು ಬಹುಮಾನ ಪಡೆದು ವಿವಿಗೆ ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದರು. ಮಂಗಳೂರು ಮೂಲದ ಇವರ ತಂದೆ ನಿರಂಜನ ನಾಯಕ ಶಿಕ್ಷಕ ಹಾಗೂ ತಾಯಿ ಶುಭಲಕ್ಷ್ಮೀ ಉಪನ್ಯಾಸಕಿ.ನಮ್ಮ ಅಪ್ಪ- ಅಮ್ಮ ಇಬ್ಬರು ಶಿಕ್ಷಕರಾಗಿದ್ದು, ಮನೆಯಲ್ಲಿ ಸಹಜವಾಗಿಯೇ ಶಿಕ್ಷಣದ ವಾತಾವರಣ ಹೆಚ್ಚಿತ್ತು. ನಾನು ಚಿಕ್ಕವಳಿದ್ದಾಗ ಟೀಚರ್ ತರ ಆಡುತ್ತಿದ್ದೆ ಅಂತಾ ಅಮ್ಮ ಅಗಾಗ ಹೇಳುತ್ತಿದ್ದರು. ಹೀಗಾಗಿ, ನಾನು ಸಹ ಪಿಎಚ್.ಡಿ ಮಾಡಿ, ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಆಸೆ ಇದೆ ಎಂದು ಅದಿತಿ ಹೇಳಿದರು.ನನಗೆ ಚಿನ್ನದ ಪದಕ ಸಿಗುತ್ತದೆಂದು ಓದುತ್ತಿರಲಿಲ್ಲ. ಮನೆಯಲ್ಲಿ ಓದಿದಕ್ಕಿಂತ ತರಗತಿಯಲ್ಲಿ ಪಾಠವನ್ನು ಅರ್ಥ ಮಾಡಿಕೊಳ್ಳುತ್ತಿದೆ. ಈಗ ಕೆಮಿಕಲ್ ಬಯಾಲಜಿಯಲ್ಲಿ ಪಿಎಚ್.ಡಿ ಮಾಡುವ ಆಸೆಯಿದ್ದು, ಭವಿಷ್ಯದಲ್ಲಿ ಪ್ರಾಧ್ಯಾಪಕಿ ಅಥವಾ ವಿಜ್ಞಾನಿ ಆಗುವ ಗುರಿಯಿದ್ದು, ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಸಾಗಿದೆ ಎಂದು ಅದಿತಿ ವಿಶ್ವಾಸ ವ್ಯಕ್ತಪಡಿಸಿದರು.