39 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ದಾಖಲೆ ನಿರ್ಮಾಣ

| Published : Jun 23 2024, 02:02 AM IST

ಸಾರಾಂಶ

ಇಲ್ಲಿನ ಶ್ರೀಲಕ್ಷ್ಮಿ ಸೂಪರ್ ಸ್ಪಾಷಲಿಟಿ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಯೋಗ ದಿನ ಹಾಗೂ ಪರಿಸರ ದಿನ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ,‌ ಕಾಲೇಜು ವಿದ್ಯಾರ್ಥಿಗಳು 39 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ದಾಖಲೆ ಪಡೆದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ಕೃಷ್ಣರಾಜಪುರ

ಇಲ್ಲಿನ ಶ್ರೀಲಕ್ಷ್ಮಿ ಸೂಪರ್ ಸ್ಪಾಷಲಿಟಿ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಯೋಗ ದಿನ ಹಾಗೂ ಪರಿಸರ ದಿನ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ,‌ ಕಾಲೇಜು ವಿದ್ಯಾರ್ಥಿಗಳು 39 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ದಾಖಲೆ ಪಡೆದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ನೂರಾರು ಜನರು ಪಾಲ್ಗೊಂಡು ಸೂರ್ಯ ನಮಸ್ಕಾರ ಮಾಡಿದರು. ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.

ಶ್ರೀಲಕ್ಷ್ಮಿ ಸೂಪರ್ ಸ್ಪಾಷಲಿಟಿ ಆಸ್ಪತ್ರೆಯ ನಿರ್ದೇಶಕ ಸಾಂಬಶಿವ ಮಾತನಾಡಿ, ವಿಶ್ವ ಯೋಗ ದಿನ ಮತ್ತು ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಏಕಕಾಲದಲ್ಲಿ 39 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದೇವೆ ಎಂದರು.

ಶ್ರೀಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಇಒ ರಾಘವೇಂದ್ರ ಸುಂಟ್ರಹಳ್ಳಿ ಮಾತನಾಡಿ, 60 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಉದ್ದೇಶವಿತ್ತು. ಸಾರ್ವಜನಿಕರಿಗೆ ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಲಾಭಗಳ ಕುರಿತು ತಿಳಿಸಲಾಗಿದೆ. ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಗಿದೆ ಎಂದರು.

ಆಸ್ಪತ್ರೆ ನಿರ್ದೇಶಕಿ ಜಯಮಾಲಾ, ವಿಜಯಕಾಂತ್, ಡಾ। ಮಂಜುನಾಥ್, ಡಾ। ನರಸಿಂಹಮೂರ್ತಿ, ಯೋಗಪಟು ದಿವ್ಯಾಭಟ್ ಇದ್ದರು.