11 ಕೋಟಿ ವೆಚ್ಚದಲ್ಲಿ ನಗರಸಭೆ ನೂತನ ಕಟ್ಟಡಕ್ಕೆ ಚಾಲನೆ

| Published : Jan 01 2024, 01:15 AM IST

ಸಾರಾಂಶ

ಹೊಸಕೋಟೆ: ನಗರಸಭೆ ಕಾರ್ಯಾಲಯಕ್ಕೆ 11 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ಆಧಯನಿಕತೆಯಿಂದ ಕೂಡಿದ ಕಟ್ಟಡದಲ್ಲಿ ಸುಗಮು ಮತ್ತು ಸುಲಲಿತವಾಗಿ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರಸಭೆಯ ಮೊದಲನೇ ಅಂತಸ್ತಿನ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರಸಭೆ ಕಚೇರಿ ಈಗ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆಡಳಿತ ವ್ಯವಸ್ಥೆ ಪುರಸಭೆಯಿಂದ ನಗರಸಭೆ ಮೇಲ್ದರ್ಜೆಗೆ ಏರಿಕೆಯಾದ ನಂತರ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ 11 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ 6 ಕೋಟಿ ಹಣ ಮಂಜೂರಾಗಿದ್ದು, ಹೆಚ್ಚುವರಿಯಾಗಿ ನಗರೋತ್ಥಾನ ಯೋಜನೆಯಡಿ 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೆಲ ಅಂತಸ್ತಿನಲ್ಲಿ ಪಾರ್ಕಿಂಗ್, ಒಂದನೇ ಅಂತಸ್ತಿನಲ್ಲಿ ಕಚೇರಿ ಕಾರ್ಯಾಲಯ, ಎರಡನೇ ಅಂತಸ್ತಿನಲ್ಲಿ ಶಾಸಕ, ಸಂಸದ, ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಇತರೆ ಅಧಿಕಾರಿಗಳ ಕಚೇರಿ, ಮೂರನೇ ಅಂತಸ್ತಿನಲ್ಲಿ ಸಭಾಂಗಣವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಬೈರೇಗೌಡ, ನಗರಸಭೆ ಪೌರಾಯುಕ್ತ ಜಹೀರ್ ಅಬ್ಬಾಸ್, ಸದಸ್ಯ ಕೇಶವಮೂರ್ತಿ, ಗುತ್ತಿಗೆದಾರ ಅರ್ಜುನ್ ಮಾಲಿಂಗಪ್ಪ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶಿವಾನಂದ್, ವಿಜಯಕುಮಾರ್, ಮುಖಂಡರಾದ ನವಾಜ್, ಅಮ್ಜದ್, ಶ್ರೀವಾರಿ ಕಿಟ್ಟಿ ಮತ್ತಿತರರು ಹಾಜರಿದ್ದರು.

ಫೋಟೋ : 30 ಹೆಚ್‌ಎಸ್‌ಕೆ 5

ಹೊಸಕೋಟೆ ನಗರದಲ್ಲಿ ನಿರ್ಮಾಣವಾಗುತ್ತಿರುವ ನಗರಸಭೆಯ ನೂತನ ಕಟ್ಟಡದ ರೂಪರೇಷೆಯ ನಕ್ಷೆಯನ್ನು ವೀಕ್ಷಿಸಿದ ಶಾಸಕ ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರರಿಂದ ಮಾಹಿತಿಯನ್ನು ಪಡೆದರು.