ಗಣಪತರಾವ ಮಹಾರಾಜರ 116ನೇ ಜನ್ಮಮಹೋತ್ಸವ

| Published : Aug 28 2024, 12:46 AM IST

ಸಾರಾಂಶ

ವಿಜಯಪುರ ತಾಲೂಕಿನ ಕನ್ನೂರಿನ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವದ ನಿಮಿತ್ತವಾಗಿ ಸತ್ಸಂಗ ಮಂಡಳಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಶಾಂತಿಕುಟೀರ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಹೇತಿ, ಸತೀಶ ಕನ್ನೂರ, ಗೋಕುಲ ಶೇಡಜಿ, ಶಾಂತಿಕುಟೀರದ ಶ್ರೀಕೃಷ್ಣ ಸಂಪಗಾಂವಕರ, ಶ್ರೀನಿವಾಸ ಕುಲಕರ್ಣಿ ಹಾಗೂ ಮುಂಬೈ ಭಕ್ತ ಮಂಡಳಿಯವರು ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಲೂಕಿನ ಕನ್ನೂರಿನ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವದ ನಿಮಿತ್ತವಾಗಿ ಸತ್ಸಂಗ ಮಂಡಳಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಶಾಂತಿಕುಟೀರ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಹೇತಿ, ಸತೀಶ ಕನ್ನೂರ, ಗೋಕುಲ ಶೇಡಜಿ, ಶಾಂತಿಕುಟೀರದ ಶ್ರೀಕೃಷ್ಣ ಸಂಪಗಾಂವಕರ, ಶ್ರೀನಿವಾಸ ಕುಲಕರ್ಣಿ ಹಾಗೂ ಮುಂಬೈ ಭಕ್ತ ಮಂಡಳಿಯವರು ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ನಗರದ ಬಾಲಾಜಿ ಪೆಟ್ರೋಲ್ ಪಂಪದಿಂದ ಬೈಕ್ ರ್‍ಯಾಲಿ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಯಘೋಷ ಹಾಗೂ ನಾಮಸ್ಮರಣೆಯೊಂದಿಗೆ ಷಣ್ಮುಖಾರೂಡ ಮಠಕ್ಕೆ ತಲುಪಿತು. ಶ್ರೀಮಠದ ಸ್ವಾಮಿಜಿ ಆಶೀರ್ವಚನ ನೀಡಿದರು. ಬಳಿಕ ಅಲ್ಲಿಂದ ಹೊರಟು ಕೊನೆಗೆ ಗುರುದತ್ತ ಮಂಗಲ ಕಾರ್ಯಾಲಯಕ್ಕೆ ಮುಕ್ತಾಯಗೊಂಡಿತು. ನಗರದ, ಕನ್ನೂರ, ಲೋಗಾವ, ಬಮ್ಮನಳ್ಳಿ, ಹಾಗೂ ಮುಂಬೈ ಭಕ್ತರು ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನದೊಂದಿಗೆ ಭಾಗವಹಿಸಿದ್ದರು. ಸಂಚಾಲಕರಾದ ವಿವೇಕ ತಿಕೋಟಿ, ಗೋಪಾಲ ಬಾಹೇತಿ, ರಮಾಕಾಂತ ಬಾಹೇತಿ, ಪವನ ಕುಲಕರ್ಣಿ, ಸಾಧನಾ ತಿಕೋಟಿ, ಪ್ರಿತೇಶ, ಚೇತನ ಪವಾರ, ಕಿರಣ ವೈದ್ಯ, ವಿವೇಕ ಕುಲಕರ್ಣಿ ನೇತೃತ್ವ ವಹಿಸಿದ್ದರು.