ಸಾರಾಂಶ
- ಬಸವಾಪಟ್ಟಣ, ಹರೋಸಾಗರ, ಮರಬನಹಳ್ಳಿಗಳಲ್ಲಿ ಮನೆಗಳಿಗೆ ನುಗ್ಗಿದ ಕಳ್ಳರು
- - -- ಮರಬನಹಳ್ಳಿಯಲ್ಲಿ ಮನೆ ಬೀಗ ಮುರಿಯುತ್ತಿದ್ದಾಗ ಗದರಿದಾಗ ದ್ವಿಚಕ್ರ ವಾಹನ ಬಿಟ್ಟು ಪರಾರಿ
- ಒಟ್ಟು 1.30 ಲಕ್ಷ ರು. ನಗದು, ಬೆಳ್ಳಿ ಕಾಯಿನ್‌ಗಳ ಕದ್ದೊಯ್ದ ಕಿರಾತಕರು- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಹೋಬಳಿ ಕೇಂದ್ರವಾದ ಬಸವಾಪಟ್ಟಣ ಸೇರಿದಂತೆ ಹರೋಸಾಗರ, ಮರಬನಹಳ್ಳಿ ಗ್ರಾಮಗಳ ಒಟ್ಟು 12 ಮನೆಗಳಲ್ಲಿ ಸೋಮವಾರ ಬೆಳಗಿನ ಜಾವ ಸರಣಿ ಕಳವು ಪ್ರಕರಣಗಳು ನಡೆದಿದ್ದು, ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.ಹರೋಸಾಗರ ಗ್ರಾಮದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲಿಂಗರಾಜ್ ಮನೆಯಲ್ಲಿ ₹72 ಸಾವಿರ ನಗದು ಮತ್ತು 4 ಬೆಳ್ಳಿ ಕಾಯಿನ್‌ಗಳು ಕಳವಾಗಿವೆ. ಬಸವಾಪಟ್ಟಣದಲ್ಲಿ ಸಿದ್ದೇಶ್, ನವೀನ್, ಶೇಖರಪ್ಪ, ಮಂಜು, ಚಂದ್ರಣ್ಣ ಎಂಬವರ ಮನೆಗಳಲ್ಲಿ ಹಣ ಮತ್ತು ಬೆಳ್ಳಿ ಬಂಗಾರದ ವಸ್ತುಗಳು ಕಳವಾಗಿವೆ. ಕೋಟೆಹಾಳ್, ಮರಬನಹಳ್ಳಿ ಗ್ರಾಮಗಳಲ್ಲಿ ಮನೆಗಳಿಗೆ ಬೀಗ ಹಾಕಿಕೊಂಡು ಹೋದವರ ಮನೆಗಳ ಮುಂಂದಿನ ಬಾಗಿಲುಗಳನ್ನು ಮುರಿದಿರುವ ಕಳ್ಳರು ಹಣ ಮತ್ತು ಬಂಗಾರದ ಒಡವೆಗಳನ್ನು ಜಾಲಾಡಿದ್ದಾರೆ. ಈ ಎಲ್ಲ ಮನೆಗಳಿಂದ ಒಟ್ಟು ₹1.30 ಲಕ್ಷ ಹಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಮರಬನಹಳ್ಳಿಯಲ್ಲಿ ಕಳ್ಳರು ಮನೆ ಬೀಗ ಮುರಿಯುತ್ತಿದ್ದ ಸಂದರ್ಭ ಪಕ್ಕದ ಮನೆಯವರು ಯಾರೋ ಅದು ಎಂದು ಗದರಿ, ಗಲಾಟೆ ಮಾಡಿದ್ದಾರೆ. ಆಗ ಕಳ್ಳರು ತಾವು ತಂದಿದ್ದ ದ್ವಿಚಕ್ರ ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಜಿಲ್ಲಾ ಎಸ್‌ಪಿ ಭೇಟಿ:
ಸರಣಿ ಕಳವು ಘಟನೆ ಹಿನ್ನೆಲೆ ಎಸ್.ಪಿ.ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ, ಪತ್ರಕರ್ತ ಲಿಂಗರಾಜ್ ಮತ್ತಿತರ ಸ್ಥಳೀಯರಿಂದ ಮಾಹಿತಿ ಪಡೆದರು. ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಗಳಲ್ಲಿನ ಗ್ರಾಮಗಳ ಮುಖ್ಯ ದ್ವಾರದಲ್ಲಿ ಗ್ರಾಪಂ ವತಿಯಿಂದ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕು. ಆಗ ಗ್ರಾಮಕ್ಕೆ ತಡರಾತ್ರಿಗಳಲ್ಲಿ ಬರುವವರ ಬಗ್ಗೆ ಮಾಹಿತಿ ದೊರೆಯಲಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಬೇಕು ಎಂದು ಎಸ್‌ಪಿ ಅವರು ತಿಳಿಸಿದ್ದಾರೆ.ಆರೋಪಿಗಳ ಪತ್ತೆಗೆ ಸರ್ಕಲ್ ಇನ್‌ಸ್ಪೆಪೆಕ್ಟರ್ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿ, ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸ್ಯಾಮ್ ವರ್ಗಿಸ್, ಸಂತೆಬೆನ್ನೂರು ಸಿಪಿಐ ನಿಂಗನಗೌಡ ನೆಗಳೂರು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.- - - -10ಕೆಸಿಎನ್ಜಿ4,5:
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯಲ್ಲಿ ಸರಣಿ ಕಳವು ಪ್ರಕರಣ ನಡೆದ ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.