ಕನ್ನಡಪ್ರಭ ವಾರ್ತೆ ಬಾಗಲಕೋಟೆ12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯ ಸಮರ್ಥ ನಾಯಕತ್ವದೊಂದಿಗೆ ಸಮರ್ಥ ಆಡಳಿತ ನಡೆಸುವ ಮೂಲಕ ಜನಮನದಲ್ಲಿ ದೇಶದ ಆಶಾಕೀರಣವಾಗಿ ಹೊರಹೊಮ್ಮಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯ ಸಮರ್ಥ ನಾಯಕತ್ವದೊಂದಿಗೆ ಸಮರ್ಥ ಆಡಳಿತ ನಡೆಸುವ ಮೂಲಕ ಜನಮನದಲ್ಲಿ ದೇಶದ ಆಶಾಕೀರಣವಾಗಿ ಹೊರಹೊಮ್ಮಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ಭಾರತೀಯ ಜನತಾ ಪಕ್ಷ ಬಾಗಲಕೋಟೆ ಮತಕ್ಷೇತ್ರದಿಂದ ಮೋದಿ 12 ವರ್ಷ ಆಡಳಿತ ಸಂಭ್ರಮ ನಿಮಿತ್ಯ ನವನಗರದ 52ನೇ ಸೆಕ್ಟರ್ನಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಸತತವಾಗಿ 3 ಅವಧಿಗೆ ಪ್ರಧಾನಿಯಾಗಿ ದೇಶಕ್ಕೆ ಅಭಿವೃದ್ಧಿ ಪರ ಕೆಲಸ ಮಾಡಿ ಇಡೀ ಪ್ರಪಂಚವೆ ಭಾರತದತ್ತ ತಿರುಗಿ ನೋಡುವಂತೆ ಮಾಡಿರುವ ಮಹಾನ ಚೇತನ ಪ್ರಧಾನ ಮಂತ್ರಿ ಮೋದಿ ಅವರಾಗಿದ್ದಾರೆ ಎಂದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಪ್ರಧಾನಿ ಮೋದಿಯವರು ಬಿಜೆಪಿ ನಾಯಕರಾಗಿ ಉಳಿಯದೆ ಜಗತ್ತಿನ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.

ಇದೆ ಸಂದರ್ಭದಲ್ಲಿ ನವನಗರದ ವೀರಭದ್ರೇಶ್ವರ ದೇವಸ್ಥಾನ ಹಾಗೂ ವಿದ್ಯಾಗಿರಿ ಕಾಶಿ ವಿಶ್ವನಾಥನ ದೇವಸ್ಥಾನ ಮತ್ತು ಬಾಗಲಕೋಟೆಯಲ್ಲಿನ ಹೊಳೆ ಆಂಜೆನೇಯ ದೇವಸ್ಥಾನದಲ್ಲಿ ಪ್ರಧಾನಿ ಮೋದಿಯವರ ಶ್ರೇಯಸ್ಸಿಗಾಗಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಸಟ್, ಭಾಗೀರಥಿ ಪಾಟೀಲ. ಸವೀತಾ ಲಂಕೆನ್ನವರ, ಶೋಭಾ ರಾವ, ಸರಸ್ವತಿ ಕುರಬರ, ಶಶಿಕಲಾ ಮಜ್ಜಗಿ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಶ್ರೀಧರ ನಾಗರಬೆಟ್ಟ, ಸುರೇಶ ಮಜ್ಜಗಿ, ಉಮೆಶ ಹಂಚಿನಾಳ ಸೇರಿ ಕಾರ್ಯಕರ್ತರು ಭಾಗವಹಿಸಿದ್ದರು.ಮೋದಿ ಯಶಸ್ವಿ ಪ್ರಧಾನಿಯಾಗಿ ಭಾರತವನ್ನು ಜಗದ್ಗುರುವಿನ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ. 25 ವರ್ಷಗಳ ನಿರಂತರ ಆಡಳಿತ. ಈ ಹಿಂದೆ 12 ವರ್ಷಗಳಕಾಲ ಗುಜರಾತ್ ಸಿಎಂ ಯಾಗಿ ಗುಜರಾತನ್ನು ಮಾದರಿ ರಾಜ್ಯವನ್ನಾಗಿ ಮಾಡಿ ಮೋದಿ ಜಗತ್ತಿನ ನಾಯಕಯರಾಗಿ ಭಾರತವನ್ನು ಮುಂಚೂಣಿಗೆ ತಂದ ವಿಶ್ವನಾಯಕ ಮೋದಿಯವರಾಗಿದ್ದಾರೆ. -ವೀರಣ್ಣ ಚರಂತಿಮಠ, ಮಾಜಿ ಶಾಸಕ