ಮಾಗಡಿ: ತಾಲೂಕಿನ ರೈತರಿಗೆ ಬೆಳೆ ಸಾಲವಾಗಿ 120 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಹೇಳಿದರು

ಮಾಗಡಿ: ತಾಲೂಕಿನ ರೈತರಿಗೆ ಬೆಳೆ ಸಾಲವಾಗಿ 120 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಹೇಳಿದರು.

ತಾಲೂಕಿನ ಚಕ್ರಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸದಸ್ಯರು ಸಂಸ್ಥೆಯಲ್ಲಿ ಹೊಂದಿರುವ ಷೇರುಗಳಿಗೆ ಅನುಗುಣವಾಗಿ ಲಾಭಾಂಶದ ಪ್ರತಿಫಲ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು, ರೈತರಿಗೆ ಕೃಷಿ ಜಾಗೃತಿ ಮೂಡಿಸುವುದಕ್ಕೂ ಆದ್ಯತೆ ನೀಡಲಾಗುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಕೈಗೊಳ್ಳಬಹುದಾದ ಕೃಷಿ ಚಟುವಟಿಕೆಗಳು, ಆಧುನಿಕ ಕೃಷಿ ಪದ್ಧತಿಗಳು ಹಾಗೂ ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳ ಕುರಿತು ರೈತರು ತಿಳಿವಳಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತ ಉತ್ಪಾದಕರ ಸಂಸ್ಥೆಗಳು(ಎಫ್‌ಪಿಒ), ವಿಎಸ್‌ಎಸ್‌ಎನ್‌ಗಳು ಹಾಗೂ ಇತರೆ ಸಹಕಾರ ಸಂಸ್ಥೆಗಳ ನಡುವೆ ಸಮನ್ವಯ ಅಗತ್ಯವಿದೆ. ಸಹಕಾರ ಸಂಸ್ಥೆಗಳ ಸದಸ್ಯರು ತಮ್ಮ ಸಂಸ್ಥೆಯ ಕಾರ್ಯವೈಖರಿ, ಷೇರು, ಸಾಲ ಮತ್ತು ಲಾಭಾಂಶ ಸೇರಿದಂತೆ ಹಣಕಾಸು ವ್ಯವಹಾರಗಳ ಬಗ್ಗೆ ತಿಳಿದುಕೊಂಡು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಬಸರಾಜಣ್ಣ ಮಾತನಾಡಿ, 2025-26ನೇ ಸಾಲಿನಲ್ಲಿ ಸಂಘ 4 ಲಕ್ಷ ಲಾಭ ಗಳಿಸಿದೆ. ರೈತರಿಗೆ ಕೆಸಿಸಿ ಬೆಳೆ ಸಾಲ ₹8.89 ಕೋಟಿ ವಿತರಣೆ ಮಾಡಲಾಗಿದೆ. ರಸಗೊಬ್ಬರ ಸೇರಿದಂತೆ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಸಂಘದಿಂದ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಚಂದ್ರಮ್ಮ, ನಿರ್ದೇಶಕರಾದ ಲೋಕೇಶ್, ಕುಂಬಳಯ್ಯ, ಗಂಗಣ್ಣ, ಪುಟ್ಟಸ್ವಾಮಿ, ಮಹದೇವಯ್ಯ, ರಾಧಮ್ಮ, ನಳಿನಾಕ್ಷಿ, ಮಹೇಶ್, ಮುಖಂಡರಾದ ಕಾಂತರಾಜ್, ಯೋಗನರಸಿಂಹಯ್ಯ, ಸಿಗೇಕುಪ್ಪೆ ಶಿವಣ್ಣ, ಪಂಚಾಕ್ಷರಿ, ದೀಪಕ್, ಗುರು, ಮಹೇಶ್, ಕಾರ್ಯದರ್ಶಿ ಸಿ.ಎಚ್.ಬೈರೇಶ್, ಲೆಕ್ಕಿಗ ಸಂತೋಷ್, ಮಾರಾಟ ಗುಮಾಸ್ತೆ ಮಂಜುಳ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಿರ್ದೇಶಕರಾದ ಧನಂಜಯ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಞನ್‌)

ಮಾಗಡಿ ತಾಲೂಕಿನ ಚಕ್ರಬಾವಿ ವಿಎಸ್ಎಸ್ ಎನ್ ವಾರ್ಷಿಕ ಸಭೆಯಲ್ಲಿ ರೈತರಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್ ಎನ್ ಅಶೋಕ್ ಸಾಲದ ಚೆಕ್‌ಗಳನ್ನು ವಿತರಿಸಿದರು. ಸಂಘದ ಅಧ್ಯಕ್ಷ ಬಸವರಾಜು ಇತರರಿದ್ದರು.