ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 38 ಕೋಟಿ ರು. ಮೌಲ್ಯದ 128 ಕೆಜಿ ಡ್ರಗ್ಸ್ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್‌ಸಿಬಿ) ಬೆಂಗಳೂರು ವಲಯ ಶುಕ್ರವಾರ ನಾಶಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 38 ಕೋಟಿ ರು. ಮೌಲ್ಯದ 128 ಕೆಜಿ ಡ್ರಗ್ಸ್ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್‌ಸಿಬಿ) ಬೆಂಗಳೂರು ವಲಯ ಶುಕ್ರವಾರ ನಾಶಗೊಳಿಸಿದೆ.

ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿ 13 ಪ್ರಕರಣಗಳಲ್ಲಿ ಡ್ರಗ್ಸ್ ಅನ್ನು ಎನ್‌ಸಿಬಿ ಅಧಿಕಾರಿಗಳು ಸುಟ್ಟು ಹಾಕಿದ್ದಾರೆ. ಇದೇ ವರ್ಷ ಎರಡನೇ ಬಾರಿ ವಶಪಡಿಸಿಕೊಂಡ ಡ್ರಗ್ಸ್ ಅನ್ನು ಎನ್‌ಸಿಬಿ ಅಗ್ನಿಗೆ ಆಹುತಿ ಮಾಡಿದ್ದು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 49 ಕೋಟಿ ರು ಮೌಲ್ಯದ 1735 ಕೆಜಿ ಡ್ರಗ್ಸ್ ನಾಶಗೊಳಿಸಿದೆ. ಇದರಲ್ಲಿ ಎಂಡಿಎಂಎ, ಹೈಡ್ರೋ ಗಾಂಜಾ, ಕೊಕೇನ್‌, ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಸೇರಿವೆ.

ಡ್ರಗ್ಸ್ ನಾಶಗೊಳಿಸುವ ವೇಳೆ ಬೆಂಗಳೂರು ವಲಯ ಎನ್‌ಸಿಬಿ ನಿರ್ದೇಶಕ ಸಚಿನ್ ಘೋರ್ಪಡೆ, ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ಹಾಗೂ ಎನ್‌ಸಿಬಿ ಸಹಾಯಕ ನಿರ್ದೇಶಕ ಎಂ.ಆರ್‌.ಅರವಿಂದ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.