ಸಾರಾಂಶ
ಬಸವಣ್ಣನವರು ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿ ಕುತೂಹಲ, ಜಾಣ್ಮೆ, ಜಾಗೃತಿಗಳನ್ನು ವ್ಯಕ್ತಪಡಿಸ ತೊಡಗಿದರು. ಬಸವಣ್ಣನವರು ತನ್ನ ಎಂಟನೇ ವರ್ಷದಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚಿನ ಜಾಣ್ಮೆ ಅವರಲ್ಲಿತ್ತು. ಬಸವಣ್ಣನವರ ಕ್ರಾಂತಿಕಾರಿಕ ಭಾವನೆಗಳು ಎಲ್ಲರೂ ಸಮಾನರು ಎಂಬ ಭಾವನೆ ಅಡಿಯಲ್ಲಿ ಲಿಂಗಾಯತ ಧರ್ಮ ಅಸ್ತಿತ್ವಕ್ಕೆ ತಂದಂತಹ ಮಹಾನ್ ಚೇತನ ಬಸವಣ್ಣ.
ಕನ್ನಡಪ್ರಭ ವಾರ್ತೆ ಆನಂದಪುರ
12ನೇ ಶತಮಾನವು ಭರತಕಂಡ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟ ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ ತಿಳಿಸಿದರು.ಇಲ್ಲಿಗೆ ಸಮೀಪದ ಮುರುಘಾಮಠದಲ್ಲಿ ನಡೆದ 578 ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ
12ನೇ ಶತಮಾನವು ಸಾಹಿತ್ಯಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಮಹತ್ತರ ಬದಲಾವಣೆ ತಂದಂತಹ ಸಂಕ್ರಮಣ ಕಾಲವಾಗಿದೆ ಎಂದರು.ಇಡೀ ಭಾರತವೇ ಕರ್ನಾಟಕವನ್ನು ತಿರುಗಿ ನೋಡುವಂತಹ ಕಾಲ ಇದಾಗಿತ್ತು. ಈ ನಾಡು ಕಂಡ ಅಪೂರ್ವ ತತ್ವಜ್ಞಾನಿ ಹಾಗೂ ಅರ್ಥಶಾಸ್ತ್ರಜ್ಞ ಬಸವಣ್ಣನವರ ಹೊಸನ್ಮಂತರವನ್ನು ಸೃಷ್ಟಿಸಿದವು. ಅಂದಿನಿಂದ ಇವತ್ತಿನವರೆಗೂ ಜನರ ಮನಸ್ಸನ್ನು ಅಯಸ್ಕಾಂತದಂತೆ ಸೆಳೆಯುತ್ತಿದೆ.
ಬಸವಣ್ಣನವರು ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿ ಕುತೂಹಲ, ಜಾಣ್ಮೆ, ಜಾಗೃತಿಗಳನ್ನು ವ್ಯಕ್ತಪಡಿಸ ತೊಡಗಿದರು. ಬಸವಣ್ಣನವರು ತನ್ನ ಎಂಟನೇ ವರ್ಷದಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚಿನ ಜಾಣ್ಮೆ ಅವರಲ್ಲಿತ್ತು. ಬಸವಣ್ಣನವರ ಕ್ರಾಂತಿಕಾರಿಕ ಭಾವನೆಗಳು ಎಲ್ಲರೂ ಸಮಾನರು ಎಂಬ ಭಾವನೆ ಅಡಿಯಲ್ಲಿ ಲಿಂಗಾಯತ ಧರ್ಮ ಅಸ್ತಿತ್ವಕ್ಕೆ ತಂದಂತಹ ಮಹಾನ್ ಚೇತನ ಬಸವಣ್ಣ ಎಂದು ತಿಳಿಸಿದರು.ನಂತರ ಈಸೂರು ಜಯಪ್ಪ, ತಮ್ಮ ಉಪನ್ಯಾಸದಲ್ಲಿ ಬಸವಣ್ಣನವರು ಸಾಮಾಜಿಕ ಮತ್ತು ಧಾರ್ಮಿಕ ರಂಗದಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದರು. ಇಷ್ಟು ಲಿಂಗದ ಮಹತ್ವವನ್ನು ಜಗತ್ತಿಗೆ ಸಾರುವುದರೊಂದಿಗೆ ಲಿಂಗಾಯಿತ ಧರ್ಮ ಸ್ಥಾಪಿಸಿ, ಸಾಮಾಜಿಕ ರಂಗದಲ್ಲಿ ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಿದವರು.
ಚತುರ್ವರ್ಣ ಜಾತಿ ಪದ್ಧತಿಯ ಅಳಿಸಿದಂತಹ ಶ್ರೇಷ್ಠ ವ್ಯಕ್ತಿ. ಆಶ್ರಮ ಪದ್ಧತಿ, ಲಿಂಗ ಭೇದ, ಅಸ್ಪೃಶ್ಯತೆ, ಬ್ರಷ್ಟಾಚಾರ ನಿರ್ಮೂಲನ, ವೇಷೇ ಪದ್ಧತಿ ಹಾಗೂ ದೇವದಾಸಿ ಪದ್ಧತಿಗಳ ನಿರ್ಮೂಲನವನ್ನು ಮಾಡಿದವರು ಬಸವಣ್ಣನವರು. ಬಸವಣ್ಣನವರು ಅನುಭವ ಮಂಟಪ ಮೂಲಕ ಶಿವ ಶರಣರಿಗೆ ಸ್ವತಂತ್ರವಾಗಿ ಮಾತನಾಡಲು ಅವಕಾಶವನ್ನು ಕಲ್ಪಿಸಿದರು. ಸಾವಿರಾರು ಶಿವಶರಣರು ತಮ್ಮ ನಿತ್ಯ ಬದುಕಿನಲ್ಲಿ ಕಾಯಕ ದಾಸೋಹ, ಗುರುಲಿಂಗ ಜಂಗಮ ಮುಂತಾದವುಗಳನ್ನು ಪರಿಪಾದಿಸಿದ ವ್ಯಕ್ತಿ ಬಸವಣ್ಣ ಎಂದರು.ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ರಿಪ್ಪನ್ ಪೇಟೆಯ ವಿದ್ಯಾರ್ಥಿಗಳಾದ ಅದಿತಿಭೂಷಣ್, ಚಿನ್ಮಯಿ ಇವರುಗಳನ್ನು ಗೌರವಿಸಲಾಯಿತು.