ವಿದ್ಯುತ್‌ ಸ್ಪರ್ಶಿಸಿ 13 ಜಾನುವಾರು ಸಾವು

| Published : Aug 22 2024, 12:46 AM IST

ಸಾರಾಂಶ

ಯಮಕನಮರಡಿವಿದ್ಯುತ್‌ ಸ್ಪರ್ಶಿಸಿ 13 ಜಾನುವಾರುಗಳು ಮೃತಪಟ್ಟ ಘಟನೆ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಂಜೆ ಜರುಗಿದೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ವಿದ್ಯುತ್‌ ಸ್ಪರ್ಶಿಸಿ 13 ಜಾನುವಾರುಗಳು ಮೃತಪಟ್ಟ ಘಟನೆ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಂಜೆ ಜರುಗಿದೆ.

ಗ್ರಾಮದ ಮೂವರು ದನಗಳನ್ನು ಮೇಯಿಸಲು ಹೋಗಿದ್ದಾಗ ಸಂಜೆ ಮಳೆ ಬಂದಿದೆ. ಆಗ ದನಗಳನ್ನು ಹೊಡೆದುಕೊಂಡು ಮರಳುತ್ತಿದ್ದಾಗ ಕರಿಕಟ್ಟಿ-ಹಳೆವಂಟಮೂರಿ ಕೂಡುವ ರಸ್ತೆಯಲ್ಲಿ ಮಳೆಯಿಂದಾಗಿ ವಿದ್ಯುತ್‌ ಪ್ರವಹಿಸಿದ ವಿದ್ಯುತ್‌ ಕಂಬಕ್ಕೆ ತಾಗಿ 13 ಜಾನುವಾರು ಸ್ಥಳದಲ್ಲಿಯೇ ಅಸುನೀಗಿವೆ. ಮುತ್ತಪ್ಪ ಹುಚ್ಚಯಲ್ಲಪ್ಪ ಬಸರಗಿ ಅವರ 4 ಆಕಳು, 2 ಹೋರಿ, ಲಕ್ಷ್ಮಣ ಅಪ್ಪಯ್ಯ ಕಿಲಾರಗಿ ಅವರ 1 ಆಕಳು, 1 ಎಮ್ಮೆ ಮತ್ತು ಯಲ್ಲವ್ವ ನಿಂಗಪ್ಪ ಮಸ್ತಿ ಅವರ 5 ಆಕಳು ಸಾವಿಗೀಡಾಗಿವೆ.

ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಬುಕನಟ್ಟಿ, ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಪಿಎಸ್‌ಐ ಎಸ್.ಕೆ. ಮನ್ನೀಕೇರಿ, ಪಶುವೈದ್ಯಾಧಿಕಾರಿ ಸಿದ್ದಾರ್ಥ ಮೋಕಾಶಿ, ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕ ಮಾರುತಿ ಗುಟಗುದ್ದಿ ಭೇಟಿ ನೀಡಿ ಪರಿಶೀಲಿಸಿದರು.