ದಾಂಪತ್ಯಕ್ಕೆ ಕಾಲಿಟ್ಟ 13 ಜೋಡಿ

| Published : Dec 13 2023, 01:00 AM IST

ಸಾರಾಂಶ

ಕನಕಪುರ: ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.

ಕನಕಪುರ: ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.

ಶಿವಗಿರಿ ಕ್ಷೇತ್ರದ ಶಿವಾಲದಮೂರ್ತಿ ಅನ್ನದಾನ ಮಠದಲ್ಲಿ ಲಕ್ಷ ದೀಪೋತ್ಸವ ಮತ್ತು ಬಾಲಗಂಗಾಧರನಾಥ ಸ್ವಾಮಿಯವರ 50ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಗುರುವಂದನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಧರ್ಮ ಎಂದರೆ ಹಿಂದೂ ರ ಕ್ರಿಶ್ಚಿಯನ್, ಇಸ್ಲಾಂ ಧರ್ಮ ಅಲ್ಲಾ. ಎಲ್ಲಾ ಧರ್ಮಗಳನ್ನು ಪೂಜ್ಯ ಭಾವನೆಯಿಂದ ನೋಡಬೇಕು. ನವದಂಪತಿಗಳು ಹೊರ ಜಗತ್ತಿನೊಂದಿಗೆ ಆಧ್ಯಾತ್ಮಿಕ ಜೀವನ ನಡೆಸಿಕೊಂಡು ಹೋಗುವುದು ಧರ್ಮ. ಧರ್ಮ ನಮ್ಮನ್ನು ನೋಡಿಕೊಳ್ಳುತ್ತೆ ಅಜ್ಞಾನ ಹೋಗಿ ಜ್ಞಾನ ಬರಬೇಕಾದರೆ ಧರ್ಮದ ಹೆಸರಿನ ನಮ್ಮ ಒಳಗಿನ ಜ್ಞಾನ ನಾವು ಪಡೆದುಕೊಳ್ಳಬೇಕು. ಧರ್ಮದ ಬೆಳಕಿನಲ್ಲಿ ನಡೆಯಬೇಕು ಎಂದರು.

ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಶಿವಗಿರಿ ಕ್ಷೇತ್ರ ಪುರಾಣ ಪ್ರಸಿದ್ಧ ಸಿದ್ಧರು ತಪೋಗೈದ ಪುಣ್ಯಕ್ಷೇತ್ರ ದಲ್ಲಿ ಕಾರ್ತೀಕ ಮಾಸದ ಶುಭ ದಿನದಂದು 13 ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಿದ್ದು, ಉತ್ತಮ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಮರಳೆ ಗವಿಮಠದ ಪೀಠಾಧ್ಯಕ್ಷ ಮುಮ್ಮಡಿ ಶಿವರುದ್ರ ಮಹಾಸ್ವಾಮಿ ಮಾತನಾಡಿ, ಶ್ರಾವಣ ಮತ್ತು ಕಾರ್ತೀಕ ಎರಡು ಮಾಸಗಳು ತುಂಬಾ ಶ್ರೇಷ್ಠವಾದವು. ಮನುಷ್ಯನಲ್ಲಿರುವ ಕಲ್ಮಶ ತೊರೆದು ಸುಜ್ಞಾನ ತುಂಬುತ್ತವೆ. ಮನುಷ್ಯನ ಮುಕ್ತಿಗೆ ದಾರಿ ಮಾಡಿಕೊಡುತ್ತವೆ ಎಂದು ತಿಳಿಸಿದರು.

ಕಡೆಯ ಕಾತೀಕ ಸೋಮವಾರದ ಪ್ರಯುಕ್ತ ಸಹಸ್ರಾರು ಭಕ್ತರು ಶಿವಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಹರಗೂರು ಚರಮೂರ್ತಿಗಳು, ಆರ್‌ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಕೆ. ಶ್ರೀಕಂಠು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್, ತಹಸೀಲ್ದಾರ್ ಸ್ಮಿತಾರಾಮು, ರೈತ ಮುಖಂಡ ಚೀಲೂರು ಮುನಿರಾಜು ಉಪಸ್ಥಿತರಿದ್ದರು.11ಕೆಆರ್ ಎಂಎನ್‌ 11.ಜೆಪಿಜಿ

ಶಿವಗಿರಿ ಕ್ಷೇತ್ರದಲ್ಲಿ ಕಾರ್ತೀಕ ಮಾಸ ಹಾಗೂ ಬಾಲಗಂಗಾಧರನಾಥ ಸ್ವಾಮಿಗಳ 50ನೇ ವರ್ಷ ದ ಪಟ್ಟಾಭಿಷೇಕದ ಮಹೋತ್ಸವ ಹಾಗೂ ಸಾಮೂಜಿಕ ವಿವಾಹೋತ್ಸವಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.