ಬೇಬಿ ಬೆಟ್ಟದಲ್ಲಿ ಸರಳ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ 13 ಜೋಡಿಗಳು

| Published : Mar 14 2024, 02:01 AM IST

ಸಾರಾಂಶ

ನವ ವಿವಾಹಿತರಿಗೆ ವೈಯುಕ್ತಿಕವಾಗಿ ಚಿತ್ರನಟ ದರ್ಶನ್‌ ತೂಗದೀಪ್, ಚಿಕ್ಕಣ್ಣ, ಯಶಸ್‌ ಸೂರ್ಯ ಅವರು ಉಚಿತವಾಗಿ ಮಾಂಗಲ್ಯ, ವಾಚು, ಸೀರೆ, ಬಟ್ಟೆ ವಿತರಣೆ ಮಾಡಿದರು. ನಂತರ ನವ ಜೋಡಿಗಳ ಜತೆಯಲ್ಲಿ ಚಿತ್ರನಟ ದರ್ಶನ್‌ ತೂಗದೀಪ್, ಚಿಕ್ಕಣ್ಣ, ಯಶಸ್‌ ಸೂರ್ಯ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹಲವು ಗಣ್ಯರು ಫೋಟೋ ತೆಗೆಸಿಕೊಂಡರು. ಗಣ್ಯರು ದಂಪತಿಗಳಿಗೆ ಆಶೀರ್ವಾದ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರೆ ಅಂಗವಾಗಿ ಬುಧವಾರ ನಡೆದ ಉಚಿತ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 13 ಜೋಡಿಗಳು ದಾಂಪತ್ಯ ಜೀವಕ್ಕೆ ಕಾಲಿಟ್ಟರು.

ಜಾತ್ರಾ ಆವರಣದಲ್ಲಿ ನಡೆದ ಸರಳ ವಿವಾಹ ಮಹೋತ್ಸವದಲ್ಲಿ ಬೆಳಗ್ಗೆ 9.10ರಿಂದ 9.40ರವರ ಸಲ್ಲುವ ಮೇಷ ಶುಭಲಗ್ನದಲ್ಲಿ ಶ್ರೀಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ನೂತನ ವಧು- ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನವ ವಿವಾಹಿತರಿಗೆ ವೈಯುಕ್ತಿಕವಾಗಿ ಚಿತ್ರನಟ ದರ್ಶನ್‌ ತೂಗದೀಪ್, ಚಿಕ್ಕಣ್ಣ, ಯಶಸ್‌ ಸೂರ್ಯ ಅವರು ಉಚಿತವಾಗಿ ಮಾಂಗಲ್ಯ, ವಾಚು, ಸೀರೆ, ಬಟ್ಟೆ ವಿತರಣೆ ಮಾಡಿದರು. ನಂತರ ನವ ಜೋಡಿಗಳ ಜತೆಯಲ್ಲಿ ಚಿತ್ರನಟ ದರ್ಶನ್‌ ತೂಗದೀಪ್, ಚಿಕ್ಕಣ್ಣ, ಯಶಸ್‌ ಸೂರ್ಯ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹಲವು ಗಣ್ಯರು ಫೋಟೋ ತೆಗೆಸಿಕೊಂಡರು. ಗಣ್ಯರು ದಂಪತಿಗಳಿಗೆ ಆಶೀರ್ವಾದ ಮಾಡಿದರು.

ಈ ವೇಳೆ ಚಿತ್ರನಟ ದರ್ಶನ್‌ ತೂಗದೀಪ್ ಮಾತನಾಡಿ, ಮೈಸೂರು ಪ್ರಾಂತ್ಯದಲ್ಲಿ ವಿಜೃಂಭಣೆಯಿಂದ ನಡೆಯುವ ಜಾತ್ರೆ ಎಂದರೆ ಅದು ಬೇಬಿಬೆಟ್ಟದ ಭಾರೀ ದನಗಳ ಜಾತ್ರೆ. ಜಾತ್ರೆಯಲ್ಲಿ ನಾನು ಸಹ ಎತ್ತುಗಳನ್ನು ಕಟ್ಟಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಜಾಗ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಜಾಗಸಿಕ್ಕರೆ ನಾವು ಸಹ ಎತ್ತುಗಳನ್ನು ಕಟ್ಟುತ್ತೇನೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮಾಡುವ ಎಲ್ಲ ಕೆಲಸಗಳು ಸಾಕಷ್ಟು ಅರ್ಥ ಪೂರ್ಣವಾಗಿರುತ್ತದೆ. ಹಾಗಾಗಿ ಅವರು ಕರೆಯುವ ಯಾವುದೇ ಕಾರ್‍ಯಕ್ರಮಕ್ಕೂ ನಾನು ಇಲ್ಲ ಎನ್ನೋದಿಲ್ಲ. ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಲ್ಲರು ತಮ್ಮ ದಾಂಪತ್ಯ ಜೀವನದಲ್ಲಿ ಸುಖವಾಗಿ ಜೀವನ ನಡೆಸಿ ಎಂದರು.