ಸಾರಾಂಶ
ಈ ಮೇಳದಲ್ಲಿ ಒಟ್ಟು ೧೯೪ ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿದ್ದು, ಲಿಖಿತ ಪರೀಕ್ಷೆ ನಡೆಸಿ ಮತ್ತು ೫೨ ವಿದ್ಯಾರ್ಥಿನಿಯರ ಸಂದರ್ಶನ ನಡೆದು, ಕೊನೆಯಲ್ಲಿ ೨೯ ವಿದ್ಯಾರ್ಥಿನಿಯರು ಆಯ್ಕೆಯಾಗಿ ಅಂತಿಮವಾಗಿ ೧೩ ವಿದ್ಯಾರ್ಥಿನಿಯರಿಗೆ ಆಫರ್ ಲೆಟರನ್ನು ನೀಡಲಾಯಿತು. ಉಳಿದ ೧೬ ವಿದ್ಯಾರ್ಥಿನಿಯರು ಕಾದಿರಿಸಿದ ಪಟ್ಟಿಯಲ್ಲಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಮತ್ತು ಬೆಂಗಳೂರಿನ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ (ಎಚ್.ಪಿ.ಇ) ವತಿಯಿಂದ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ನಡೆಸಲಾಯಿತು.ಈ ಮೇಳದಲ್ಲಿ ಒಟ್ಟು ೧೯೪ ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿದ್ದು, ಲಿಖಿತ ಪರೀಕ್ಷೆ ನಡೆಸಿ ಮತ್ತು ೫೨ ವಿದ್ಯಾರ್ಥಿನಿಯರ ಸಂದರ್ಶನ ನಡೆದು, ಕೊನೆಯಲ್ಲಿ ೨೯ ವಿದ್ಯಾರ್ಥಿನಿಯರು ಆಯ್ಕೆಯಾಗಿ ಅಂತಿಮವಾಗಿ ೧೩ ವಿದ್ಯಾರ್ಥಿನಿಯರಿಗೆ ಆಫರ್ ಲೆಟರನ್ನು ನೀಡಲಾಯಿತು. ಉಳಿದ ೧೬ ವಿದ್ಯಾರ್ಥಿನಿಯರು ಕಾದಿರಿಸಿದ ಪಟ್ಟಿಯಲ್ಲಿದ್ದಾರೆ.
ಈ ಮೇಳವನ್ನು ಎಚ್.ಪಿ.ಇ. ಕಂಪನಿಯ ಸೀನಿಯರ್ ಫೈನಾನ್ಸ್ ಮ್ಯಾನೇಜರ್ ಪ್ರಶಾಂತ್ ಎಚ್.ವಿ. ಉದ್ಘಾಟಿಸಿದರು. ಇನ್ನೋರ್ವ ಅಧಿಕಾರಿ ಸಚಿನ್ ಷಾ ಆಯ್ಕೆ ಪ್ರಕ್ರಿಯೆ ನಡೆಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ. ಉಪಸ್ಥಿತರಿದ್ದರು. ಪ್ಲೇಸ್‌ಮೆಂಟ್ ಸಂಚಾಲಕ ಡಾ. ಉಮೇಶ್ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ಲೇಸ್‌ಮೆಂಟ್ ವಿಭಾಗದ ನಾಯಕಿಯರಾದ ಭಾರ್ಗವಿ ಎಸ್. ಹಾಗೂ ಮೇಘಾ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದರು. ವಿದ್ಯಾರ್ಥಿನಿಯರಾದ ಫರೀನ್ ನಿರೂಪಿಸಿದರು. ಹುಸ್ನಾ ಸ್ವಾಗತಿಸಿದರು. ನಿಶಾ ವಂದಿಸಿದರು.