ಹಿರೇಗದ್ದೆ ಪಿಎಸಿಎಸ್‌ಗೆ ₹13 ಲಕ್ಷ ಲಾಭ: ರತ್ನಾಕರ್‌

| Published : Sep 22 2024, 01:46 AM IST

ಸಾರಾಂಶ

ಬಾಳೆಹೊನ್ನೂರು, ಹಿರೇಗದ್ದೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ ರು.13 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಚ್.ರತ್ನಾಕರ್ ತಿಳಿಸಿದರು.

ಪಿಎಸಿಎಸ್ ಸಭಾಂಗಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಮಹಾಸಭೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹಿರೇಗದ್ದೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ ರು.13 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಚ್.ರತ್ನಾಕರ್ ತಿಳಿಸಿದರು.ಹಿರೇಗದ್ದೆ ಪಿಎಸಿಎಸ್ ಸಭಾಂಗಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಸದಸ್ಯರು ಉತ್ತಮವಾಗಿ ಸಂಘದಲ್ಲಿ ವ್ಯವಹಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಘ ಸತತವಾಗಿ ಲಾಭ ಗಳಿಸಲು ಸಾಧ್ಯವಾಗಿದ್ದು, ಸದಸ್ಯರ ಪರಿಶ್ರಮವೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಈ ಬಾರಿ ಷೇರುದಾರ ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ ಮಾಡಲಾಗಿದೆ.

ಸಂಘದ ಸದಸ್ಯ ರೈತರಿಗೆ ಸಂಘದಲ್ಲಿ ವಾಹನ, ಗೃಹ ನಿರ್ಮಾಣ ಸಾಲ ಹಾಗೂ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಂಘದ ಉಗ್ರಾಣದಲ್ಲಿ ದಾಸ್ತಾನು ಮಾಡುವುದರೊಂದಿಗೆ ಬೆಳೆ ಸಾಲಕ್ಕೆ ಹೊಂದಾಣಿಕೆ ಮುಖಾಂತರ ಸಾಲ ನವೀಕರಿಸಲು ಅವಕಾಶ ಮಾಡಿಕೊಡಲಾಗಿದೆ. ಸಂಘ ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನೂ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ಕೆ.ಬಿ.ಪುಟ್ಟಪ್ಪಪೂಜಾರಿ, ನಿರ್ದೇಶಕರಾದ ಎಸ್.ಎನ್.ನಾರಾಯಣ, ಕೆ.ಎಸ್.ಸುಭಾಶ್, ಎಚ್.ಎಚ್.ದಯಾನಂದ, ಕೆ.ಸಿ.ಕಳಸಪ್ಪನಾಯಕ್, ಎಚ್.ಎನ್.ಶ್ವೇತಾ, ಕೆ.ಎಂ.ಪ್ರಭಾಕರ, ಎಂ.ಆರ್.ರಾಜುಪೂಜಾರಿ, ಎಚ್.ಆರ್.ಸುಧಾಮಣಿ, ಡಿಸಿಸಿ ಬ್ಯಾಂಕ್ ಮೇಲ್ವಿ ಚಾರಕ ಎಂ.ಡಿ.ರಾಜೇಶ್, ಸಂಘದ ಸಿಇಓ ಜಿ.ಆರ್. ಸಂತೋಷ್‌ಕುಮಾರ್, ಸಿಬ್ಬಂದಿ ಡಿ.ಜಿ. ಅನ್ವಿಕ್, ಕೆ.ಎಸ್.ಆದರ್ಶ, ಸದಾನಂದ, ಕೆ.ಆರ್. ಅರುಣ್‌ಕುಮಾರ್ ಮತ್ತಿತರರು ಹಾಜರಿದ್ದರು.೨೦ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಕೆ.ಎಚ್. ರತ್ನಾಕರ್ ಉದ್ಘಾಟಿಸಿದರು. ಪುಟ್ಟಪ್ಪಪೂಜಾರಿ, ನಾರಾಯಣ, ಸುಭಾಶ್, ದಯಾನಂದ, ಸಂತೋಷ್‌ಕುಮಾರ್ ಇದ್ದರು.