ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೈಗೊಂಡಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು,ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೪,೨೭,೪೬೨ ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೈಗೊಂಡಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು,ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೪,೨೭,೪೬೨ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನಡೆದ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿದರು.ಆಗಸ್ಟ್ ೨೪ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಯಲ್ಲಿ ೧೪,೦೮,೩೬೪ ಮತದಾರರಿದ್ದರು. ಕರಡು ಪಟ್ಟಿ ಪ್ರಕಟಿಸಿದ ಬಳಿಕ ನಕ್ಷೆ ಹೊಂದಾಣಿಕೆಯಾಗದ ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಒಟ್ಟು ೧,೫೦,೨೬೯ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ನಿಯಮಾನುಸಾರ ವಿಲೇವಾರಿ ಮಾಡಿದ ಬಳಿಕ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.ಎಸ್‌ಐಆರ್ ಪ್ರಕ್ರಿಯೆಯ ಅವಧಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳ ಕೈಬಿಡುವಿಕೆ, ಹೊಸ ಮತದಾರರ ಸೇರ್ಪಡೆ ಹಾಗೂ ಮತದಾರರ ವಿವರಗಳ ತಿದ್ದುಪಡಿ ಸೇರಿದಂತೆ ಅಗತ್ಯ ಪರಿಷ್ಕರಣೆಗಳನ್ನು ಕೈಗೊಳ್ಳಲಾಗಿತ್ತು.೨೮,೦೬೧ ಮಹಿಳಾ ಮತದಾರರು ಹೆಚ್ಚುಜಿಲ್ಲೆಯ ಅಂತಿಮ ಪಟ್ಟಿಯಲ್ಲಿ ೬,೯೯,೬೫೭ ಪುರುಷರು, ೭,೨೭,೭೧೮ ಮಹಿಳೆಯರಿದ್ದು, ಪುರುಷರಿಗಿಂತ ೨೮,೦೬೧ ಮಹಿಳೆಯರು ಹೆಚ್ಚಿದ್ದಾರೆ. ೮೭ ತೃತೀಯ ಲಿಂಗದ ಮತದಾರರಿದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ೧೯,೦೯೮ ಮತದಾರರ ನಿವ್ವಳ ಹೆಚ್ಚಳವಾಗಿದೆ.ಮಳವಳ್ಳಿ ಕ್ಷೇತ್ರದಲ್ಲಿ ೨,೨೬,೩೫೨, ಮದ್ದೂರಿನಲ್ಲಿ ೧,೯೬,೯೯೩, ಮೇಲುಕೋಟೆಯಲ್ಲಿ ೧,೯೬,೨೫೩, ಮಂಡ್ಯದಲ್ಲಿ ೧,೯೬,೨೧೮, ಶ್ರೀರಂಗಪಟ್ಟಣದಲ್ಲಿ ೨,೦೧,೨೮೫, ನಾಗಮಂಗಲದಲ್ಲಿ ೨,೦೩,೬೭೨ ಹಾಗೂ ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ ೨,೦೬,೬೮೯ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧,೮೮೯ ಮತಗಟ್ಟೆಗಳಿವೆ.ಜಿಲ್ಲೆಯಲ್ಲಿ ೨೪,೨೮೯ ಯುವ ಮತದಾರರುಜಿಲ್ಲೆಯಲ್ಲಿ ೨೪,೨೮೯ ಯುವ ಮತದಾರರು, ೨೦,೬೯೨ ವಿಕಲಚೇತನ ಮತದಾರರು ಹಾಗೂ ೮೫ ವರ್ಷ ಮೇಲ್ಪಟ್ಟ ೧೬,೨೬೩ ಮತದಾರರಿದ್ದಾರೆ. ೫೮೦ ಸೇವಾ ಮತದಾರರು ಮತ್ತು ಐವರು ಅನಿವಾಸಿ ಭಾರತೀಯ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.ಜಿಲ್ಲೆಯ ಅಂದಾಜು ಜನಸಂಖ್ಯೆ ೨೦,೩೬,೫೫೭ಕ್ಕೆ ಹೋಲಿಸಿದರೆ ಮತದಾರರ ಪ್ರಮಾಣ ಶೇ. ೭೦.೦೯ರಷ್ಟಿದೆ. ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಾಗಿದೆ.ಆನ್‌ಲೈನ್‌ನಲ್ಲಿ ಮತದಾರರ ವಿವರ ಪರಿಶೀಲನೆಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ (ಠಿಠಿ://್ಚಛಿಟ.ಚ್ಟ್ಞಠಿ.ಜಟ.ಜ್ಞಿ/) ಹಾಗೂ ಭಾರತ ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್ (ಠಿಠಿ://ಟಠಿಛ್ಟಿ.ಛ್ಚಿಜಿ.ಜಟ.ಜ್ಞಿ/) ಮೂಲಕ ಪರಿಶೀಲಿಸಬಹುದು. ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹರು ನಮೂನೆ-೬ರ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿನ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ನಮೂನೆ-೮ರ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.ಅಂತಿಮ ಮತದಾರರ ಪಟ್ಟಿಯ ಭಾವಚಿತ್ರ ಸಹಿತ ಪ್ರತಿಯನ್ನು ಹಾಗೂ ಭಾವಚಿತ್ರ ರಹಿತ ಡಿಜಿಟಲ್ ಪ್ರತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಯಿತು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹಾಗೂ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

೨೪.೮.೨೦೨೬ರಿಂದ ಈವರೆಗೆ ಮತದಾರರ ಪಟ್ಟಿಯಿಂದ ಕೈಬಿಟ್ಟವರು

ತಾಲೂಕು ಕೈಬಿಟ್ಟವರು ಮೃತ ವರ್ಗಾವಣೆ ಗೈರು ಎರಡು ಕಡೆ ಹಕ್ಕು ಇತರರು

ಮಳವಳ್ಳಿ ೨೪೦ ೩೮ ೭೮ ೧೮ ೧೦೫ ೦೧ಮದ್ದೂರು ೧೩೭ ೩೨ ೩೧ ೦೦ ೭೪ ೦೦ಮೇಲುಕೋಟೆ ೧೨೮ ೧೬ ೦೪ ೦೯ ೯೯ ೦೦ಮಂಡ್ಯ ೯೮ ೪೦ ೦೪ ೦೦ ೫೦ ೦೪ಶ್ರೀರಂಗಪಟ್ಟಣ ೬೮ ೩೨ ೧೪ ೦೦ ೨೨ ೦೦ನಾಗಮಂಗಲ ೧೨೬ ೩೦ ೯೨ ೦೦ ೦೪ ೦೦ಕೆ.ಆರ್.ಪೇಟೆ ೯೯ ೨೬ ೩೦ ೦೧ ೪೨ ೦೦

ಒಟ್ಟು ೮೯೬ ೨೧೪ ೨೫೩ ೨೮ ೩೯೬ ೦೫೨೪.೮.೨೦೨೬ರಿಂದ ಹೊಸದಾಗಿ ನೋಂದಣಿಯಾದ ಮತದಾರರು

ತಾಲೂಕು ಸೇರ್ಪಡೆ ರದ್ದು ಮಾರ್ಪಾಡು ಒಟ್ಟುಮಳವಳ್ಳಿ ೪,೨೯೫ ೭೫೯ ೩,೬೫೧ ೩,೫೩೬ಮದ್ದೂರು ೩,೧೭೫ ೫೧೫ ೩,೫೩೦ ೨,೬೬೦ಮೇಲುಕೋಟೆ ೪,೨೩೪ ೧,೫೭೩ ೨,೧೫೨ ೨,೬೬೧ಮಂಡ್ಯ ೨,೮೧೮ ೩೮೮ ೩,೬೫೪ ೨,೪೩೦ಶ್ರೀರಂಗಪಟ್ಟಣ ೩,೧೩೭ ೫೫೦ ೩,೦೯೦ ೨,೫೮೭ನಾಗಮಂಗಲ ೩,೧೨೦ ೬೩೩ ೨,೯೦೨ ೨,೪೮೭ಕೆ.ಆರ್.ಪೇಟೆ ೩,೪೬೧ ೭೨೪ ೨,೩೦೦ ೨,೭೩೭

ಒಟ್ಟು ೨೪,೨೪೦ ೫,೧೪೨ ೨೧,೨೭೯ ೧೯೦೯೮