ಜಿಲ್ಲೆಯಲ್ಲಿ ೨೦೦೨ ರ ಮತದಾರರ ಪಟ್ಟಿಯ ೨೩,೬೪೧ ಮತದಾರರು ಯಾವುದೇ ಮ್ಯಾಪಿಂಗ್ ಆಗದೆ (ಓo ಒಚಿಠಿಠಿiಟಿg) ವಿಧಗಳಾಗಿ ವಿಂಗಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿರುವ ಪೈಕಿ ವ್ಯತ್ಯಾಸಗಳಿರುವ ೨೩,೬೪೧ ಮತದಾರರು ಸೇರಿ ಒಟ್ಟು ೭೯,೭೭೮ ಮತದಾರರಿರುತ್ತಾರೆ.
ಕನ್ಡನಪ್ರಭ ವಾರ್ತೆ ಹಾಸನ
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಹಸ್ತಾಂತರ ಮಾಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉತ್ತಮ ಸಲಹೆ, ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.
ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪೂರ್ವದಲ್ಲಿ ೧೫,೪೨,೮೦೨ ಮತದಾರರಿದ್ದರು. ಮರಣ ಹೊಂದಿದವರು, ಪುನರಾವರ್ತನೆ, ಶಾಶ್ವತ ಸ್ಥಳಾಂತರ ಹಾಗೂ ವಿವಿಧ ಕಾರಣಗಳಿಂದ ೨೯೯೦ ಗಳು, ಡಿಲೀಟ್ ಮಾಡಲಾಗಿದ್ದು, ಅಂತಿಮವಾಗಿ ೧೩,೯೩,೯೦೮ ಮತದಾರರು ಇದ್ದು, ಈ ಪೈಕಿ ೬,೮೮,೭೬೧ ಪುರುಷರು, ೭,೦೫,೧೧೫ ಮಹಿಳೆಯರು, ೩೨ ತೃತೀಯ ಲಿಂಗದವರು ಸೇರಿರುತ್ತಾರೆ.ಅಂತಿಮ ಮತದಾರರ ಪಟ್ಟಿಯನ್ನು ಈ ಕಚೇರಿಯೂ ಸೇರಿದಂತೆ ಎಲ್ಲಾ ಮತದಾರರ ನೋಂದಣಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ, ಆಯಾ ಮತಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ. ಅದೇ ರೀತಿ ಜಿಲ್ಲಾ ವೆಬ್ಸೈಟ್ನಲ್ಲಿ ಸಾರ್ವಜನಿಕರು ಹಾಗೂ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಖಾತರಿಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗದ ಶೇಕಡ ೧೦೦% ಗಣತಿ ನಮೂನೆಗಳ (ಇಟಿumeಡಿಚಿಣioಟಿ ಈoಡಿms) ಗಣಕೀಕರಣ (ಆigiಣizಚಿಣioಟಿ) ಕಾರ್ಯ ಸಂಪೂರ್ಣಗೊಳಿಸಲಾಗಿದೆ. ಈ ಪೈಕಿ ಮತದಾರರಿಂದ ಭರ್ತಿ ಮಾಡಿ ಸ್ವೀಕೃತವಾದ ಶೇಕಡ ೮೯.೧೬% (೧೩,೭೫,೫೧೭) ರಷ್ಟು ಗಣತಿ ನಮೂನೆಗಳನ್ನು (ಇಟಿumeಡಿಚಿಣioಟಿ ಈoಡಿms) ತಂತ್ರಾಂಶದಲ್ಲಿ ಗಣಕೀಕರಣ (ಆigiಣizಚಿಣioಟಿ) ಮಾಡಲಾಗಿರುತ್ತದೆ. ಶೇಕಡ ೧೦.೮೪% (೧,೬೭,೨೮೫) ರಷ್ಟು ಮತದಾರರನ್ನು ಸಂಗ್ರಹಿಸಲಾಗದ ಗಣತಿ ನಮೂನೆಗಳು (Uಟಿಛಿoಟಟeಛಿಣಚಿbಟe ಇಟಿumeಡಿಚಿಣioಟಿ ಈoಡಿms) ಎಂದು ಃಐಔ ತಂತ್ರಾಂಶದಲ್ಲಿ Uಠಿಜಚಿಣioಟಿ ಮಾಡಲಾಗಿದೆ.
ಜಿಲ್ಲೆಯಲ್ಲಿ ೨೦೦೨ ರ ಮತದಾರರ ಪಟ್ಟಿಯ ೨೩,೬೪೧ ಮತದಾರರು ಯಾವುದೇ ಮ್ಯಾಪಿಂಗ್ ಆಗದೆ (ಓo ಒಚಿಠಿಠಿiಟಿg) ವಿಧಗಳಾಗಿ ವಿಂಗಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿರುವ ಪೈಕಿ ವ್ಯತ್ಯಾಸಗಳಿರುವ (ಂಟಿomಚಿಟies/ಆisಛಿಡಿiಠಿeಟಿಛಿಥಿ) ೨೩,೬೪೧ ಮತದಾರರು ಸೇರಿ ಒಟ್ಟು ೭೯,೭೭೮ ಮತದಾರರಿರುತ್ತಾರೆ.ಭಾರತ ಚುನಾವಣಾ ಆಯೋಗದ ನಿಗಧಿಪಡಿಸಿರುವ ನೋಟೀಸ್ ತೀರುವಳಿ ಅವಧಿಯಲ್ಲಿ ಸದರಿ ನೋಟೀಸ್ ನೀಡಲಾಗಿರುವ ೭೯,೭೭೮ ಮತದಾರರ ಪೈಕಿ ೭೬,೭೮೪ ಮತದಾರರ ವಿಚಾರಣೆ ನಡೆಸಿ, ದಾಖಲಾತಿಗಳನ್ನು ಪಡೆದು, ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿರುತ್ತದೆ. ಉಳಿದಂತೆ ೨,೯೯೦ ಮತದಾರರನ್ನು ಮರಣ, ಶಾಶ್ವತ ವಲಸೆ, ನಕಲು ಹಾಗೂ ಇತರೆ ಕಾರಣಗಳಿಂದ ಅನರ್ಹರು (Iಟಿeಟigibಟe) ಎಂದು ಗುರುತಿಸಿ ಮತದಾರರಿಗೆ ಸೇರ್ಪಡೆ ಮಾಡಲಾಗಿರುವುದಿಲ್ಲ ಎಂದು ತಿಳಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ಡಿ.ಜಿ., ಬಹುಜನ ಸಮಾಜ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಧರ್ ಬಹುಜನ್, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್ಟ್) ಕಾರ್ಯದರ್ಶಿ ಎಚ್.ಆರ್ ನವೀನ್ ಕುಮಾರ್, ಜನತಾದಳ (ಎಸ್) ಜಿಲ್ಲಾಧ್ಯಕ್ಷ ನಟರಾಜ್ ಐಸ್ವಾಮಿಗೌಡ ಹಾಗೂ ಮತ್ತಿತರರು ಹಾಜರಿದ್ದರು.