ಇಂದು ಮಧ್ವಮಂಟಪದಲ್ಲಿ ದಾಖಲೆಗಾಗಿ 100 ಕಲಾವಿದರಿಂದ 14 ಗಂಟೆ ನೃತ್ಯ

| Published : Oct 17 2024, 12:08 AM IST / Updated: Oct 17 2024, 12:09 AM IST

ಸಾರಾಂಶ

100 ಮಂದಿ ಕಲಾವಿದರಿಂದ ನಿರಂತರ 14 ಗಂಟೆಗಳ ನೃತ್ಯ ಕಾರ್ಯಕ್ರಮ ಅ. 17ರಂದು ಮಧ್ವ ಮಂಟಪದಲ್ಲಿ ಆಯೋಜಿಸಲಾಗಿದೆ. ಏ ಶ್ರೇಣಿಯ ಕಲಾವಿದರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಪುತ್ತಿಗೆ ಮಠ ಹಾಗೂ ಕೃಷ್ಣ ಮಠದ ಆಶ್ರಯದಲ್ಲಿ ಅಭಿಗ್ನಾ ನೃತ್ಯಾಲಯಂ ವತಿಯಿಂದ ಕರ್ನಾಟಕ ಅಚೀವರ್ಸ್​ ಬುಕ್​ ಆಫ್​ ರೆಕಾರ್ಡ್ಸ್​ ದಾಖಲೆಗಾಗಿ 100 ಮಂದಿ ಕಲಾವಿದರಿಂದ ನಿರಂತರ 14 ಗಂಟೆಗಳ ನೃತ್ಯ ಕಾರ್ಯಕ್ರಮ ಅ.17 ರಂದು ಮಧ್ವ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ನೃತ್ಯಾಲಯದ ಮುಖ್ಯಸ್ಥೆ ಚಂದ್ರಭಾನು ಚತುರ್ವೇದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೈದರಾಬಾದ್​, ವಾರಂಗಲ್​, ವಿಜಯವಾಡ, ಚೆನ್ನೈ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರು ಕರ್ನಾಟಕ ಶಾಸ್ತ್ರೀಯ ನೃತ್ಯ, ಭರತನಾಟ್ಯಂ, ಕೂಚುಪುಡಿ, ಆಂಧ್ರನಾಟ್ಯಂ, ವೋಕಲ್​ ಸೇರಿದಂತೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಮಧ್ವಮಂಟಪದಲ್ಲಿ ನೃತ್ಯ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ರಾತ್ರಿ 9 ಗಂಟೆಗೆ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ. ಸುಮಾರು 5 ವರ್ಷದಿಂದ 60 ವರ್ಷದವರೆಗಿನ ಎ ಶ್ರೇಣಿಯ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಳಗ್ಗೆ 9 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಅಚೀವರ್ಸ್​ ಬುಕ್​ ಆಫ್​ ರೆಕಾರ್ಡ್ಸ್​ ಅನುಷಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಪುತ್ತಿಗೆ ಮಠ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ರವೀಂದ್ರ ಆಚಾರ್ಯ, ಚಂದ್ರಮೋಹನ್​ ಉಪಸ್ಥಿತರಿದ್ದರು.