ರೋಣ: ಪಟ್ಟಣದ ಸಮೀಪ ಜಿಗಳೂರು ರಸ್ತೆಯಲ್ಲಿರುವ ಮೆಹಬೂಬ ಭಾಷಾಸಾಬ ಮುಲ್ಲಾ ಎಂಬವರಿಗೆ ಸೇರಿದ ತಗಡಿನ ಶೆಡ್ಡಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ದಾಸ್ತಾನು ಶೆಡ್ ಮೇಲೆ ಮಂಗಳವಾರ ಆಹಾರ ವಿಭಾಗ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ದಾಳಿ‌ ನಡೆಸಿ 14 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿ‌ ಮೇರೆಗೆ ಪಡಿತರ ಆಹಾರ ವಿಭಾಗ ನಿರೀಕ್ಷಕಿ ಸುವರ್ಣಾ ಜಮ್ಮನಕಟ್ಟಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಪಟ್ಟಣದ ಜಿಗಳೂರ ರಸ್ತೆಯಲ್ಲಿರುವ ಮೆಹಬೂಬ ಭಾಷಾಸಾಬ ಮುಲ್ಲಾ ಇವರ ಶೆಡ್ಡಿನಲ್ಲಿ ಅಕ್ರಮವಾಗಿ ಸಂಗ್ರಹಿದ್ದ ಅಕ್ಕಿ ದಾಸ್ತಾನಿನ‌ ಮೇಲೆ ದಾಳಿ‌ ನಡೆಸಿದರು.40 ಕೆಜಿಯ 35 ಪ್ಯಾಕೆಟ್(ಮೂಟೆ)ಗಳಲ್ಲಿ ಸಂಗ್ರಹಿಸಿದ 14 ಕ್ವಿಂಟಲ್ ಅಕ್ಕಿ, ಅಂದಾಜು ‌ಮೌಲ್ಯ 31,500 ರು. ಎಂದು ಅಂದಾಜಿಸಲಾಗಿದೆ. ಈ ಕುರಿತು ಮಹಬೂಬ ಮುಲ್ಲಾ ಮೇಲೆ‌ ರೋಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ

ಗದಗ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ ಎಂದು ಕೃಷಿ ಅಧಿಕಾರಿ ಅಶೋಕ ಇಂಗಳಹಳ್ಳಿ ತಿಳಿಸಿದರು.ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ 29ನೇ ಜಿಲ್ಲಾ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್- 2026 ಸ್ಪರ್ಧೆಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಯೋಗಾಭ್ಯಾಸದಲ್ಲಿ ನಿರತರಾದರೆ ಅವರು ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕವಾಗಿ ಸಮರ್ಥರಾಗಿ ಬೆಳೆಯುವರು ಎಂದರು.ಅಧ್ಯಕ್ಷತೆ ವಹಿಸಿದ್ದ ದೈಹಿಕ ಉಪನ್ಯಾಸಕ ಖಯಾಮ ನವಲೂರ ಮಾತನಾಡಿ, ಮಕ್ಕಳನ್ನು ಮೊದಲ್ಗೊಂಡು ಯುವಜನತೆ ಹಾಗೂ ವೃದ್ಧರೆಲ್ಲರೂ ಒಂದಿಲ್ಲೊಂದು ತೊಂದರೆಗಳನ್ನು ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಮಾನಸಿಕ ಸ್ಥಿರತೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಮಾನಸಿಕ ಸ್ಥಿರತೆಗೆ ನಮ್ಮ ಜೀವನಶೈಲಿ ಬದಲಾಗಬೇಕು. ಆಶೆಗಳನ್ನು ಕಡಿಮೆಗೊಳಿಸಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸ್ವಾರ್ಥ ಬಿಟ್ಟು ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಇವುಗಳ ಪಾಲನೆಯಿಂದ ಮನಸ್ಸು ಸ್ಥಿರಗೊಳ್ಳುವುದು ಎಂದರು.

ಈ ವೇಳೆ ಇಂಗಳಹಳ್ಳಿ, ಅಕ್ಷಯ ಇಂಗಳಹಳ್ಳಿ, ಕೆ.ಎಸ್. ಪಲ್ಲೇದ ಸೇರಿದಂತೆ ಕ್ರೀಡಾಪಟುಗಳು, ಪಾಲಕರು ತರಬೇತುದಾರರು, ನಿರ್ಣಾಯಕರು ಇದ್ದರು. ವೀಣಾ ಮಾಲಿಪಾಟೀಲ ಪ್ರಾರ್ಥಿಸಿದರು. ಚೇತನ ಚುಂಚಾ ಸ್ವಾಗತಿಸಿದರು. ರೇಷ್ಮಾ ಹಡಪದ ನಿರೂಪಿಸಿದರು.