ಸಾರಾಂಶ
ಎಂದಿನಂತೆ ಮನೆಯ ಮುಂಭಾಗದ ಕೊಟ್ಟಿಗೆಯಲ್ಲಿ ಕುರಿಗಳು ತಂಗಿದ್ದವು. ಏಕಾಏಕಿ ಸಿಡಿಲು ಬಡಿದು ಈ ಘಟನೆ ಸಂಭವಿಸಿದೆ.
ಕುರುಗೋಡು: ಸಿಡಿಲು ಬಡಿದು ೧೪ ಕುರಿ ಮೃತಪಟ್ಟ ಘಟನೆ ತಾಲೂಕಿನ ಚಾನಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚಾನಾಳು ಗ್ರಾಮದ ಕುರೇರು ಹನುಮೇಶ ಎಂಬವರಿಗೆ ಸೇರಿದ ಕುರಿಗಳು ಎಂದು ಗುರುತಿಸಲಾಗಿದೆ.ಮಂಗಳವಾರ ತಡರಾತ್ರಿ ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಎಂದಿನಂತೆ ಮನೆಯ ಮುಂಭಾಗದ ಕೊಟ್ಟಿಗೆಯಲ್ಲಿ ಕುರಿಗಳು ತಂಗಿದ್ದವು. ಏಕಾಏಕಿ ಸಿಡಿಲು ಬಡಿದು ಈ ಘಟನೆ ಸಂಭವಿಸಿದೆ.
ಪಶುವೈದ್ಯ ಡಾ.ಮಂಜುನಾಥ, ಪಿಡಿಒ ಮಹೇಶ್ ರೆಡ್ಡಿ, ಎಎಸ್ಐ ಅಜೀಮ್, ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಘಟ್ಟ ತಾಂಡಾದಲ್ಲಿ ಸಿಡಿಲಿಗೆ ಎತ್ತು ಬಲಿ:ಹರಪನಹಳ್ಳಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಇಲ್ಲಿನ ರಾಮಘಟ್ಟ ತಾಂಡಾದಲ್ಲಿ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದೆ.ತಾಂಡಾದ ಬಿ. ಶೇಖರನಾಯ್ಕ ಅವರ ಕಣದಲ್ಲಿದ್ದ ಎತ್ತು ಸಿಡಿಲು ಬಡಿದು ಅಸುನೀಗಿದೆ. ಈ ಸಂಬಂಧ ಅರಸಿಕೇರಿ ಪೊಲೀಕುರಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೇ 22ರಂದು ದಾಖಲಾದ ಮಳೆಯ ವಿವರ: ತಾಲೂಕಿನಲ್ಲಿ 76.9 ಮಿ.ಮೀ. ಮಳೆ ಸುರಿದಿದೆ. ಸರಾಸರಿ 10.9 ಮಿ.ಮೀ. ಮಳೆ ಬಿದ್ದಿದೆ. ಅರಸಿಕೇರಿ ಹಾಗೂ ಹಿರೇಮೇಗಳಗೇರಿಗಳಲ್ಲಿ ಹೆಚ್ಚು ಅಂದರೆ ತಲಾ 21 ಮಿ.ಮೀ. ಮಳೆ ಬಿದ್ದಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
;Resize=(128,128))
;Resize=(128,128))