ಸಾರಾಂಶ
ಶಿಗ್ಗಾಂವಿ: ಬೈಕ್ ಕಳ್ಳತನವನ್ನು ಮಾಡಿದ 8 ಆರೋಪಿಗಳ ಸಮೇತವಾಗಿ ೧೪ ಮೋಟಾರ್ ಬೈಕ್ ಹಾಗೂ ೧ ಪಂಪ್‌ಸೆಟ್ ಸೇರಿ ಸುಮಾರು ರು. 5,70,000 ಮೌಲ್ಯದ ವಸ್ತುಗಳನ್ನು ಶಿಗ್ಗಾಂವಿ ತಾಲೂಕಿನ ಬಂಕಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ತಾಲೂಕಿನಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಹಲವಾರು ವಸ್ತುಗಳ ಕಳ್ಳತನವು ಜರುಗುತ್ತಿದ್ದವು. ಇದನ್ನರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿಎಸ್‌ಪಿ ಗುರುಶಾಂತಪ್ಪ, ಸಿಪಿಐ ಸುರೇಶ ಕುಂಬಾರ ಮಾರ್ಗದರ್ಶನದಲ್ಲಿ ಬಂಕಾಪುರ ಪಿಎಸ್‌ಐ ನಿಂಗಪ್ಪ ಕರಕಣ್ಣವರ ತಂಡವು ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಾದ ತಾಲೂಕಿನ ಕಲ್ಯಾಣ ಗ್ರಾಮದವರಾದ ವಿನಾಯಕ ಹನುಮಂತಪ್ಪ ತಳವಾರ, ಕರಬಸಪ್ಪ ಶಿವಾಜಿ ಆರೇರ, ಬಮ್ಮನಹಳ್ಳಿಯ ಸಂದೀಪ ಸುರೇಶ ಜಾಡರ, ಮಧು ಶಿವಪುತ್ರಪ್ಪ ದೇವಿಹೊಸೂರ, ಆನಂದಗೌಡ ಮೋಟನಗೌಡ ಪಾಟೀಲ, ವಿಜಯಕುಮಾರ ದುರ್ಗಪ್ಪ ಹರಿಜನ, ಹನುಮಂತಪ್ಪ ಶಿವಪ್ಪ ತಳವಾರ, ಚಂದ್ರಕಾಂತ ಗುರುಶಾಂತಪ್ಪ ಬರದೂರ ಎಂಬವರನ್ನು ಬಂಧಿಸಲಾಗಿದ್ದು, ಇಲ್ಲಿಯ ವಾಹನಗಳನ್ನು ಕದ್ದು ಬೇರೆಡೆ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಪ್ರಮುಖ ಆರೋಪಿ ಹನುಮಂತಪ್ಪ ತಳವಾರ, ಚಂದ್ರಶೇಖರ ಬರದೂರ ಪರಾರಿಯಾಗಿದ್ದಾರೆ. ಆರೋಪಿತರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪಿಎಸ್‌ಐ ನಿಂಗಪ್ಪ ಕರಕಣ್ಣನವರ, ಪಿಎಸ್‌ಐ -೨ ಎಸ್.ಎಮ್. ವನಹಳ್ಳಿ, ಎಎಸ್‌ಐ ಬಿ.ಎನ್. ಅಗಸಿಮನಿ, ಸಿಬ್ಬಂದಿಗಳಾದ ಎ.ಕೆ. ನದಾಫ, ಗೋವಿಂದ ಲಮಾಣಿ, ಪ್ರವೀಣ ಕೊಟಿಹಾಳ, ಜಬೀಬುಲ್ಲಾ ದೊಡ್ಡಮನಿ, ಕರಬಸಪ್ಪ ಹಾವಣಗಿ, ಬೀರಪ್ಪ ಕಳ್ಳಿಮನಿ, ಶಂಕರ ಗೊಂದುಳಿ, ನಿಂಗಪ್ಪ ಪೂಜಾರ, ವಾಸು ಹೆಗಡೆ, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಅವರಿಗೆ ಹಾವೇರಿ ಜಿಲ್ಲಾ ಅಧೀಕ್ಷಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.