ಲೋಕ ಅದಾಲತ್ ನಲ್ಲಿ 1447 ಪ್ರಕರಣ ಇತ್ಯರ್ಥ

| Published : Jul 15 2024, 01:53 AM IST

ಸಾರಾಂಶ

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 786 ಪ್ರಕರಣಗಳ ಪೈಕಿ 682 ಪ್ರಕಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಿದರೆ, ಕೆಲವನ್ನು ಹಣದ ರೂಪದಲ್ಲಿ ಇತ್ಯರ್ಥಪಡಿಸಲಾಯಿತು.

ಹರಪನಹಳ್ಳಿ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟೀಯ ಲೋಕ ಅದಾಲತ್‌ನಲ್ಲಿ 1676 ಪ್ರಕರಣಗಳ ಪೈಕಿ 1447 ಪ್ರಕರಣ ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಉಷಾರಾಣಿ, ಎಸ್.ಪಿ. ಮನುಶರ್ಮ ನೇತೃತ್ವದಲ್ಲಿ ಸಂಧಾನ ಮೂಲಕ ಇತ್ಯರ್ಥವಾದವು.ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಸೇರಿದಂತೆ ಬಾಕಿ ಇದ್ದ ಇನ್ನಿತರ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 786 ಪ್ರಕರಣಗಳ ಪೈಕಿ 682 ಪ್ರಕಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಿದರೆ, ಕೆಲವನ್ನು ಹಣದ ರೂಪದಲ್ಲಿ ಇತ್ಯರ್ಥಪಡಿಸಲಾಯಿತು.

ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 890 ಪ್ರಕರಣಗಳ ಪೈಕಿ 765 ಪ್ರಕಣಗಳನ್ನು ಇತ್ಯರ್ಥಪಡಿಸಲಾಯಿತು. ಇನ್ನು ಕೆಲವು ಹಣದ ರೂಪದಲ್ಲಿ ಬಗೆಹರಿಸಲಾಯಿತು.

ದಾಂಪತ್ಯ ಜೀವನದಿಂದ ದೂರವಿರಲು ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಂಪತಿಗಳಿಬ್ಬರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರಿಗೆ ತಿಳಿ ಹೇಳಿ ಮನವೊಲಿಸಿ ಮತ್ತೆ ಒಂದು ಮಾಡುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ.ಪೀರ್ ಅಹಮ್ಮದ್ ಕಾರ್ಯದರ್ಶಿ ಜಿ.ಎಸ್.ಎಂ.ಕೋಟ್ರಯ್ಯ, ಸರ್ಕಾರಿ ಅಭಿಯೋಜಕರಾದ ಮಿನಾಕ್ಷಿ ಎನ್., ನಿರ್ಮಲ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕೋಟ್ರೇಶ್, ಬಸವರಾಜ್ ಸೇರಿದಂತೆ ವಕೀಲರು ನ್ಯಾಯಾಲಯದ ಸಿಬ್ಬಂದಿ ಇದ್ದರು.

ಹರಪನಹಳ್ಳಿ ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟೀಯ ಲೋಕ ಅದಾಲತ್‌ನಲ್ಲಿ ಹಲವು ಪ್ರಕರಣ ನ್ಯಾಯಾಧೀಶರ ಸಮ್ಮುಖದಲ್ಲಿ ಇತ್ಯರ್ಥವಾದವು.