೧೪ರಂದು ಗಾಯತ್ರಿದೇವಿ ಮೂರ್ತಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ.

| Published : Feb 11 2024, 01:46 AM IST

ಸಾರಾಂಶ

ತೇರದಾಳ: ಪಟ್ಟಣದ ವೇದಮಾತೆ ಗಾಯತ್ರಿದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಆಶ್ರಯದಲ್ಲಿ ಮಾಘ ಶುದ್ಧ ಪಂಚಮಿಯಂದು ಫೆ.೧೪ರಂದು ವೇದಮಾತೆ ಗಾಯತ್ರಿದೇವಿ ಮೂರ್ತಿ ಪ್ರತಿಷ್ಠಾಪನೆಯ ೧೧ನೇ ವಾರ್ಷಿಕೋತ್ಸವ ನಿಮಿತ್ತ ರಬಕವಿಯ ಶೇಖರಾಚಾರ್ಯರರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಸಂಜೀವ ಕಲೇಗಾರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತೇರದಾಳ: ತೇರದಾಳ ಪಟ್ಟಣದ ವೇದಮಾತೆ ಗಾಯತ್ರಿದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಆಶ್ರಯದಲ್ಲಿ ಮಾಘ ಶುದ್ಧ ಪಂಚಮಿಯಂದು ಫೆ.೧೪ರಂದು ವೇದಮಾತೆ ಗಾಯತ್ರಿದೇವಿ ಮೂರ್ತಿ ಪ್ರತಿಷ್ಠಾಪನೆಯ ೧೧ನೇ ವಾರ್ಷಿಕೋತ್ಸವ ನಿಮಿತ್ತ ರಬಕವಿಯ ಶೇಖರಾಚಾರ್ಯರರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಸಂಜೀವ ಕಲೇಗಾರ ತಿಳಿಸಿದ್ದಾರೆ.

ಅಂದು ಬೆಳಗ್ಗೆ ೭.೧೫ಕ್ಕೆ ಧರ್ಮ ಧ್ವಜಾರೋಹಣ, ನಂತರ ದೇವಿಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ ಜರುಗುವುದು. ಬೆಳಗ್ಗೆ ೮ಕ್ಕೆ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮ, ೧೦.೩೦ಕ್ಕೆ ದೇವಸ್ಥಾನ ಆವರಣದಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಮಂಗಳಾರತಿ, ೧೧.೩೦ಕ್ಕೆ ನಡೆಯುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಶೇಖರಾಚಾರ್ಯರು ವಹಿಸಲಿದ್ದು, ಶಿರಸಂಗಿಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಿ.ಬಿ. ಬಡಿಗೇರ ಉಪನ್ಯಾಸ ನೀಡುವರು. ಅತಿಥಿಗಳಾಗಿ ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ಮಾಜಿ ಸಚಿವೆ ಉಮಾಶ್ರೀ, ಸಿದ್ದು ಕೊಣ್ಣೂರ, ತೇರದಾಳ ತಹಸೀಲ್ದಾರ್‌ ವಿಜಯಕುಮಾರ ಕಡಕೋಳ, ಸಮಾಜದ ರಾಜ್ಯ ಪ್ರಧಾನ ಕಾರ‍್ಯದರ್ಶಿ ಬಿ.ಆರ್. ಬಡಿಗೇರ, ಮುಖಂಡರಾದ ಪ್ರವೀಣ ನಾಡಗೌಡ, ಮಹಾವೀರ ಕೊಕಟನೂರ, ಅಶೋಕ ಆಳಗೊಂಡ, ಭುಜಬಲಿ ಕೆಂಗಾಲಿ, ಹೆಸ್ಕಾಂ ಜೆಇ ದೇವೇಂದ್ರ ಕಮ್ಮಾರ, ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಸೇರಿದಂತೆ ಅನೇಕರು ಆಗಮಿಸುವರು. ಸಮಾಜದ ಹಿರಿಯ ಜೀವಿಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ದಾನಿಗಳಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.