ಸಾರಾಂಶ
ಹಾಲುಮತ ಸಮಾಜ ಎಲ್ಲ ಸಮುದಾಯಗಳೊಂದಿಗೆ ಸಹೋದರತ್ವ ಭಾವನೆಯಿಂದ ಜೀವನ ಸಾಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಕನಕದಾಸರ ಮೂರ್ತಿ ಭಗ್ನಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಜತೆಗೆ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ.
ಕಾರಟಗಿ:
ತಾಲೂಕಿನ ಬೇವಿನಾಳ ಗ್ರಾಮದಲ್ಲಿ ಕನಕದಾಸರ ಮೂರ್ತಿ ಭಗ್ನಗೊಳಿಸಿರುವ ಆರೋಪಿಗಳನ್ನು 15 ದಿನಗಳೊಳಗಾಗಿ ಬಂಧಿಸಬೇಕು. ಇಲ್ಲವಾದರೆ ಅಖಂಡ ಗಂಗಾವತಿ ತಾಲೂಕು ಕುರುಬ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾರಟಗಿ ತಾಲೂಕು ಕುರುಬ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಹಾಲುಮತ ಸಮಾಜ ಎಲ್ಲ ಸಮುದಾಯಗಳೊಂದಿಗೆ ಸಹೋದರತ್ವ ಭಾವನೆಯಿಂದ ಜೀವನ ಸಾಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಕನಕದಾಸರ ಮೂರ್ತಿ ಭಗ್ನಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಜತೆಗೆ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 15 ದಿನದಲ್ಲಿ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಅಖಂಡ ಗಂಗಾವತಿ ತಾಲೂಕು ಕುರುಬ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತಹಸೀಲ್ದಾರ್‌ಗೆ ಮನವಿ:ಕನಕದಾಸರ ಮೂರ್ತಿ ಭಗ್ನಗೊಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಕುರುಬ ಸಮಾಜದ ಮುಖಂಡರು ಪಟ್ಟಣದ ಕನಕದಾಸ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಬೈಕ್ ರ್‍ಯಾಲಿ ನಡೆಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ, ಗೃಹ ಸಚಿವ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಹಾಲುಮತ ಸಮಾಜದ ಮುಖಂಡರಾದ ಜನಗಂಡೆಪ್ಪ ಪೂಜಾರಿ, ಮಲ್ಲಪ್ಪ, ನಿವೃತ್ತ ಪಿಎಸ್‌ಐ ವೀರೇಶ ಸಾಲೋಣಿ, ಹನುಮಂತಪ್ಪ ಶಾಲಿಗನೂರು, ಕಾರಮಿಂಚಪ್ಪ ಜಮಾಪುರ, ಅಗರೇಪ್ಪ ಕೊಟ್ನೆಕಲ್, ಉಮೇಶ ಭಂಗಿ, ಶರಣಪ್ಪ ಪರಕಿ, ಮರಿಯಪ್ಪ ಸಾಲೋಣಿ, ಶಿವಪ್ಪ ಬೇವಿನಾಳ, ನಾಗಪ್ಪ ನವಲಿ, ಅಮರೇಶಪ್ಪ ತಳವಾರ ಬರಗೂರು, ಶಿವಮೂರ್ತಿ ಬರ್ಸಿ, ಹನುಮಂತಪ್ಪ ಪನ್ನಾಪುರ, ರಾಮಚಂದ್ರ ವಕೀಲರು, ರಮೇಶ ಕುಂಟೋಜಿ, ಬಸವರಾಜ್ ಬೂದುಗುಂಪಾ, ವೀರೇಶ ಹಾಲಸಮುದ್ರ, ಲಿಂಗಪ್ಪ ಗೌರಿಪುರ, ಬಜ್ಜೆಪ್ಪ ಬೇವಿನಾಳ, ಹನುಮಂತಪ್ಪ ವಾಲಿಕಾರ, ಗಾದಿಲಿಂಗಪ್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))