ರಾಣಿಬೆನ್ನೂರು: ಇಂದಿನಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ 90 ಪ್ರೌಢಶಾಲೆಗಳ 4901 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದು, 15 ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಇಒ ಶಾಮಸುಂದರ ಅಡಿಗ ಪತ್ರಿಕೆಗೆ ತಿಳಿಸಿದ್ದಾರೆ. ತಾಲೂಕಿನ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ವಸತಿಯುತ 90 ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ 1ರಲ್ಲಿ ನಗರದಲ್ಲಿನ 5 ಮತ್ತು ಗ್ರಾಮೀಣ ಭಾಗದ 10 ಸೇರಿದಂತೆ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 2546 ಬಾಲಕರು, 2364 ಬಾಲಕಿಯರು ಸೇರಿದಂತೆ ಒಟ್ಟು 4910 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 15 ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರು ನೇಮಕದ ಆದೇಶ ಮಾಡಿ ತರಬೇತಿ ನೀಡಲಾಗಿದೆ. ಈ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ. ಇಲಾಖಾ ನಿಯಮಾನುಸಾರ ಪ್ರತಿ ಕೇಂದ್ರದ ಎಲ್ಲಾ ಕೊಠಡಿಗಳಿಗು ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಅಳವಡಿಸಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ದಿನದಂದು ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ತಾಲೂಕು ಕಚೇರಿಯಿಂದ 6 ಮಾರ್ಗಗಳನ್ನು ಮಾಡಿ ಪ್ರತಿ ಮಾರ್ಗಕ್ಕೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಬಂದೋಬಸ್ತಿಗೆ ಅರಕ್ಷಕ ಸಿಬ್ಬಂದಿಗಳನ್ನು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಲು ಆರಕ್ಷಕ ಠಾಣೆಗೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತ ಮಾಡದಂತೆ ನಗರ ಮತ್ತು ಗ್ರಾಮಿಣ ಭಾಗದ ಹೆಸ್ಕಾಂ ಕಚೇರಿಗೆ ಲಿಖಿತವಾಗಿ ಕೋರಿಕೆ ಸಲ್ಲಿಸಲಾಗಿದೆ. ಪರೀಕ್ಷಾ ಕೇಂದ್ರಗಳ ವಿವರ:ನಗರ ಪ್ರದೇಶ: ಬಿ.ಕೆ. ಗುಪ್ತಾ ಪ್ರೌಢಶಾಲೆ, ರಾಜರಾಜೇಶ್ವರಿ ಬಾಲಕಿಯರ ಪ್ರೌಢಶಾಲೆ, ಶ್ರೀ ಸಿದ್ಧೇಶ್ವರ ವಸತಿ ಪ್ರೌಢಶಾಲೆ, ಅಂಜುಮನ್ ಆಂಗ್ಲೋ-ಉರ್ದು ಪ್ರೌಢಶಾಲೆ, ರೋಟರಿ ಆಂಗ್ಲ ಮಾಧ್ಯಮ ಶಾಲೆ.
ಗ್ರಾಮೀಣ ಪ್ರದೇಶ: ಹಾಲಸಿದ್ಧೇಶ್ವರ ಪ್ರೌಢಶಾಲೆ ಹಲಗೇರಿ, ಸಂಗನ ಬಸವೇಶ್ವರ ಪ್ರೌಢಶಾಲೆ ತುಮ್ಮಿನಕಟ್ಟಿ, ಸರ್ಕಾರಿ ಪ್ರೌಢಶಾಲೆ ಇಟಗಿ, ಮಾಲತೇಶ ಪ್ರೌಢಶಾಲೆ ದೇವರಗುಡ್ಡ, ಸಿಇಎಸ್ ಪ್ರೌಢಶಾಲೆ ಚಳಗೇರಿ, ಬೀರೇಶ್ವರ ಪ್ರೌಢಶಾಲೆ ಕಾಕೋಳ, ಕರ್ನಾಟಕ ಪಬ್ಲಿಕ್ ಸ್ಕೂಲ್ ಆರೇಮಲ್ಲಾಪುರ, ಸರ್ಕಾರಿ ಪ್ರೌಢಶಾಲೆ ಹರನಗಿರಿ, ದುರ್ಗಾಮಾತಾ ಪ್ರೌಢಶಾಲೆ ಕವಲೆತ್ತು, ಸದ್ಗುರು ಶಿವಾನಂದ ಪ್ರೌಢಶಾಲೆ ಸುಣಕಲ್ಲಬಿದರಿ.ರಾಣಿಬೆನ್ನೂರಿನಲ್ಲಿ 15 ಪರೀಕ್ಷಾ ಕೇಂದ್ರ
ಇಂದಿನಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ 90 ಪ್ರೌಢಶಾಲೆಗಳ 4901 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದು, 15 ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಇಒ ಶಾಮಸುಂದರ ಅಡಿಗ ಪತ್ರಿಕೆಗೆ ತಿಳಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.