ಮೊರಾರ್ಜಿ ಶಾಲಾ ವಿದ್ಯಾರ್ಥಿಗಳಿಗೆ ಅಮೆಜಾನ್ ವತಿಯಿಂದ 15 ಲ್ಯಾಪ್ ಟಾಪ್

| Published : Jul 26 2024, 01:31 AM IST

ಮೊರಾರ್ಜಿ ಶಾಲಾ ವಿದ್ಯಾರ್ಥಿಗಳಿಗೆ ಅಮೆಜಾನ್ ವತಿಯಿಂದ 15 ಲ್ಯಾಪ್ ಟಾಪ್
Share this Article
  • FB
  • TW
  • Linkdin
  • Email

ಸಾರಾಂಶ

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ಸುಮಾರು 15 ಲ್ಯಾಪ್ ಟಾಪ್ ವಿತರಿಸಿರುವುದು ಸಂತಸದ ವಿಷಯ ಎಂದು ಪ್ರಾಚಾರ್ಯ ರೇಷ್ಮಾ ಜಾಧವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ಸುಮಾರು 15 ಲ್ಯಾಪ್ ಟಾಪ್ ವಿತರಿಸಿರುವುದು ಸಂತಸದ ವಿಷಯ ಎಂದು ಪ್ರಾಚಾರ್ಯ ರೇಷ್ಮಾ ಜಾಧವ್ ತಿಳಿಸಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಮ್ಮ ಶಾಲೆಯ ಮಕ್ಕಳಿಗೆ ಅಮೆಜಾನ್ ಫ್ಯೂಚರ್ ಇಂಜಿನಿಯರ್ಸ್ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಹಯೋಗದೊಂದಿಗೆ ಕರ್ನಾಟಕ ವಸತಿ ಶಾಲೆಗಳ ಸಂಘದ ಶಾಲಾ ಶಿಕ್ಷಕರು ಹಾಗೂ ನಮ್ಮ ಶಾಲೆಯ ಶಿಕ್ಷಕಿ ಮಧು ಮಹಾಂತೇಶ ದೊಡಮನಿ ಅವರು ಇಂಟ್ರೊಡಕ್ಷನ್ ಟು ಕಂಪ್ಯೂಟಷನಲ್ ಥಿಂಕಿಂಗ್ ಆ್ಯಂಡ್ ಕೋಡಿಂಗ್ ಕೋರ್ಸ್ ಆನ್‌ಲೈನ್ ತರಬೇತಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ 15ನೇ ಸ್ಥಾನ ಪಡೆದಿದ್ದಕ್ಕಾಗಿ ಅವರಿಗೂ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸಂಸ್ಥೆಯಿಂದ 1 ಲ್ಯಾಪ್ ಟಾಪ್ ನೀಡಿ ಗೌರವಿಸಲಾಗಿತ್ತು ಹಾಗೂ ಇದರಿಂದ ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 15 ಲ್ಯಾಪ್ ಟಾಪ್ ವಿತರಿಸಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗದ ಬಡ ಮಕ್ಕಳ ಶೈಕ್ಷಣಿಕವಾಗಿ ಅನುಕೂಲವಾಗುವುದರ ಜೊತೆ ಶಾಲೆಯ ಮಕ್ಕಳ ಫಲಿತಾಂಶ ಇನ್ನಷ್ಟು ಹೆಚ್ಚುಗೊಳ್ಳಲು ಸಹಾಯ ಮಾಡಿದ್ದಾರೆ. ನಮ್ಮ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಧನ್ಯವಾದಗಳು ತಿಳಿಸಿದ್ದಾರೆ.