155ನೇ ಮಣ್ಣಗುಡ್ಡೆ ಗುರ್ಜಿ ಮಹೋತ್ಸವ ಸಡಗರ

| Published : Nov 28 2024, 12:33 AM IST

155ನೇ ಮಣ್ಣಗುಡ್ಡೆ ಗುರ್ಜಿ ಮಹೋತ್ಸವ ಸಡಗರ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮಹಾಗಣಪತಿ ದೇವರ ಸವಾರಿ ಹೋಗುವ ರಸ್ತೆಗಳು ವಿದ್ಯುದಲಂಕಾರದಿಂದ ಕಂಗೊಳಿಸುತ್ತಿದ್ದು, ದೇವರ ಪೇಟೆ ಸವಾರಿಯನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಶರವು ಮಹಾಗಣಪತಿ ದೇವರ ಪೇಟೆ ಸವಾರಿ ಉತ್ಸವವಾಗಿರುವ ಮಣ್ಣಗುಡ್ಡೆ ಗುರ್ಜಿ ಮಹೋತ್ಸವವು ಬುಧವಾರ ಸಡಗರ ಸಂಭ್ರಮದಿಂದ ನೆರವೇರಿತು. ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್‌, ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮತ್ತು ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕದಿಂದ ಈ ಬಾರಿ 155ನೇ ವರ್ಷದ ಗುರ್ಜಿ ಮಹೋತ್ಸವ ನಡೆಯಿತು.ಶ್ರೀ ಮಹಾಗಣಪತಿ ದೇವರ ಸವಾರಿ ಹೋಗುವ ರಸ್ತೆಗಳು ವಿದ್ಯುದಲಂಕಾರದಿಂದ ಕಂಗೊಳಿಸುತ್ತಿದ್ದು, ದೇವರ ಪೇಟೆ ಸವಾರಿಯನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು. ಬುಧವಾರ ಸಂಜೆ ದೇವಳದಿಂದ ಹೊರಟ ಪೇಟೆ ಸವಾರಿಯು ಕೆಎಸ್‌ ರಾವ್‌ ರಸ್ತೆ, ನವಭಾರತ್‌ ಸರ್ಕಲ್‌, ಪಿವಿಎಸ್‌, ಡೊಂಗರಕೇರಿ, ಮಣ್ಣಗುಡ್ಡೆ, ಬಲ್ಲಾಳ್‌ಬಾಗ್‌, ಅಳಕೆ, ನ್ಯೂಚಿತ್ರಾ ಟಾಕೀಸ್‌, ಕಾಳಿಕಾಂಬ ರಸ್ತೆ, ಕಾರ್‌ಸ್ಟ್ರೀಟ್‌ ಮೂಲಕ ದೇವಳಕ್ಕೆ ಹಿಂತಿರುಗಿತು. ರಾತ್ರಿ ಮಹಾಪೂಜೆ, ಸಂಕೀರ್ತನೋಪಾಸನೆ- ಮಂಗಳ ಪ್ರಸಾದ ವಿತರಣೆ ನಡೆಯಿತು.

ಭಜನೆ ಕಾರ್ಯಕ್ರಮವನ್ನು ಆರೂರು ಶೋಭಾ ರಾವ್‌ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಗಳೂರು ಕೆಎಂಸಿ ವಿಧಿವಿಜ್ಞಾನ ಮೆಡಿಸಿನ್‌ ವಿಭಾಗ ಮುಖ್ಯಸ್ಥ ಡಾ. ಜಗದೀಶ್‌ ರಾವ್‌ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್‌ ರಾವ್‌, ಎಂಆರ್‌ಪಿಎಲ್‌ ಕಾರ್ಯ ನಿರ್ವಾಹಕ ನಿರ್ದೇಶಕ ಬಿಎಚ್‌ವಿ ಪ್ರಸಾದ್‌, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಟ್ರಸ್ಟ್‌ ಗೌರವಾಧ್ಯಕ್ಷ ವೈ. ರಮೇಶ್‌ ಭಟ್‌, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಟ್ರಸ್ಟ್‌ ಅಧ್ಯಕ್ಷ ರಮಾನಂದ್‌ ಪಾಂಗಲ್‌, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಇದ್ದರು.

ಈ ಸಂದರ್ಭ ಟೆಕ್‌ ಫ್ರೋ ಸಾಫ್ಟ್‌ವೇರ್‌ ಡಿಸೈನರ್‌ ಶ್ರೀನಿಧಿ ಆರ್‌.ಎಸ್‌. ಹಾಗೂ ಸರಿಗಮಪ ವಿಜೇತೆ ರಿಷಿಕಾ ಕುಂದೇಶ್ವರ ಅವರನ್ನು ಗೌರವಿಸಲಾಯಿತು.