ಧಾರವಾಡ ಜಿಲ್ಲೆಯಲ್ಲಿ 16 ಲಕ್ಷ ಮತದಾರರು: ಡಿಸಿ ದಿವ್ಯಪ್ರಭು

| Published : Jan 07 2025, 12:31 AM IST

ಧಾರವಾಡ ಜಿಲ್ಲೆಯಲ್ಲಿ 16 ಲಕ್ಷ ಮತದಾರರು: ಡಿಸಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಜನವರಿ 2025ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,05,768 ಪುರುಷ, 8,10,647 ಮಹಿಳಾ ಹಾಗೂ 95 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 16,16,415 ಅರ್ಹ ಮತದಾರರಿದ್ದಾರೆ. 2024ರ ಅಕ್ಟೋಬರ್‌ ವರೆಗೆ 16,12,536 ಮತದಾರರಿದ್ದು 3879 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದರೆ, 5487 ಮತದಾರರ ಹೆಸರು ಡಿಲಿಟ್‌ ಆಗಿದೆ.

ಧಾರವಾಡ:

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು ಜಿಲ್ಲೆಯಲ್ಲಿ 16,16,415 ಅರ್ಹ ಮತದಾರರು ಇದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಜನವರಿ 2025ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,05,768 ಪುರುಷ, 8,10,647 ಮಹಿಳಾ ಹಾಗೂ 95 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 16,16,415 ಅರ್ಹ ಮತದಾರರಿದ್ದಾರೆ. 2024ರ ಅಕ್ಟೋಬರ್‌ ವರೆಗೆ 16,12,536 ಮತದಾರರಿದ್ದು 3879 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದರೆ, 5487 ಮತದಾರರ ಹೆಸರು ಡಿಲಿಟ್‌ ಆಗಿದೆ. 12,008 ಪುರುಷ, 8797 ಮಹಿಳಾ ಮತ್ತು ಇಬ್ಬರು ತೃತೀಯ ಲಿಂಗಿ ಸೇರಿ ಒಟ್ಟು 20805 ವಿಕಲಚೇತನ ಮತದಾರರಿದ್ದಾರೆ ಎಂದರು.

ಒಟ್ಟಾರೆ ಜಿಲ್ಲೆಯಲ್ಲಿ 2867 ಯುವ ಮತದಾರರು ನೋಂದಣಿ ಆಗಿದ್ದು ಜ. 1ರಿಂದ ಅರ್ಹ ಮತದಾರರಾಗಿದ್ದಾರೆ. ಜಿಲ್ಲೆಯ 16,336 ಮತದಾರರಿಗೆ ಗುರುತಿನ ಚೀಟಿ ಅಂಚೆ ಮೂಲಕ ರವಾನಿಸಲಾಗುತ್ತಿದೆ. ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ನಮೂನೆ 6ನ್ನು ಉಪಯೋಗಿಸಿಕೊಂಡು 3,440 ಪುರುಷ, 4747 ಮಹಿಳಾ ಹಾಗೂ 1 ತೃತೀಯ ಲಿಂಗಿ ಸೇರಿ ಒಟ್ಟು 8188 ಮತದಾರರು ಮತದಾರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಮತದಾರರ ಹೆಸರು ಸ್ಥಳಾಂತರ ಹಾಗೂ ತಿದ್ದುಪಡಿಗೆ ಅನ್ವಯಿಸುವ ಅರ್ಜಿ ನಮೂನೆ -8ನ್ನು ಬಳಸಿಕೊಂಡು 1,175 ಮತದಾರರು ಬೇರೆ ಸ್ಥಳಗಳಿಂದ ಮತದಾರರ ಪಟ್ಟಿಗೆ ತಮ್ಮ ಹೆಸರು ವರ್ಗಾಯಿಸಿಕೊಂಡಿದ್ದಾರೆ. ಹೊಸದಾಗಿ ಮತ್ತು ಸ್ಥಳಾಂತರ ಕಾರಣದಿಂದಾಗಿ 9363 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹಳಿಯಾಳ, ಶಿವಾನಂದ ನಿಗದಿ, ಬಿಜೆಪಿಯ ಸಿದ್ದು ಕಲ್ಯಾಣಶೆಟ್ಟರ್, ಜೆಡಿಎಸ್‌ನ ದೇವರಾಜ್ ಕಂಬಳಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.5487 ಮತದಾರರ ಹೆಸರು ಡಿಲಿಟ್‌

ಡುಬ್ಲಿಕೇಟ್‌ ನೋಂದಣಿ, ಮರಣ ಸೇರಿದಂತೆ ಮತ್ತಿತರ ಕಾರಣಗಳಿಗೆ ಸಲ್ಲಿಕೆಯಾಗುವ ಅರ್ಜಿ ನಮೂನೆ 7ರ ಅನ್ವಯ ಜಿಲ್ಲೆಯಲ್ಲಿ ಒಟ್ಟು 5487 ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನವಲಗುಂದ 1205, ಕುಂದಗೋಳ 321, ಧಾರವಾಡ 1097, ಹು-ಧಾ ಪೂರ್ವ 813, ಕೇಂದ್ರ 478, ಪಶ್ಚಿಮ 968, ಕಲಘಟಗಿ 605 ಮತದಾರರನ್ನು ಕೈಬಿಡಲಾಗಿದೆ.