ಪಡಿತರ ವಿತರಣೆ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಆರೋಪದಡಿ ಲಾರಿ ಚಾಲಕ ಹಾಗೂ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಸವಣೂರು ಪಟ್ಟಣದ ಗದಗ-ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾವೇರಿ: ಪಡಿತರ ವಿತರಣೆ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಆರೋಪದಡಿ ಲಾರಿ ಚಾಲಕ ಹಾಗೂ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಸವಣೂರು ಪಟ್ಟಣದ ಗದಗ-ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೂಡ್ಸ್ ವಾಹನದಲ್ಲಿ ತಲಾ 40 ಕೆಜಿ ತೂಕದ ಒಟ್ಟು 40 ಬ್ಯಾಗ್‌ಗಳನ್ನು ಸಾಗಿಸುತ್ತಿದ್ದರು. ಆರೋಪಿತರಿಂದ ₹37,120 ಮೊತ್ತದ 16 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸವಣೂರ ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ದೇವೇಂದ್ರಗೌಡ ಪಾಟೀಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಕ್ಕಿ ಅಕ್ರಮ ಸಾಗಾಟ-ಇಬ್ಬರ ವಿರುದ್ಧ ದೂರು

ಹಾವೇರಿ: ಸರ್ಕಾರದಿಂದ ಪೂರೈಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಆರೋಪದಡಿ ಇಬ್ಬರ ವಿರುದ್ದ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಕೂರು ಗ್ರಾಮದ ನಾಗಪ್ಪ ಹೊಸಮನಿ ಹಾಗೂ ಹೊಸರಿತ್ತಿಯ ಗುರುಶಾಂತಪ್ಪ ಕುಬಸದ ಎಂಬುವವರು ವಿರುದ್ದ ಹಾವೇರಿ ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ರಾಜು ತಳವಾರ ದೂರು ದಾಖಲಿಸಿದ್ದಾರೆ. ಆರೋಪಿತರು ಗುತ್ತಲ-ನೆಗಳೂರು ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು. ಆರೋಪಿತರಿಂದ ₹18,560 ಮೌಲ್ಯದ ಎಂಟು ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.7.16 ಲಕ್ಷ ಮೌಲ್ಯದ ಆಭರಣ ಕಳ್ಳತನ

ಹಾವೇರಿ:

ಮನೆಯ ಹಾಲ್‌ನಲ್ಲಿಟ್ಟಿದ್ದ ತಿಜೋರಿ ಲಾಕರ್ ತೆಗೆದು ಅದರಲ್ಲಿದ್ದ ಸುಮಾರು ₹7.16 ಲಕ್ಷ ಮೌಲ್ಯದ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ಹಿರೇಕೆರೂರು ಪಟ್ಟಣದ ಜಾವೀದ್‌ಖಾನ್ ನಗರದಲ್ಲಿ ನಡೆದಿದೆ.

ಮನೆಯ ಹಾಲ್‌ನಲ್ಲಿದ್ದ ತಿಜೋರಿಯ ಬಾಗಿಲು ತೆಗೆದಿರುವ ಕಳ್ಳರು ₹3.20 ಲಕ್ಷ ಮೌಲ್ಯದ ಮಾಂಗಲ್ಯ ಸರ, 80 ಸಾವಿರ ಮೊತ್ತದ ಬಂಗಾರದ ಲಚ್ಚಾ, ₹1.20 ಲಕ್ಷ ಕಿಮ್ಮತ್ತಿನ ಕಿವಿಯೋಲೆ, ಬಂಗಾರದ ಉಂಗುರ ಸೇರಿ ಒಟ್ಟು ₹7,16,000 ಬೆಲೆಬಾಳುವ 89.5ಗ್ರಾಂ ತೂಕದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಪಟ್ಟಣದ ಜಾವೀದಖಾನ್ ನಗರದ ನಿವಾಸಿಗಳಾದ ಜಬೀವುಲ್ಲಾ ಹೊನ್ನಾಳಿ, ಶಬೀನಾ ಹೊನ್ನಾಳಿ, ಅಮಾನುಲ್ಲಾ ಹೊನ್ನಾಳಿ, ಆಯೇಷಾ ಹೊನ್ನಾಳಿ, ಹಾಲಿವಸ್ತಿ ಬೆಳಗಾವಿಯಲ್ಲಿರುವ ಹಿರೇಕೆರೂರು ನಿವಾಸಿಗಳಾದ ಜಫ್ರುಲ್ಲಾ ಹೊನ್ನಾಳಿ, ಖಾಲಿದಾ ಹೊನ್ನಾಳಿ ಎಂಬುವವರ ಮೇಲೆ ಸಂಶಯ ಇರುವುದಾಗಿ ದೂರುದಾರಳಾದ ಶಮೀಮ್‌ಬಾನು ಉಲ್ಲಾ ಎಂಬುವವರು ಪೊಲೀಸರಿಗೆ ನೀಡಿದ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.