16ರಂದು ಶ್ರೀ ಸೋಮೇಶ್ವರನ ಸ್ವಾಮಿ ಬ್ರಹ್ಮರಥೋತ್ಸವ

| Published : Feb 03 2024, 01:45 AM IST

16ರಂದು ಶ್ರೀ ಸೋಮೇಶ್ವರನ ಸ್ವಾಮಿ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಐತಿಹಾಸಿಕ ಶ್ರೀ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಫೆ. 16ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಗೋಪಾಲ್ ದೀಕ್ಷಿತ್ ತಿಳಿಸಿದ್ದಾರೆ.

ಮಾಗಡಿ: ಐತಿಹಾಸಿಕ ಶ್ರೀ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಫೆ. 16ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಗೋಪಾಲ್ ದೀಕ್ಷಿತ್ ತಿಳಿಸಿದ್ದಾರೆ.

ಫೆ.9ರಂದು ಅಂಕುರಾರ್ಪಣೆ ಸರ್ಕಾರಿ ಸೇವೆ, ಫೆ.10 ರಂದು ಶನಿವಾರ ಸಾಯಂಕಾಲ ಧ್ವಜಾರೋಹಣ, ಫೆ.11ರಂದು ಶೇಷವಾಹನೋತ್ಸವ, ಫೆ. 12ರಂದು ವೃಷಭ ವಾಹನೋತ್ಸವ, ಫೆ 13 ಪುಷ್ಪ ಮಂಟಪೋತ್ಸವ, ಫೆ.14 ರಂದು ನಂದಿ ವಾಹನೋತ್ಸವ, ಫೆ. 15ರಂದು ಮಹಾಭಿಷೇಕ ಸಂಜೆ ಕಲ್ಯಾಣೋತ್ಸವ, ಫೆ.16 ರಂದು ಮಧ್ಯಾಹ್ನ 12:40 ರಿಂದ 1:30ರೊಳಗಿನ ಶುಭ ಅಭಿಜಿತ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನೆರವೇರಲಿದ್ದು, ಅಂದು ರುದ್ರಾಭಿಷೇಕ, ಅಷ್ಠಾವದಾನ ಸೇವೆ, ಯಾತ್ರಾ ದಾನ ಸೇವೆ, ಮಂತ್ರ ಪುಷ್ಪಸೇವೆ, ಫಲಪುಷ್ಪ ಸೇವೆ, ಹೂವಿನ ಅಲಂಕಾರ, ರುದ್ರಾಭಿಷೇಕ, ಕಲಾಸೇವೆ, ಸಂಗೀತೋತ್ಸವ ಸೇವೆ, ಉಯ್ಯಾಲೋತ್ಸವ, ನೆರವೇರಲಿದೆ.

ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್, ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಜಿ. ರಂಗಧಾಮಯ್ಯ, ಬಿಜೆಪಿ ಮುಖಂಡ ಪ್ರಸಾದ್ ಗೌಡ, ಕಾಂಗ್ರೆಸ್ ಮುಖಂಡ ಎಚ್.ಎಂ.ಕೃಷ್ಣಮೂರ್ತಿ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಫೆ.17 ಅಶ್ವವಾಹನೋತ್ಸವ, ಫೆ. 18 ರಂದು ಅವಭ್ರತ ಸ್ನಾನ ಉಭಯ ಅಮ್ಮನ ಸವಿತಾ ಪೀಠ ಪ್ರಭಾವಳಿ ಉತ್ಸವ, ಫೆ. 19 ರಂದು ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಸೋಮೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.