17 ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

| Published : Mar 05 2025, 12:32 AM IST

ಸಾರಾಂಶ

ಹುನಗುಂದ ತಾಲೂಕಿನ ಗಟ್ಟಿಗನೂರ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 17 ಕುರಿಗಳ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳವಾರ ಹುನಗುಂದ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುನಗುಂದ

ತಾಲೂಕಿನ ಗಟ್ಟಿಗನೂರ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 17 ಕುರಿಗಳ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳವಾರ ಹುನಗುಂದ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪರಶುರಾಮ ಲತ್ತಿಗೇರಿ (24), ಮಲ್ಲಿಕಾರ್ಜುನ ಬಂಡಿ (24) ಬಂಧಿತ ಆರೋಪಿಗಳು. ಕುರಿ ಸಾಗಣೆಗೆ ಬಳಸುತ್ತಿದ್ದ ₹4.50 ಲಕ್ಷ ಮೌಲ್ಯದ ಎರಡು ವಾಹನ ಹಾಗೂ ₹70 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್ಐ ಪ್ರಕಾಶ ಹೇಳಿದರು.

ಠಾಣೆ ವ್ಯಾಪ್ತಿಯ ಗಟ್ಟಿಗನೂರ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ತಾಲೂಕಿನ ಸಮೀಪ ಧನ್ನೂರ ಕ್ರಾಸ್‌ ಬಳಿ ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಮರನಾಥ ರೆಡ್ಡಿ, ಜಿಲ್ಲಾ ಹೆಚ್ಚುವರಿ ಅಧೀಕ್ಷಕ ಪ್ರಸನ್ನ ದೇಸಾಯಿ. ಮಹಾಂತೇಶ ಜಿದ್ದಿ, ಪೊಲೀಸ್ ಉಪಾಧೀಕ್ಷಕ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲಸವದಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರಕಾಶ ಡಿ, ಎಎಸ್ ಐ ಎಸ್.ಬಿ. ಆಮದಿಹಾಳ, ಪೊಲೀಸ್‌ ಸಿಬ್ಬಂದಿ ಮಲ್ಲು ನಾರಗಲ್, ನಾಗರಾಜ ಕುಂದರಗಿ, ಸಂಗಮೇಶ ಮರೋಳ, ಬಿ.ಕೆ. ನದಾಫ್‌, ಲಕ್ಷ್ಮಣ ಅಂಬಿಗೇರ, ಬಸವರಾಜ ಅಮದಾಳ, ಆನಂದ ಗೋಲಪ್ಪನವರ, ಸಿದ್ದು ಕೌಲಗಿ, ಸಿ.ಸಿ. ಪಾಟೀಲ, ನಾಗೇಶ ಪವಾರ ಶರಣು ಭೂಪರದ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.