ಸಾರಾಂಶ
ಶ್ರೀಮಂಗಲ : ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ತೊರೆದು 18 ಕಾರ್ಯಕರ್ತರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಕಾರ್ಯವೈಖರಿ ಮೆಚ್ಚಿ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ತಾ. ಪಂ. ಮಾಜಿ ಸದಸ್ಯ ಬೊಳ್ಳೇರ ಪೊನ್ನಪ್ಪ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಚೋನಿರ ಮಧು ಕಾರ್ಯಪ್ಪ, ಗಣೇಶ್, ರಂಜನ್, ಅಣ್ಣೀರ ಪ್ರಕಾಶ್, ಪ್ರವೀಣ್, ಧನು ಪೂಣಚ್ಚ, ದಿನೇಶ್ ಮೊಣ್ಣಪ್ಪ, ಬಲ್ಯಮೀದೇರಿರ ಮೋಹನ್, ತಂಬುಕುತ್ತಿರ ಅನಿಲ್, ಪೊವಣ್ಣ, ಮುತ್ತುಕೃಷ್ಣ,ಶರತ್, ಅಮ್ಮತ್ತೀರ ಪುರುಷೋತ್ತಮ್, ಎನ್. ಸಿ. ಹರೀಶ್, ಮಾಜಿ ಸೈನಿಕ ಅಣ್ಣಳಮಾಡ ಸುಬ್ರಮಣಿ, ಕಾಳಿಮಾಡ ನಿಹಾಲ್ ನಾಣಯ್ಯ, ಬೊಳ್ಳೇರ ಅನೂಪ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು.
ಬಿರುನಾಣಿ ಮರೆನಾಡ್ ಕೊಡವ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಶಾಲು ಹಾಕಿ ಶಾಸಕರು, ಪಕ್ಷದ ಪ್ರಮುಖರು ಸ್ವಾಗತಿಸಿದರು.