ನೀತಿ ಸಂಹಿತೆ ಉಲ್ಲಂಘನೆಯ189 ಪ್ರಕರಣ ದಾಖಲು

| Published : Apr 25 2024, 01:07 AM IST / Updated: Apr 25 2024, 07:36 AM IST

election Commission

ಸಾರಾಂಶ

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದ್ವೇಷದ ಭಾಷಣ, ಧಾರ್ಮಿಕ ಕೇಂದ್ರಗಳ ದುರ್ಬಳಕೆ, ಮಕ್ಕಳ ಬಳಕೆ ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ವಿರುದ್ಧ ಒಟ್ಟು 189 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

 ಬೆಂಗಳೂರು :  ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದ್ವೇಷದ ಭಾಷಣ, ಧಾರ್ಮಿಕ ಕೇಂದ್ರಗಳ ದುರ್ಬಳಕೆ, ಮಕ್ಕಳ ಬಳಕೆ ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ವಿರುದ್ಧ ಒಟ್ಟು 189 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷದ ಭಾಷಣದಡಿ 23 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಪೈಕಿ ಬಿಜೆಪಿ ವಿರುದ್ಧ 12, ಕಾಂಗ್ರೆಸ್‌ ವಿರುದ್ಧ 9 ಮತ್ತು ಜೆಡಿಎಸ್‌ 2 ಪ್ರಕರಣ ದಾಖಲಿಸಲಾಗಿದೆ. ಅಂತೆಯೇ ಧಾರ್ಮಿಕ ಕೇಂದ್ರಗಳ ದುರ್ಬಳಕೆ ಆರೋಪದ ಮೇಲೆ 15 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಿಜೆಪಿ ವಿರುದ್ಧ 8, ಕಾಂಗ್ರೆಸ್‌ ವಿರುದ್ಧ 6 ಮತ್ತು ಒಂದು ಪಕ್ಷೇತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡ ಆರೋಪದ ಮೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ತಲಾ ಏಳು ಪ್ರಕರಣಗಳನ್ನು ಮತ್ತು ಪಕ್ಷೇತರರ ವಿರುದ್ಧ ಒಂದು ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಅನುಮತಿ ಇಲ್ಲದೆ ಕರಪತ್ರಗಳನ್ನು ಹಂಚಿಕೆ ಮಾಡಿದ ಆರೋಪದ ಮೇರೆಗೆ 18 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.