ನ.24ಕ್ಕೆ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದ 19ನೇ ವಾರ್ಷಿಕ ಮಹಾಸಭೆ

| Published : Nov 18 2024, 12:04 AM IST

ನ.24ಕ್ಕೆ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದ 19ನೇ ವಾರ್ಷಿಕ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕನ್ನಡ ದೈವಜ್ಞ ಬ್ರಾಹ್ಮಣರ ಸಂಘದ ವತಿಯಿಂದ ನ.24 ರಂದು ಬೆಳಗ್ಗೆ 10.30ಕ್ಕೆ ವಾಜಪೇಯಿ ಬಡಾವಣೆಯ ಸಂಘದ (ಪಿಎಫ್ ಕಚೇರಿ ಪಕ್ಕ) ಕಾರ್ಯಾಲಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಹಯಗ್ರೀವ ಪೂಜೆ ಕಾರ್ಯಕ್ರಮದ ಉದ್ಘಾಟನೆ, ದಾನಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, 19ನೇ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಕಟ್ಟಡ ಸಹಾಯಾರ್ಥ ದೇಣಿಗೆ ನೀಡಿದ ಸಮಾಜ ಬಾಂಧವರನ್ನು ಸನ್ಮಾನಿಸಲಾಗುವುದು. ಹಾಗು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುವ ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು ಎಂದರು.2010 ರಲ್ಲಿ ಸೂಡಾದಿಂದ 36 ಲಕ್ಷ ಪಾವತಿಸಿ ನಿವೇಶನವನ್ನು ಪಡೆದಿದ್ದೇವೆ. ಈಗ ಸಮುದಾಯ ಭವನದ ಕನಸು ನನಸಾಗಬೇಕಾದಲ್ಲಿ ಸುಮಾರು ₹6 ಕೋಟಿ ಅವಶ್ಯಕತೆ ಇದೆ. ಪ್ರವರ್ಗ 2ಎ ಒಬಿಸಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ನಮ್ಮ ಜನಾಂಗಕ್ಕೆ ಇದುವರೆಗೂ ಸರ್ಕಾರದಿಂದ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆಯದೇ ಇರುವುದು ಬೇಸರದ ಸಂಗತಿ. ನೊಂದಾಯಿತ ಸಂಘದ 18 ವರ್ಷಗಳು ಪೂರ್ಣಗೊಂಡಿದ್ದರೂ, ದೇಶ ಸ್ವತಂತ್ರಗೊಂಡು 75 ವರ್ಷ ಕಳೆದರೂ ನಮ್ಮಂತಹ ಉಪಜಾತಿಗಳ ಅಭಿವೃದ್ಧಿ ಬಗ್ಗೆ ಗಮನಹರಿಸದೆ ಇರುವುದು ದುರಾದೃಷ್ವವೇ ಸರಿ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಮಂಜುನಾಥ್ ಡಿ.ಆರ್, ರಾಮಚಂದ್ರ ಎನ್.ಡಿ, ರಾಜು ಪಾಲಂಕರ್.ಜಿ, ವಸಂತ ಕುಮಾರ್.ಸಿ, ಮಂಜುನಾಥ್.ಎನ್, ವಿನಾಯಕ.ಎನ್, ಗೋಪಾಲಪ್ಪ, ಲೋಕೇಶ್. ಎಂ ಉಪಸ್ಥಿತರಿದ್ದರು.