ಮೈಷುಗರ್‌ನಲ್ಲಿ ೨.೨೫ ಲಕ್ಷ ಟನ್ ಕಬ್ಬು ನುರಿತ: ಸಚಿವ ಚಲುವರಾಯಸ್ವಾಮಿ
KannadaprabhaNewsNetwork | Published : Nov 02 2023, 01:00 AM IST
ಮೈಷುಗರ್‌ನಲ್ಲಿ ೨.೨೫ ಲಕ್ಷ ಟನ್ ಕಬ್ಬು ನುರಿತ: ಸಚಿವ ಚಲುವರಾಯಸ್ವಾಮಿ
ಸಾರಾಂಶ
ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ ೨.೨೫ ಲಕ್ಷ ಟನ್ ಕಬ್ಬು ನುರಿಸಿದ್ದು, ೧.೫೮ ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ೫೪.೧೪ ಕೋಟಿ ಹಣ ಸಂದಾಯ ಮಾಡಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ ೨.೨೫ ಲಕ್ಷ ಟನ್ ಕಬ್ಬು ನುರಿಸಿದ್ದು, ೧.೫೮ ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ೫೪.೧೪ ಕೋಟಿ ಹಣ ಸಂದಾಯ ಮಾಡಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ೫ ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, ೪ ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಮಾಡಬಹುದಾಗಿರುತ್ತದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಒಂದೇ ಬಾರಿಗೆ ಎಂಟು ಸಂಪರ್ಕ ಕೇಂದ್ರಗಳನ್ನು ನಿರ್ಮಾಣ ಮಾಡಲು ೧೬ ಕೋಟಿ ರು. ಪ್ರಸ್ತಾವನೆಗೆ ಮಂಜೂರಾತಿ ನೀಡಲಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಬೆಳೆ ವಿಮಾ ಯೋಜನೆಯಡಿ ಮಾಡಿದ ಸಾಧನೆಗಾಗಿ ಕೇಂದ್ರ ಸರ್ಕಾರ ಮಂಡ್ಯ ಜಿಲ್ಲೆಗೆ ಪ್ರಥಮ ಬಹುಮಾನ ನೀಡಿದೆ ಎಂದು ನುಡಿದರು. ಪಿಎಂಎಫ್‌ಎಂಇ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ ೧೪೨ ರೈತ ಉದ್ದಿಮೆದಾರರಿಗೆ ೩೯.೧೭ ಕೋಟಿ ಮೊತ್ತದ ಸಾಲ ಹಾಗೂ ೧೨.೯೪ ಕೋಟಿ ರು. ಸಹಾಯಧನ ಮಂಜೂರು ಮಾಡಲಾಗಿದೆ. ಜಿಲ್ಲೆಯ ಸಹಾಯಧನ ವಿತರಣೆ ಮಾಡುವಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದರು. ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ಹಂಚಲು ೧೩೭.೦೬ ಎಕರೆ ಜಮೀನು ಲಭ್ಯವಿದ್ದು,, ಈ ಜಮೀನಿನಲ್ಲಿ ೩೯೬೦ ನಿವೇಶನಗಳನ್ನು ನೀಡಲು ಉದ್ದೇಶಿಸಿದ್ದು, ಇಲ್ಲಿಯವರೆಗೆ ೯೯೫ ನಿವೇಶನ ರಹಿತರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ೭೦೬ ಹಕ್ಕುಪತ್ರಗಳನ್ನು ವಸತಿ ನಿಗಮದಿಂದ ಪಡೆಯಲಾಗಿದ್ದು, ಬಾಕಿ ಉಳಿದ ೨೯೬೫ ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಲು ಕ್ರಮವಹಿಸಲಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ೧೬ ಸಾಧಕರನ್ನು ಗುರುತಿಸಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಉಪವಿಭಾಗಾಧಿಕಾರಿ ಶಿವಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಸೇರಿದಂತೆ ಇತರರಿದ್ದರು. ಪಥ ಸಂಚಲನದಲ್ಲಿ ಭಾಗವಹಿಸಿದ್ದ ತಂಡಗಳು ೬೮ ನೇ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪುರುಷ ಪೊಲೀಸ್ ಪಡೆ, ನಾಗರಿಕ ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ ಪುರುಷ, ಅಬಕಾರಿ ದಳ, ಅರಣ್ಯ ಇಲಾಖೆ, ಮಂಡ್ಯ ವಿವಿ ಸರ್ಕಾರಿ ಬಾಲಕರ ಕಾಲೇಜು (ಎನ್‌ಸಿಸಿ), ಮಂಡ್ಯ ವಿವಿ ಸರ್ಕಾರಿ ಬಾಲಕಿಯರ ಕಾಲೇಜು (ಎನ್‌ಸಿಸಿ), ಪಿಇಎಸ್ ಬಾಲಕರ ಕಾಲೇಜು (ಎನ್‌ಸಿಸಿ), ಪಿಇಎಸ್ ಬಾಲಕಿಯ ಕಾಲೇಜು (ಎನ್‌ಸಿಸಿ), ಅನಿಕೇತನ ಪ್ರೌಢಶಾಲೆ (ಎನ್‌ಸಿಸಿ ಬಾಲಕರ ತಂಡ), ರೋಟರಿ ಪ್ರೌಢಶಾಲೆ (ಸ್ಕೌಟ್ಸ್ ಗೈಡ್ಸ್) ಬಾಲಕಿಯರ ತಂಡ, ಲಕ್ಷ್ಮೀಜನಾರ್ದನ (ಸ್ಕೌಟ್ಸ್‌ಗೈಡ್ಸ್), ಬಾಲಕಿಯರ ತಂಡ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ, ಬಾಲಕಿಯರ ತಂಡ, ಡ್ಯಾಫೋಡಿಲ್ಸ್ ಪ್ರೌಢಶಾಲೆ ಬಾಲಕರ ತಂಡ, ಆದರ್ಶ ಪ್ರೌಢ ಶಾಲೆ ಬಾಲಕಿಯರ ತಂಡ, ಸೆಂಟ್ ಜೋಸೆಫ್ ಪ್ರೌಢ ಶಾಲೆ ಬಾಲಕಿಯರ ತಂಡ, ಕರ್ನಾಟಕ ಪಬ್ಲಿಕ್ ಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರಾಥಮಿಕ ಶಾಲೆ ಬಾಲಕಿಯರ ತಂಡ, ಸೆಂಟ್ ಜೋಸೆಫ್ ಶಾಲೆ ಪ್ರಾಥಮಿಕ ಬಾಲಕಿಯರ ತಂಡದ ತುಕಡಿಗಳು ಭಾಗವಹಿಸಿದ್ದವು. ಬಹುಮಾನ ವಿಜೇತರು ಇಲಾಖೆ ವಿಭಾಗದಲ್ಲಿ ಅಬಕಾರಿ-ಪ್ರಥಮ, ಗೃಹವರಕ್ಷಕ ದಳ ದ್ವಿತೀಯ, ಅರಣ್ಯ ಇಲಾಖೆ-ತೃತೀಯ. ಎನ್‌ಸಿಸಿ ವಿಭಾಗದಲ್ಲಿ ಸರ್ಕಾರಿ ಬಾಲಕಿಯರ ಕಾಲೇಜು (ಪ್ರಥಮ), ಸರ್ಕಾರಿ ಬಾಲಕರ ಕಾಲೇಜು (ದ್ವಿತೀಯ), ಪಿಇಎಸ್ ಬಾಲಕರ ಕಾಲೇಜು (ತೃತೀಯ). ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಕಾರ್ಮೆಲ್ ಪ್ರೌಢಶಾಲೆ (ಪ್ರಥಮ), ರೋಟರಿ ಪ್ರೌಢಶಾಲೆ (ದ್ವಿತೀಯ), ಆದರ್ಶ ಪ್ರೌಢಶಾಲೆ (ತೃತೀಯ). ಶಾಲಾ ವಿಭಾಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಥಮ), ಕಾರ್ಮಲ್ ಪ್ರಾಥಮಿಕ ಶಾಲೆ (ದ್ವಿತೀಯ), ಸೆಂಟ್ ಜೋಸಫ್ ಬಾಲಕಿಯರ ಪ್ರೌಢಶಾಲೆ (ತೃತೀಯ), ಲಕ್ಷ್ಮೀ ಜನಾರ್ಧನ ಪ್ರೌಢಶಾಲೆ ಸಮಾಧಾನಕರ ಬಹುಮಾನ ಪಡೆಯಿತು. ಭುವನೇಶ್ವರಿ ಮೆರವಣಿಗೆಗೆ ಜಿಲ್ಲಾಧಿಕಾರಿ ಚಾಲನೆ ೬೮ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರ ಗೃಹ ಕಚೇರಿಯಿಂದ ತಾಯಿ ಭುವನೇಶ್ವರಿ ರಥಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಚಾಲನೆ ನೀಡಿದರು. ಮೆರವಣಿಗೆಗೆ ಮೆರಗು ಚೆಲ್ಲಲು ಕಲಾ ತಂಡಗಳಾದ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ಪೂರ್ಣ ಕುಂಭ, ಸ್ತಬ್ಧ ಚಿತ್ರಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಹಾಗೂ ಇನ್ನಿತರ ಇಲಾಖೆಯ ಸ್ತಬ್ಧ ಚಿತ್ರಗಳು ಭಾಗಿಯಾಗಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಇತರರಿದ್ದರು.