ಗದಗ: ಗದಗ ಉಪವಿಭಾಗದ ಡಿಎಸ್‌ಪಿ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 2.36 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ.
ಈ ಹಿಂದೆ ಲಕ್ಷ್ಮೇಶ್ವರ ನಗರದ ಮುಕ್ತಿನಗರ ಪ್ರದೇಶದಲ್ಲಿ ಗಾಂಜಾ ಮಾರಾಟ ಹಾಗೂ ಸಾಗಾಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಸವರಾಜ ಉಪ್ಪಾರ ಹಾಗೂ ಸಾದಿಕ್ ರಿಯಾಜ್ ಅಹ್ಮದ್ ಎಂಬವರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ(ಅಪರಾಧ ಸಂಖ್ಯೆ 117/2026ರಡಿ) ಎನ್‌ಡಿಪಿಎಸ್ ಕಾಯ್ದೆ, 1985ರ ಕಲಂ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಗುರುವಾರ ಗದಗದಿಂದ ಲಕ್ಷ್ಮೇಶ್ವರ ಕಡೆಗೆ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಾಗರಾಜ ದೊಡ್ಡಪ್ಪ ಮುತಗಾರ, ಪ್ರಶಾಂತ ಕರಿಯಪ್ಪ ಕಟಗೇರಿ ಹಾಗೂ ಗಂಗಪ್ಪ ಬಾಬು ನಾರಾಯಣ ಚವ್ಹಾಣ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಟ್ಟು 2.36 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 101825 ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಕಾಯ್ದೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ವ್ಯಾಪಾರಸ್ಥರ ಜತೆ ಚರ್ಚಿಸದೇ ಬಾಡಿಗೆ ನಿಗದಿ: ಆರೋಪನರಗುಂದ: ನೂತನ ಮಾರುಕಟ್ಟೆಯಲ್ಲಿನ ಅಂಗಡಿಗಳ ಬಾಡಿಗೆ ಬಗ್ಗೆ ಪುರಸಭೆ ಅಧಿಕಾರಿಗಳು ಬೀದಿಬದಿ ವ್ಯಾಪಾರಸ್ಥರ ಜತೆ ಚರ್ಚಿಸದೇ ಬಾಡಿಗೆ ಮತ್ತು ಠೇವಣಿ ನಿಗದಿ ಮಾಡಿದ್ದು ಖಂಡನೀಯ ಎಂದು ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘ ತಾಲೂಕು ಘಟಕ ಪದಾಧಿಕಾರಿಗಳು ಆರೋಪಿಸಿದರು.ಗುರುವಾರ ಪುರಸಭೆ ಆಗಮಿಸಿ ಅಧಿಕಾರಿಗೆ ಮನವಿ ನೀಡಿ ಮಾತನಾಡಿ, ನೂತನ ತರಕಾರಿ ಮಾರುಕಟ್ಟೆಗೆ ನಿಗದಿಪಡಿಸಿದ ಠೇವಣಿ ಮತ್ತು ಬಾಡಿಗೆಯು ಬೀದಿಬದಿ ವ್ಯಾಪಾರಿಗಳು ಸಣ್ಣ ವ್ಯಾಪಾರಸ್ಥರು ಆಗಿದ್ದರಿಂದ, ಭರಿಸಲು ಹೊರೆಯಾಗುತ್ತದೆ. ಅತಿಯಾಗಿ ಬಾಡಿಗೆ ಮತ್ತು ಠೇವಣಿ ತುಂಬಲು ಹೊರೆಯಾಗುತ್ತದೆ. ಪಟ್ಟಣ ಮಾರಾಟ ಸಮಿತಿಯೊಂದಿಗೆ ಮತ್ತು ವ್ಯಾಪಾರಸ್ಥರೊಂದಿಗೆ ಚರ್ಚೆ ಮಾಡಿ ದರ ನಿಗದಿಪಡಿಸಬೇಕೆಂದು ಆಗ್ರಹಿಸಿದರು.ಗದಗ- ಬೆಟಗೇರಿಯ ತರಕಾರಿ ಮಾರುಕಟ್ಟೆಯಲ್ಲಿ ನಿಗದಿಪಡಿಸಿದಂಥ ಬಾಡಿಗೆಯನ್ನು ನರಗುಂದ ಪುರಸಭೆ ಅಧಿಕಾರಿಗಳು ನಿಗದಿ ಪಡಿಸಬೇಕೆಂದು ಮನವಿ ಮಾಡಿಕೊಂಡರು.
ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಅವರು ಬೀದಿ ವ್ಯಾಪಾರಸ್ಥರು ಮನವಿ ಸ್ವೀಕರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಬಸವರಾಜ ತಾವರೆ, ವಿ.ಎಂ. ಪಠಾಣ, ಶಿವರಾಜ ನಾಗಠಾಣ, ಎಸ್.ಎಂ. ನಾಲಬಂದ, ಮುಬರಕ ಕಲಬುರ್ಗಿ, ಮಂಜುನಾಥ ಕುಂಕುವಗಾರ, ಫಕೀರಮ್ಮ ಮೇಲಿನಮನಿ ಸೇರಿದಂತೆ ಮುಂತಾದವರು ಇದ್ದರು.