ಮಂಗಳೂರು ದಕ್ಷಿಣದಲ್ಲಿ 2.49 ಲಕ್ಷ ಮತದಾರರು: ಸಹಾಯಕ ಚುನಾವಣಾಧಿಕಾರಿ

| Published : Mar 19 2024, 12:49 AM IST

ಮಂಗಳೂರು ದಕ್ಷಿಣದಲ್ಲಿ 2.49 ಲಕ್ಷ ಮತದಾರರು: ಸಹಾಯಕ ಚುನಾವಣಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,18,875 ಮಂದಿ ಪುರುಷ ಮತದಾರರು, 130093 ಮಹಿಳೆಯರು, 47 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಈ ಪೈಕಿ 3,925 ಮಂದಿ ಯುವ ಮತದಾರರು, 6,906 ಮಂದಿ 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿದ್ದಾರೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಬರುವ ಲೋಕಸಭಾ ಚುನಾವಣೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2,49,015 ಮಂದಿ ಮತದಾರಿದ್ದಾರೆ (ಮಾ.15ರ ಅಂಕಿಅಂಶದಂತೆ) ಎಂದು ಸಹಾಯಕ ಚುನಾವಣಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ) ಗಿರೀಶ್‌ ನಂದನ್‌ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 1,18,875 ಮಂದಿ ಪುರುಷ ಮತದಾರರು, 130093 ಮಹಿಳೆಯರು, 47 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಈ ಪೈಕಿ 3,925 ಮಂದಿ ಯುವ ಮತದಾರರು, 6,906 ಮಂದಿ 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿದ್ದಾರೆ ಎಂದು ವಿವರ ನೀಡಿದರು.

2 ಸೂಕ್ಷ್ಮ ಮತಗಟ್ಟೆ:

ಕ್ಷೇತ್ರದಲ್ಲಿ 249 ಮತಗಟ್ಟೆಗಳಿವೆ. ಕಸಬಾ ಬೆಂಗ್ರೆ, ವೀರನಗರ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದರು.

ನೀತಿ ಸಂಹಿತೆ ಜಾರಿ ಆಗಿರುವುದರಿಂದ ರಾಜಕೀಯ ಸಹಿತ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಅನುಮತಿ ಪಡೆಯುವುದು ಕಡ್ಡಾಯ. ಈಗಾಗಲೇ ಬ್ಯಾನರ್‌, ಫ್ಲೆಕ್ಸ್‌ಗಳನ್ನು ತೆರವು ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅನುಮತಿ ಪಡೆದು ಬ್ಯಾನರ್‌ ಅಳವಡಿಸಬಹುದು. ಫ್ಲೈಯಿಂಗ್‌ ಸ್ಕಾಡ್‌, ಕಣ್ಗಾವಲು ತಂಡ, ಸೆಕ್ಷನ್‌ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ಆಡಂಕುದ್ರು, ನಂತೂರು, ಕೊಟ್ಟಾರಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಸಹಿತ ಯಾವುದೇ ಮಾಹಿತಿಗೆ 0824-2220330ಗೆ ಕರೆ ಮಾಡಬಹುದು ಎಂದು ಗಿರೀಶ್‌ ನಂದನ್‌ ತಿಳಿಸಿದರು.ಅಧಿಕಾರಿಗಳಾದ ದೇವೇಂದ್ರಪ್ಪ, ಗುರುರಾಜ್‌ ಇದ್ದರು.