ಬಿಬಿಎಂಪಿ ವ್ಯಾಪ್ತಿಯಲ್ಲಿ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ : ಮುನೀಶ್ ಮೌದ್ಗಿಲ್

| N/A | Published : Mar 21 2025, 12:30 AM IST / Updated: Mar 21 2025, 09:02 AM IST

ಬಿಬಿಎಂಪಿ ವ್ಯಾಪ್ತಿಯಲ್ಲಿ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ : ಮುನೀಶ್ ಮೌದ್ಗಿಲ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಸರಾಸರಿ 2 ದಿನದಲ್ಲಿ ಅಂತಿಮ ಇ-ಖಾತಾ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

 ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಸರಾಸರಿ 2 ದಿನದಲ್ಲಿ ಅಂತಿಮ ಇ-ಖಾತಾ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ಕರಡು ಇ-ಖಾತೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಈವರೆಗೆ 2.87 ಲಕ್ಷ ಆಸ್ತಿ ಮಾಲೀಕರು ಅಂತಿಮ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 2,71,927 ಅಂತಿಮ ಇ-ಖಾತಾ ವಿತರಿಸಲಾಗಿದೆ. ಅರ್ಜಿ ಸಲ್ಲಿಸಿದ 2 ದಿನಗಳಲ್ಲಿ ಸರಾಸರಿ ಅಂತಿಮ ಇ-ಖಾತ ನೀಡಲಾಗುತ್ತಿದ್ದು, ನಾಗರಿಕರು ತಕ್ಷಣ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ.

https://BBMPeAasthi.karnataka.gov.in ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಕೂಡಲೇ ಅಂತಿಮ ಇ-ಖಾತಾಗಾಗಿ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಹಾಗೂ ಕೇಸ್ ವರ್ಕರ್‌ಗಳು ನಾಗರಿಕರು ಇ-ಖಾತಾಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಕೂಡಲೆ ಅಂತಿಮ ಇ-ಖಾತಾ ಸಿಗುವ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇ-ಖಾತಾ ಪಡೆಯಲು ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡದೆ, ಯಾವುದೇ ಕಚೇರಿಗಳಿಗೆ ತೆರಳದೆ ಸಹಾಯ ಮಾಡಲು ಪಾಲಿಕೆಯ ಕಂದಾಯ ವಿಭಾಗದೊಂದಿಗೆ ಕೈಜೋಡಿಸಬೇಕು. ಇ-ಖಾತಾ ಅರ್ಜಿಗಳ ವಿಲೆವಾರಿಗೆ ಸಂಬಂಧಿಸಿದಂತೆ ಎಲ್ಲಾ 8 ವಲಯಗಳು ಮತ್ತು ಎಲ್ಲಾ 64 ಸಹಾಯಕ ಕಂದಾಯ ಅಧಿಕಾರಿಗಳ ಜತೆಗೆ ಪ್ರತಿ ದಿನ ವರ್ಚ್ಯುವಲ್ ಮೂಲಕ ಸಭೆ ನಡೆಸಿ, ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲಿಸಲಾಗುತ್ತಿದ್ದು, ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿದರು.

ಅಂತಿಮ ಇ-ಖಾತಾ ವಿತರಣೆ ವಿವರ

ವಲಯಅಂತಿಮ ಇ-ಖಾತಾ ಸಂಖ್ಯೆ

ಮಹದೇವಪುರ37,793

ದಕ್ಷಿಣ37,738

ಪಶ್ಚಿಮ27,020

ಬೊಮ್ಮನಹಳ್ಳಿ46,025

ದಾಸರಹಳ್ಳಿ16,818

ಪೂರ್ವ25,848

ಯಲಹಂಕ38,494

ಆರ್‌ಆರ್‌ ನಗರ42,191

ಒಟ್ಟು2,71,927