ವಿದ್ಯುತ್‌ ತಗುಲಿ 2 ಕೋತಿಗಳು ಬಲಿ

| Published : Jul 20 2024, 01:46 AM IST

ಸಾರಾಂಶ

ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ತಾಯಿ ಕರಿ ಮುಷ್ಯಾ (ಕರಿ ಮುಸುವ) ಮತ್ತು ಅದರ ಮರಿಯನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಅಂತ್ಯಕ್ರಿಯೆ ನೆರೆವೇರಿಸಿದ ಘಟನೆ ನಗರದ ಹೊರವಲಯದ ಹಳೇ ಕುಂದುವಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

- ಹಳೇ ಕುಂದುವಾಡದಲ್ಲಿ ಘಟನೆ । ಮೆರವಣಿಗೆ ನಡೆಸಿ, ಅಂತ್ಯಕ್ರಿಯೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ತಾಯಿ ಕರಿ ಮುಷ್ಯಾ (ಕರಿ ಮುಸುವ) ಮತ್ತು ಅದರ ಮರಿಯನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಅಂತ್ಯಕ್ರಿಯೆ ನೆರೆವೇರಿಸಿದ ಘಟನೆ ನಗರದ ಹೊರವಲಯದ ಹಳೇ ಕುಂದುವಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ತಾಯಿ ಕರಿ ಮುಷ್ಯಾ ತನ್ನ ಮರಿಯಯನ್ನು ಎದೆಗವುಚಿಕೊಂಡಿದ್ದ ವೇಳೆಯಲ್ಲೇ ವಿದ್ಯುತ್‌ ತಂತಿ ತಗುಲಿದೆ. ಪರಿಣಾಮ ಸಾವನ್ನಪ್ಪಿವೆ. ಮುಷ್ಯಾಗಳ ದಾರುಣ ಸಾವು ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು.

ಅನಂತರ ಗ್ರಾಮಸ್ಥರು, ಮಕ್ಕಳು, ಯುವಕರು, ಮಹಿಳೆಯರು ಸೇರಿಕೊಂಡು ಮೃತ ತಾಯಿ ಮುಷ್ಯಾ ಮತ್ತು ಅದರ ಮರಿಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಜೈ ಭಜರಂಗಿ ಎಂದು ಘೋ ಷಣೆಗಳನ್ನು ಮೊಳಗಿಸುತ್ತಾ ಸಾಗಿದರು. ಅನಂತರ ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ನಡೆಸಿದರು. ಹಳೇ ಕುಂದುವಾಡ ಗ್ರಾಮಸ್ಥರು, ಯುವಕರ ವಾನರಪ್ರೀತಿ, ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

- - - -19ಕೆಡಿವಿಜಿ9: ಕುಂದುವಾಡದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕರಿ ಮುಷ್ಯಾ, ಮರಿ ಮುಷ್ಯಾ.

-19ಕೆಡಿವಿಜಿ7, 8: ದಾವಣಗೆರೆಯ ಹಳೇ ಕುಂದುವಾಡದಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ಕರಿ ಮುಷ್ಯಾ ಮತ್ತು ಮರಿ ಮುಷ್ಯಾ ಶವಗಳಿಗೆ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಪೂಜೆ ಜಿಸಿ, ಮೆರವಣಿಗೆ ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು.